ಮಕ್ಕಳಾಗುವುದಕ್ಕಾಗಿ ಮಾಂತ್ರಿಕನ ಮಾತು ನಂಬಿ ಜೀವಂತ ಕೋಳಿ ನುಂಗಿದ ವ್ಯಕ್ತಿ ಸಾವು

By Anusha Kb  |  First Published Dec 16, 2024, 4:13 PM IST

ಮಕ್ಕಳಿಲ್ಲದ ವ್ಯಕ್ತಿಯೊಬ್ಬ ಮಂತ್ರವಾದಿಯ ಸಲಹೆಯ ಮೇರೆಗೆ ಜೀವಂತ ಕೋಳಿ ಮರಿಯನ್ನು ನುಂಗಿ ಸಾವನ್ನಪ್ಪಿದ್ದಾನೆ. ಛತ್ತೀಸ್‌ಗಢದಲ್ಲಿ ಈ ಘಟನೆ ನಡೆದಿದೆ.


ರಾಯ್‌ಪುರ: ಮಕ್ಕಳಿಲ್ಲದ ವ್ಯಕ್ತಿಯೊಬ್ಬ ಮಕ್ಕಳಿಲ್ಲದ ಆಸೆಯಿಂದ ಮಂತ್ರವಾದಿಯೊಬ್ಬರ ಬಳಿ ಹೋಗಿದ್ದು, ಇದಗಿ ಸ್ವಲ್ಪ ಹೊತ್ತಿನ ನಂತರ ಆತ ಸಾವನ್ನಪ್ಪಿದ್ದಾನೆ. ಇದಕ್ಕೆ ಕಾರಣವಾಗಿದ್ದು, ಒಂದು ಕೋಳಿ. ಹೌದು ಮಕ್ಕಳಿಲ್ಲವೆಂದು ವ್ಯಕ್ತಿಯೊಬ್ಬ ಪರಿಹಾರಕ್ಕಾಗಿ ಮಾಟ ಮಂತ್ರ ಮಾಡುವವನ ಬಳಿ ಹೋಗಿದ್ದಾನೆ. ಈ ವೇಳೆ ಮಂತ್ರವಾದಿಯ ಸಲಹೆಯಂತೆ ಈತ ಜೀವಂತ ಕೋಳಿ ಮರಿಯನ್ನು ನುಂಗಿದ್ದು, ಅದು ಗಂಟಲಿನಲ್ಲಿ ಸಿಲುಕಿಕೊಂಡಿದೆ ಇದರಿಂದ ಅವನಿಗೆ ಉಸಿರಾಡಲು ಕಷ್ಟವಾಗಿದ್ದು ಅತ ಸಾವನ್ನಪ್ಪಿದ್ದಾನೆ.  ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಛತ್ತೀಸ್‌ಗಢದ ಸರ್ಗುಜಾ ಜಿಲ್ಲೆಯ ದರಿಮಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂದ್ಕಾಲೋ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂತ್ರವಾದಿ ಕೊಟ್ಟ ಕೋಳಿ ಮರಿಯನ್ನು ವ್ಯಕ್ತಿಯೊರ್ವ ಜೀವಂತವಾಗಿ ನುಂಗಿದ್ದು ಅದು ಕತ್ತಿನಲ್ಲಿ ಸಿಲುಕಿ ಆತ ಸಾವನ್ನಪ್ಪಿದ್ದಾನೆ. ಉಸಿರಾಡಲು ಕಷ್ಟಪಡುತ್ತಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ. ಇನ್ನು ವಿಚಿತ್ರ ಎಂದರೆ ಅಸ್ವಸ್ಥಗೊಂಡಿದ್ದ ಈತನನ್ನು ಆಸ್ಪತ್ರೆಗೆ ಕರೆದೊಯ್ದ ಕುಟುಂಬದವರು ಆತ ಬಿದ್ದು ಅಸ್ವಸ್ಥಗೊಂಡಿದ್ದಾನೆ ಎಂದಿದ್ದರು. ಆದರೆ ತಪಾಸಣೆ ಮಾಡಿದ ವೈದ್ಯರು ಆತ ಕೋಳಿ ಮರಿಯನ್ನು ಜೀವಂತವಾಗಿ ನುಂಗಲು ಯತ್ನಿಸಿದ್ದರಿಂದ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ.  ಅಲ್ಲದೇ ವೈದ್ಯರು ಆತನ ಗಂಟಲಿನಲ್ಲಿ ಸಿಲುಕಿದ್ದ ಕೋಳಿ ಮರಿಯನ್ನು ಹೊರತೆಗೆದಿದ್ದಾರೆ. 

Tap to resize

Latest Videos

ಘಟನೆ ಬಗ್ಗೆ ದರಿಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತಿದ್ದಾರೆ. ವಿಚಾರಣೆ ವೇಳೆ ವ್ಯಕ್ತಿಗೆ ಮಕ್ಕಳಿಲ್ಲದ ಕಾರಣ ಆತ ಚಿಂತಿತನಾಗಿದ್ದ ಎಂದು ಕುಟುಂಬದವರು ಹೇಳಿದ್ದಾರೆ. , ಹೀಗೆ ಆತ ಮಂತ್ರವಾದಿಯ ಬಳಿ ಹೋದಾಗ ಮಂತ್ರವಾದಿ ಆತನಿಗೆ ಕೋಳಿ ಮರಿಯನ್ನು ಜೀವಂತವಾಗಿ ತಿನ್ನುವ ಸಲಹೆ ನೀಡಿದ್ದು, ಆತ ಶಾಶ್ವತವಾಗಿ ಬಾರದ ಲೋಕಕ್ಕೆ ತೆರಳಿದ್ದಾನೆ. ಇನ್ನು ಕುಟುಂಬದವರು ಮಾತ್ರ ಮನೆಯ ಸಮೀಪ ಬಾವಿಯೊಂದಿದ್ದು, ಅಲ್ಲಿ ಸ್ನಾನ ಮಾಡಲು ಹೋಗಿದ್ದ ಆತ ವಾಪಸ್ ಬರುವಾಗ ಇದಕ್ಕಿದ್ದಂತೆ ಬಿದ್ದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆತ ಅಲ್ಲಿ ಸಾವನ್ನಪ್ಪಿದ ಎಂದು ಮಾಹಿತಿ ನೀಡಿದ್ದಾರೆ. 

ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪದ ಕುಟುಂಬ

ಇತ್ತ ಮೃತ ವ್ಯಕ್ತಿಯಸಂಬಂಧಿಕರು ವ್ಯಕ್ತಿಯ ಮರಣೋತ್ತರ ಪರೀಕ್ಷೆಗೂ ಒಪ್ಪಿರಲಿಲ್ಲ,  ಆದರೆ ಅಂಬಿಕಾಪುರ ಜಿಲ್ಲಾ ಆಸ್ಪತ್ರೆಯ ವೈದ್ಯರು ಈತನ ಸಾವಿನ ಬಗ್ಗೆ ಅನುಮಾನಪಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ಒಪ್ಪಿದ್ದಾರೆ. ಈ ವೇಳೆ ವೈದ್ಯರಿಗೆ ವ್ಯಕ್ತಿಯ ಗಂಟಲಿನಲ್ಲಿ ಜೀವಂತ ಕೋಳಿಮರಿ ಇರುವುದು ಕಂಡು ಬಂದಿದ್ದು, ವೈದ್ಯರೇ ಬೆಚ್ಚಿ ಬಿದ್ದಿದ್ದರು.
 

click me!