ಕೋವಿಶೀಲ್ಡ್ 2ನೇ ಡೋಸ್ ಅಂತರವನ್ನು 84 ದಿನದಿಂದ 1 ತಿಂಗಳಿಗೆ ಇಳಿಸಿದ ಕೇರಳ ಹೈಕೋರ್ಟ್!

By Suvarna NewsFirst Published Sep 6, 2021, 8:33 PM IST
Highlights
  • ಕೋವಿಶೀಲ್ಡ್ 2ನೇ ಡೋಸ್ ಅಂತರ ಕಡಿತಗೊಳಿಸಿ ಆದೇಶ ನೀಡಿದ ಕೇರಳ ಹೈಕೋರ್ಟ್
  • ಖಾಸಗಿ ಆಸ್ಪತ್ರೆಗಳಲ್ಲಿ ಡೋಸ್ ಪಡೆಯುವ ಮಂದಿಗೆ 4 ವಾರ ಬಳಿಕ 2 ಡೋಸ್
  • ಮಹತ್ವದ ಆದೇಶ ಹೊರಡಿಸಿದ ಕೇರಳ ಹೈಕೋರ್ಟ್

ಕೇರಳ(ಸೆ.06): ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಇದರ ಜೊತೆಗೆ ಲಸಿಕೆ ಅಭಿಯಾನಕ್ಕೂ ವೇಗ ನೀಡಲಾಗಿದೆ. ಆದರೆ ಕೋವಿಶೀಲ್ಡ್ 2ನೇ ಡೋಸ್ ಅಂತರ 84 ದಿನ ಎಂದು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಹೀಗಾಗಿ ಹಲವರಿಗೆ ಡೋಸ್ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಅರಿತ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಕೋವಿಶೀಲ್ಡ್ ಲಸಿಕೆ ಪಡೆಯುವ ವ್ಯಕ್ತಿಗಳಿಗೆ 2ನೇ ಡೋಸ್ ಅಂತರವನ್ನು 84 ದಿನದಿಂದ 1 ತಿಂಗಳಿಗೆ ಇಳಿಸಲಾಗಿದೆ.

ಕೋವಿಡ್‌ಗೆ ಮೀಸಲಿಟ್ಟ 35,000 ಕೋಟಿಯಲ್ಲಿ ಲಸಿಕೆಗೆ 9,229 ಕೋಟಿ!

ಕೊರೋನಾ ವಿರುದ್ದ ಹೋರಾಡಲು 2 ಡೋಸ್ ಪೂರ್ಣಗೊಂಡರೆ ಉತ್ತಮ. ಹೀಗಾಗಿ ಹಣ ಪಾವತಿ ಲಸಿಕೆ ಪಡೆಯು ಮಂದಿಗೆ 84 ದಿನದ ಅಂತರವನ್ನು 4 ವಾರಗಳ ಬಳಿಕ ಯಾವಾಗಬೇಕಾದರು ಪಡೆಯಬಹುದು ಎಂದು ಕೇರಳ ಹೈಕೋರ್ಟ್ ಹೇಳಿದೆ. ಜಸ್ಟೀಸ್ ಪಿಬಿ ಸುರೇಶ್ ಕುಮಾರ್ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

ಇದಕ್ಕಾಗಿ ಕೋವಿನ್ ವೆಬ್‌ಸೈಟ್‌ನಲ್ಲಿ ಕೆಲ ಬದಲಾವಣೆ ಮಾಡಬೇಕು ಎಂದು ಕೇಂದ್ರಕ್ಕೆ ಸೂಚಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಲಸಿಕೆ ಪಡೆಯುವ ಮಂದಿಗೆ ನಾಲ್ಕು ವಾರಗಳ ಬಳಿಕ 2ನೇ ಡೋಸ್ ಲಸಿಕೆ ಪಡೆಯಲು ಬೇಕಾದ ಮಾರ್ಪಾಡು ಮಾಡಬೇಕು ಎಂದು ಕೇಂದ್ರಕ್ಕೆ ಸೂಚಿಸಿದೆ.

ಕೊರೋನಾ ಲಸಿಕೆಗೆ ಹೆದರಿ ಮರವೇರಿದ ಭೂಪನನ್ನು ಕೆಳಗಿಳಿಸುವಲ್ಲಿ ಗ್ರಾಮಸ್ಥರು ಸುಸ್ತೋ ಸುಸ್ತು

ಕೋವಿಡ್ ತಜ್ಞರ ಗುಂಪು ನೀಡಿದ ಶಿಫಾರಸಿನ ಮೇಲೆ ಕೋವಿಶೀಲ್ಡ್ ಲಸಿಕೆ ಅಂತರವನ್ನು ಒಂದು ತಿಂಗಳಿನಂದ 84 ದಿನಕ್ಕೆ  ಕೇಂದ್ರ ಸರ್ಕಾರ ಹೆಚ್ಚಿಸಿದೆ. 

click me!