ತೆಲಂಗಾಣದಲ್ಲಿ 1000 ವರ್ಷ ಹಳೆಯ ಕನ್ನಡ ಶಿಲ್ಪ ಪತ್ತೆ: ಜೈನ ತೀರ್ಥಂಕರರ ಶಿಲ್ಪ, ಶಾಸನ ಹೊಂದಿರುವ ಕಂಬ!

By Kannadaprabha News  |  First Published Jun 29, 2023, 9:21 AM IST

ಎರಡೂ ಸ್ಲಾಬ್‌ಗಳ ಮೇಲೆ ತೆಲುಗು - ಕನ್ನಡ ಲಿಪಿಯಲ್ಲಿ ಶಾಸನಗಳಿವೆ. ಆದರೆ ಅವುಗಳನ್ನು ಗ್ರಾಮದ ತೊಟ್ಟಿಯ ತೂಬಿನ ಗೋಡೆಗಳಲ್ಲಿ ಅಳವಡಿಸಿರುವುದರಿಂದ ಅರ್ಥೈಸಲು ಸಾಧ್ಯವಾಗುತ್ತಿಲ್ಲ. ತೂಬಿನಿಂದ ಕಲ್ಲಿನ ಸ್ಲಾಬ್‌ಗಳನ್ನು ಹೊರತೆಗೆದಾಗ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದಿದ್ದಾರೆ.


ಹೈದರಾಬಾದ್‌ ( ಜೂನ್ 29, 2023):  9 - 10ನೇ ಶತಮಾನದ ಜೈನ ಮಠವೊಂದರ ಅಸ್ತಿತ್ವ ತೋರಿಸುವ ಜೈನ ತೀರ್ಥಂಕರರ ಶಿಲ್ಪಗಳು ಮತ್ತು ಶಾಸನಗಳನ್ನು ಹೊಂದಿರುವ ಎರಡು ಚೌಕಾಕಾರದ ಕಂಬಗಳು ಇತ್ತೀಚೆಗೆ ಹೈದರಾಬಾದ್‌ನ ಹೊರವಲಯದ ಹಳ್ಳಿಯೊಂದರಲ್ಲಿ ಪತ್ತೆಯಾಗಿವೆ. ಯುವ ಪುರಾತತ್ವಶಾಸ್ತ್ರಜ್ಞ ಪಿ. ಶ್ರೀನಾಥ್‌ ರೆಡ್ಡಿ ಅವರು ನೆರೆಯ ರಂಗಾ ರೆಡ್ಡಿ ಜಿಲ್ಲೆಯ ಮೊಯಿನಾಬಾದ್‌ ಮಂಡಲದ ಎನಿಕೆಪಲ್ಲಿ ಗ್ರಾಮದಲ್ಲಿ ಎರಡು ಕಂಬಗಳ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ನಂತರ ಖ್ಯಾತ ಪುರಾತತ್ವಶಾಸ್ತ್ರಜ್ಞ ಇ. ಶಿವನಾಗಿ ರೆಡ್ಡಿ ಅವರು ಸ್ಥಳ ಪರಿಶೀಲಿಸಿದರು.

ಎರಡು ಸ್ತಂಭದಲ್ಲಿ ಒಂದು ಗ್ರಾನೈಟ್‌ನದ್ದು ಮತ್ತು ಇನ್ನೊಂದು ಕಪ್ಪು ಬಸಾಲ್ಟ್‌ನದ್ದು. ಇವು ನಾಲ್ಕು ಜೈನ ತೀರ್ಥಂಕರರನ್ನು ಹೊಂದಿವೆ. ಅವರೆಂದರೆ ಆದಿನಾಥ, ನೇಮಿನಾಥ, ಪಾರ್ಶ್ವನಾಥ ಮತ್ತು ವರ್ಧಮಾನ ಮಹಾವೀರರು. ಕಂಬದ ನಾಲ್ಕೂ ಬದಿಗಳಲ್ಲಿ ಒಬ್ಬೊಬ್ಬರು ಧ್ಯಾನದಲ್ಲಿ ಕುಳಿತಿದ್ದಾರೆ ಮತ್ತು ಮೇಲ್ಭಾಗದಲ್ಲಿ ’ಕೀರ್ತಿಮುಖ’ಗಳಿಂದ ಅಲಂಕರಿಸಲಾಗಿದೆ ಎಂದು ಶಿವನಾಗಿ ರೆಡ್ಡಿ ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: Inscriptions: ಅಗಳಗಂಡಿ ಮಕ್ಕಳಿಂದ ಶಾಸನೋಕ್ತ ವೀರಗಲ್ಲು ಪತ್ತೆ!

ಇದೇ ವೇಳೆ, ಎರಡೂ ಸ್ಲಾಬ್‌ಗಳ ಮೇಲೆ ತೆಲುಗು - ಕನ್ನಡ ಲಿಪಿಯಲ್ಲಿ ಶಾಸನಗಳಿವೆ. ಆದರೆ ಅವುಗಳನ್ನು ಗ್ರಾಮದ ತೊಟ್ಟಿಯ ತೂಬಿನ ಗೋಡೆಗಳಲ್ಲಿ ಅಳವಡಿಸಿರುವುದರಿಂದ ಅರ್ಥೈಸಲು ಸಾಧ್ಯವಾಗುತ್ತಿಲ್ಲ. ತೂಬಿನಿಂದ ಕಲ್ಲಿನ ಸ್ಲಾಬ್‌ಗಳನ್ನು ಹೊರತೆಗೆದಾಗ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದಿದ್ದಾರೆ.

‘ಆದರೂ ಶಾಸನವೊಂದರ ಕೆಲ ಭಾಗ ಗೋಚರಿಸುತ್ತಿದ್ದು, ಅದು ರಾಷ್ಟ್ರಕೂಟ ಮತ್ತು ವೇಮುಲವಾಡ ಚಾಲುಕ್ಯರ ಕಾಲದಲ್ಲಿ (9ನೇ - 10ನೇ ಶತಮಾನ) ಪ್ರಮುಖ ಜೈನ ಕೇಂದ್ರವಾಗಿದ್ದ ಮಂಡಲದ ಚಿಲುಕೂರು ಗ್ರಾಮದ ಸಮೀಪದಲ್ಲಿರುವ ’ಜನಿನ ಬಸದಿ’ಯನ್ನು (ಮಠವನ್ನು) ಉಲ್ಲೇಖಿಸುತ್ತದೆ. ಚಿಲುಕೂರಿನ ಬಳಿ ಸುಮಾರು 1,000 ವರ್ಷಗಳ ಹಿಂದೆ ಜೈನ ಮಠ ಅಸ್ತಿತ್ವದಲ್ಲಿತ್ತು ಎಂದು ನಾವು ಹೇಳಬಹುದು’ ಎಂದು ಶಿವನಾಗಿ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿಯ ಅಡ್ಕದಕಟ್ಟೆಯ ಬಳಿ ತ್ರಿಕೋನಾಕಾರದ ಶಾಸನ ಪತ್ತೆ!

ಸುಮಾರು 100 ವರ್ಷಗಳ ಹಿಂದೆ ಜೈನ ತೀರ್ಥಂಕರರ ಚಪ್ಪಡಿಗಳನ್ನು ಸ್ಥಳೀಯ ಶಿಥಿಲಗೊಂಡ ಜೈನ ದೇವಾಲಯದಿಂದ ತಂದು ತೂಬಿಗೆ ಅಳವಡಿಸಿರಬಹುದು ಎಂದು ಶಿವನಾಗಿ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿ: ಬನ್ನಂಜೆಯಲ್ಲಿ ಅಪರೂಪದ ಐತಿಹಾಸಿಕ ಕಲ್ಲಿನ ರಚನೆ ಪತ್ತೆ!

click me!