ಮುಂದಿನ ತಿಂಗಳು ಗುಜರಿಗೆ ಸೇರಲಿದೆ ಐಎನ್‌ಎಸ್‌ ವಿರಾಟ್‌!

By Suvarna NewsFirst Published Aug 26, 2020, 8:28 AM IST
Highlights

ಮುಂದಿನ ತಿಂಗಳು ಗುಜರಿಗೆ ಸೇರಲಿದೆ ಐಎನ್‌ಎಸ್‌ ವಿರಾಟ್‌| ಸೇನೆಯಲ್ಲಿ 30 ವರ್ಷ ಸೇವೆ ಬಳಿಕ 3 ವರ್ಷದ ಹಿಂದೆ ನಿವೃತ್ತಿ ಆಗಿದ್ದ ನೌಕೆ

ಅಹಮದಾಬಾದ್(ಆ.26)‌: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷ ಸೇವೆ ಸಲ್ಲಿಸಿ 3 ವರ್ಷದ ಹಿಂದಷ್ಟೇ ನಿವೃತ್ತಿಯಾಗಿದ್ದ ಐಎನ್‌ಎಸ್‌ ವಿರಾಟ್‌ ನೌಕೆ ಮುಂದಿನ ತಿಂಗಳು ಗುಜರಿ ಸೇರಲಿದೆ. ನೌಕೆಯನ್ನು ಒಡೆಯಲು ಅದನ್ನು ಮುಂಬೈನಿಂದ ಗುಜರಾತ್‌ನ ಭಾವನಗರ ಜಿಲ್ಲೆಯ ಅಲಾಂಗ್‌ನಲ್ಲಿರುವ ಅತ್ಯಾಧುನಿಕ ಹಡಗು ಒಡೆಯುವ ಕೇಂದ್ರಕ್ಕೆ ಸಾಗಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1987ರಲ್ಲಿ ನೌಕಾಪಡೆಗೆ ಸೇರ್ಪಡೆ ಆದ ಐಎನ್‌ಎಸ್‌ ವಿರಾಟ್‌ ವಿಶ್ವದಲ್ಲೇ ಅತೀ ದೀರ್ಘಕಾಲ ಸೇವೆ ಸಲ್ಲಿಸಿದ ಗಿನ್ನೆಸ್‌ ದಾಖಲೆಯನ್ನು ಸಹ ನಿರ್ಮಿಸಿದೆ. ಈ ನೌಕೆಯನ್ನು ಶ್ರೀರಾಮ್‌ ಗ್ರೂಪ್‌ 38.54 ಕೋಟಿ ರು.ಗೆ ಪಡೆದುಕೊಂಡಿದೆ. ಮುಂದಿನ 9 ರಿಂದ 12 ತಿಂಗಳಲ್ಲಿ ಯುದ್ಧನೌಕೆಯನ್ನು ಒಡೆದು ಗುಜರಿಗೆ ಹಾಕಲಾಗುತ್ತದೆ. 27,800 ಟನ್‌ ತೂಕ ಇರುವ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ನೌಕಾಪಡೆಯ ಅನುಮತಿಯೊಂದಿಗೆ ಗುಜರಿಗೆ ಹಾಕುವುದಾಗಿ ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪ್ರಕಟಿಸಿತ್ತು.

1959ರಿಂದ 1984ರವರೆಗೆ ಬ್ರಿಟಿಷ್‌ ನೌಕಾ ಪಡೆಯಲ್ಲಿ ಎನ್‌ಎಮ್‌ಎಸ್‌ ಹಮ್ಸ್‌ರ್‍ ನೌಕೆಯಾಗಿ ಐಎನ್‌ಎಸ್‌ ವಿರಾಟ್‌ ಕಾರ್ಯನಿರ್ವಹಿಸಿತ್ತು. 1982ರಲ್ಲಿ ರಾಯಲ್‌ ಬ್ರಿಟೀಷ್‌ ನೇವಿ ಪರವಾಗಿ ಅರ್ಜಂಟೀನಾ ವಿರುದ್ಧ ಫಾಲ್‌್ಕಲ್ಯಾಂಡ್ಸ್‌ ಯುದ್ಧವನ್ನು ಗೆದ್ದ ಹೆಗ್ಗಳಿಕೆ ಐಎನ್‌ಎಸ್‌ ವಿರಾಟ್‌ ನೌಕೆಗೆ ಇದೆ. ಬಳಿಕ 80ರ ದಶಕದಲ್ಲಿ ಈ ನೌಕೆಯನ್ನು ಭಾರತ ಖರೀದಿಸಿತ್ತು. 1987 ಮೇ 12ರಂದು ಐಎನ್‌ಎಸ್‌ ವಿರಾಟ್‌ ನೌಕಾ ಪಡೆಗೆ ಸೇರ್ಪಡೆ ಆಗಿತ್ತು.

click me!