ಕಾಂಗ್ರೆಸ್‌ ಕಚೇರಿಯಲ್ಲಿ ಬಕ್ರೀದ್‌ ಪ್ರಾರ್ಥನೆಗೆ ಅವಕಾಶ ನೀಡಿ, ಎಐಎಂಐಎಂ ನಾಯಕನ ಪತ್ರ!

By Santosh NaikFirst Published Jun 28, 2023, 10:27 PM IST
Highlights

ಬಕ್ರೀದ್ ಎಂದು ಕರೆಯಲ್ಪಡುವ ಈದ್-ಉಲ್-ಅಧಾ ಹಬ್ಬವನ್ನು ಗುರುವಾರ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಇದೇ ವೇಳೆ ಕಾಂಗ್ರೆಸ್‌ ಕಚೇರಿಯಲ್ಲಿ ಬಕ್ರೀದ್‌ ಆಚರಣೆಗೆ ಎಐಎಂಐಎಂ ನಾಯಕ ಪತ್ರ ಬರೆದಿದ್ದಾರೆ.

ನವದೆಹಲಿ ಜೂ.28):  ಭೋಪಾಲ್‌ನಲ್ಲಿರುವ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಕಚೇರಿಯಲ್ಲಿ ಬಕ್ರೀದ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖಂಡರೊಬ್ಬರು ಬುಧವಾರ ಅನುಮತಿ ಕೋರಿದ್ದಾರೆ.  ಎಐಎಂಐಎಂನ ಮಧ್ಯಪ್ರದೇಶ ಘಟಕದ ಕಾರ್ಯದರ್ಶಿ ಪೀರ್ಜಾದಾ ತೌಕೀರ್ ನಿಜಾಮಿ ಅವರು ಈ ಕುರಿತು ಕಾಂಗ್ರೆಸ್ ಹಿರಿಯ ಮತ್ತು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.  "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷವನ್ನು 'ಮೊಹಬ್ಬತ್ ಕಿ ದುಕಾನ್' (ಪ್ರೀತಿಯ ಅಂಗಡಿ) ಎಂದು ಕರೆಯುತ್ತಾರೆ. ಎಂಪಿಸಿಸಿ ಕಚೇರಿಯಲ್ಲಿ ಬಕ್ರೀದ್ ಆಚರಿಸಲು ಅನುಮತಿ ನೀಡುವಂತೆ ಜಾತ್ಯತೀತ ಎಂದು ಕರೆಸಿಕೊಳ್ಳುವ ದಿಗ್ವಿಜಯ ಸಿಂಗ್ ಅವರಿಗೆ ಮನವಿ ಮಾಡಿದ್ದೇನೆ ಎಂದು ಪೀರ್ಜಾದಾ ತಿಳಿಸಿದ್ದಾರೆ.

 

Bakrid: ಸರ್ಕಾರದ ಪ್ರಾಣಿಬಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ: ಮುಸ್ಲಿಂ ಸಮುದಾಯಕ್ಕೆ ಜಮಿಯತ್ ಮನವಿ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ, "ಹುಸಿ ಜಾತ್ಯತೀತ ನಿಲುವನ್ನು ಅನುಸರಿಸುವಾಗ ಹಿಂದೂ ಮತ್ತು ಹಿಂದುತ್ವದ ವಿರುದ್ಧ ಮಾತನಾಡುತ್ತಿರುವ ದಿಗ್ವಿಜಯ ಸಿಂಗ್ ಅವರಿಗೆ ಇದು ಆಗಬೇಕಾಗಿತ್ತು. ಈಗ ಅವರು ಎಐಎಂಐಎಂ ಬೇಡಿಕೆಗೆ ಸ್ಪಂದಿಸಬೇಕು" ಎಂದು ಹೇಳಿದ್ದಾರೆ. ಬಕ್ರೀದ್ ಎಂದು ಕರೆಯಲ್ಪಡುವ ಈದ್-ಉಲ್-ಅಧಾ ಹಬ್ಬವನ್ನು ಗುರುವಾರ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ.

ಬಕ್ರೀದ್‌, ರಂಜಾನ್‌ ಬಿಟ್ಟು ಬೇರೆದಿನ ಆಚರಣೆಯಿಲ್ಲ: ಈದ್ಗಾ ಮೈದಾನ ಸಂಬಂಧ ಕೋರ್ಟ್‌ ಆದೇಶ

click me!