ದೇಶದ ನೌಕಾಪಡೆ ಬತ್ತಳಿಕೆಗೆ ‘ವಾಗೀರ್‌’ ಜಲಾಂತರ್ಗಾಮಿ ಬಲ: ಚೀನಾಕ್ಕೆ ಭಾರತ ಟಕ್ಕರ್

Published : Jan 24, 2023, 10:42 AM ISTUpdated : Jan 24, 2023, 10:43 AM IST
ದೇಶದ ನೌಕಾಪಡೆ ಬತ್ತಳಿಕೆಗೆ ‘ವಾಗೀರ್‌’ ಜಲಾಂತರ್ಗಾಮಿ ಬಲ: ಚೀನಾಕ್ಕೆ ಭಾರತ ಟಕ್ಕರ್

ಸಾರಾಂಶ

ನೌಕಾಪಡೆ ಬತ್ತಳಿಕೆಗೆ ‘ವಾಗೀರ್‌’ ಬಲ ಬಂದಿದ್ದು, ಮತ್ತೊಂದು ಜಲಾಂತರ್ಗಾಮಿ ನೌಕೆ ದೇಶದ ಸೇವೆಗೆ ಸಮರ್ಪಣೆಯಾಗಿದೆ. ಈ ಮೂಲಕ ಹಿಂದೂ ಮಹಾಸಾಗರ ಮೇಲೆ ಕಣ್ಣಿಟ್ಟಿರುವ ಚೀನಾಕ್ಕೆ ಭಾರತ ಟಕ್ಕರ್‌ ನೀಡುತ್ತಿದೆ. 

ಮುಂಬೈ (ಜನವರಿ 24, 2023): ಹಿಂದೂ ಮಹಾಸಾಗರದ ಮೇಲೆ ಕಣ್ಣಿಟ್ಟು ಅಲ್ಲಿ ತನ್ನ ಚಟುವಟಿಕೆಯನ್ನು ಚೀನಾ ತೀವ್ರಗೊಳಿಸಿರುವಾಗಲೇ, ಭಾರತೀಯ ಸೇನೆಗೆ ಪ್ರಬಲ ಅಸ್ತ್ರವೊಂದು ಸೇರ್ಪಡೆಯಾಗಿದೆ. ‘ಐಎನ್‌ಎಸ್‌ ವಾಗೀರ್‌’ ಎಂಬ ಜಲಾಂತರ್ಗಾಮಿ ನೌಕೆ (ಸಬ್‌ ಮರೀನ್‌) ಸೋಮವಾರ ನೌಕಾಪಡೆ ಸೇವೆಗೆ ಸಮರ್ಪಣೆಯಾಗಿದೆ. ರಹಸ್ಯವಾಗಿ ಎದುರಾಳಿ ಪಡೆಗಳನ್ನು ನಾಶಗೊಳಿಸುವ ಸಾಮರ್ಥ್ಯ ಹೊಂದಿರುವ ಈ ಸಬ್‌ ಮರೀನ್‌ನಿಂದಾಗಿ ಭಾರತೀಯ ನೌಕಾಪಡೆಯ ಬಲ ಮತ್ತಷ್ಟು  ವೃದ್ಧಿಯಾದಂತಾಗಿದೆ. ವಿಶೇಷ ಎಂದರೆ, ಕಳೆದ 24 ತಿಂಗಳ ಅವಧಿಯಲ್ಲಿ ನೌಕಾಪಡೆ ಸೇರುತ್ತಿರುವ ಮೂರನೇ ಜಲಾಂತರ್ಗಾಮಿ ನೌಕೆ ಇದು. ಫ್ರಾನ್ಸ್‌ನಿಂದ ತಂತ್ರಜ್ಞಾನ ವರ್ಗಾಯಿಸಿಕೊಂಡು ಮುಂಬೈನ ಮಜಗಾಂವ್‌ ಡಾಕ್‌ ಶಿಪ್‌ಬಿಲ್ಡ​ರ್ಸ್‌ ಸಂಸ್ಥೆ ಈ ನೌಕೆಯನ್ನು ನಿರ್ಮಾಣ ಮಾಡಿದೆ.

‘ವಾಗೀರ್‌’ (Vagir) ಎಂದರೆ ಸಮುದ್ರ ಜೀವಿಯಾಗಿರುವ ಸ್ಯಾಂಡ್‌ ಶಾರ್ಕ್ ಎಂದರ್ಥ. ಈ ನೌಕೆ 220 ಅಡಿ ಉದ್ದ, 40 ಅಡಿ ಎತ್ತರವಿದೆ. ನೀರಿನೊಳಗೆ (Under Water) ಸೇರಿದರೆ 50 ದಿನ ಮೇಲೆ ಬರದೆ ಚಲಿಸಬಲ್ಲದು. ನೌಕಾಪಡೆ ಮುಖ್ಯಸ್ಥ (Chief of the Naval Staff) ಅಡ್ಮಿರಲ್‌ ಆರ್‌. ಹರಿಕುಮಾರ್‌ (Admiral R . Harikumar) ಸಮ್ಮುಖ ಈ ನೌಕೆಯನ್ನು ಸೇವೆಗೆ ಸೇರಿಸಿಕೊಳ್ಳಲಾಗಿದೆ. ಈ ನೌಕೆ ಮಾರಕ ವೇದಿಕೆಯಾಗಿದ್ದು, ಬಲಿಷ್ಠ ಶಸ್ತ್ರಾಸ್ತ್ರಗಳು, ಕಣ್ತಪ್ಪಿಸಿ ದಾಳಿ ನಡೆಸುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಇದರಿಂದ ನೌಕಾಪಡೆಯ ದಾಳಿ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದು ಹರಿಕುಮಾರ್‌ ತಿಳಿಸಿದ್ದಾರೆ.

ಇದನ್ನು ಓದಿ: ಗಡ್ಡ, ಪೇಟಾ ಧರಿಸಿದ ಸಿಖ್ಖರು ನೌಕಾಪಡೆಗೆ ಸೇರಬಹುದು: ಅಮೆರಿಕ ಕೋರ್ಟ್ ಮಹತ್ವದ ತೀರ್ಪು

ಫ್ರಾನ್ಸ್‌ (France) ಜತೆ ಒಪ್ಪಂದ ಮಾಡಿಕೊಂಡು ಮುಂಬೈನಲ್ಲಿ ಒಟ್ಟು 6 ಸಬ್‌ ಮರೀನ್‌ಗಳನ್ನು (Sub Marines) ನಿರ್ಮಾಣ ಮಾಡಲು ಭಾರತ ಉದ್ದೇಶಿಸಿದೆ. ಆ ಪೈಕಿ ವಾಗೀರ್‌ ಐದನೆಯದ್ದು. ಮತ್ತೊಂದು ಮುಂದಿನ ವರ್ಷ ಸೇವೆಗೆ ದೊರೆಯಲಿದೆ. 1973ರಿಂದ 2001ರವರೆಗೆ ಭಾರತೀಯ ನೌಕಾಪಡೆಯಲ್ಲಿ ವಾಗೀರ್‌ ಎಂಬ ಸಬ್‌ಮರೀನ್‌ ಸೇವೆ ಸಲ್ಲಿಸಿತ್ತು. ಇದೀಗ ಅದೇ ಹೆಸರನ್ನು ಬಳಸಿಕೊಳ್ಳಲಾಗಿದೆ.

ವಾಗೀರ್‌ ವೈಶಿಷ್ಟ್ಯ
2009ರಿಂದ ವಾಗೀರ್‌ ನೌಕೆಯ ನಿರ್ಮಾಣ ಆರಂಭವಾಗಿತ್ತು. ಕಳೆದ ಫೆಬ್ರವರಿಯಲ್ಲಿ ಅದು ಮೊದಲ ಸಂಚಾರ ಆರಂಭಿಸಿತ್ತು. 11 ತಿಂಗಳ ಕಾಲ ಸಮುದ್ರ ಯಾನ ನಡೆಸಿತ್ತು. 2022ರ ಡಿಸೆಂಬರ್‌ನಲ್ಲಿ ನೌಕಾಪಡೆಗೆ ಹಸ್ತಾಂತರ ಮಾಡಲಾಗಿತ್ತು. ಸಮುದ್ರದಾಳದಿಂದ ನೆಲದ ಮೇಲಿನ ಗುರಿಗಳಿಗೆ ದಾಳಿ ನಡೆಸಲು, ಸಬ್‌ ಮರೀನ್‌ಗಳ ಮೇಲೆ ಎರಗಲು, ಗುಪ್ತಚರ ಮಾಹಿತಿ ಸಂಗ್ರಹಿಸಲು, ಬಾಂಬ್‌ ಇಡಲು, ಸರ್ವೇಕ್ಷಣೆ ಸೇರಿ ಹಲವು ಕೆಲಸಗಳಿಗೆ ಈ ನೌಕೆ ಉಪಯೋಗಕ್ಕೆ ಬರಲಿದೆ.

ಇದನ್ನೂ ಓದಿ: Indian Navy ಯೋಧರ ಭೇಟಿ ಮಾಡಿದ ಚಿರಂಜೀವಿ: ಎನ್‌ಸಿಸಿ ದಿನಗಳ ಮೆಲುಕು ಹಾಕಿದ ಮೆಗಾ ಸ್ಟಾರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!