75 ವರ್ಷದ ವೃದ್ಧೆಗೆ ಗಾಲಿಕುರ್ಚಿ ನಿರಾಕರಿಸಿದ ಇಂಡಿಗೋ

Kannadaprabha News   | Asianet News
Published : Feb 11, 2020, 08:34 AM IST
75 ವರ್ಷದ ವೃದ್ಧೆಗೆ ಗಾಲಿಕುರ್ಚಿ ನಿರಾಕರಿಸಿದ ಇಂಡಿಗೋ

ಸಾರಾಂಶ

ಬೆಂಗಳೂರಿನಲ್ಲಿ ವೃದ್ಧ ಮಹಿಳಾ ಪ್ರಯಾಣಿಕರೊಬ್ಬರಿಗೆ ಗಾಲಿ ಕುರ್ಚಿ ನೀಡಲು ನಿರಾಕರಿಸಿ, ಆ ವೃದ್ಧೆಯ ಪುತ್ರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಂಡಿಗೋ ವಿಮಾನದ ಪೈಲಟ್‌ನ ಲೈಸೆನ್ಸನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 3 ತಿಂಗಳು ಅಮಾನತುಗೊಳಿಸಿದೆ.  

ನವದೆಹಲಿ(ಫೆ.11]: ಬೆಂಗಳೂರಿನಲ್ಲಿ ವೃದ್ಧ ಮಹಿಳಾ ಪ್ರಯಾಣಿಕರೊಬ್ಬರಿಗೆ ಗಾಲಿ ಕುರ್ಚಿ ನೀಡಲು ನಿರಾಕರಿಸಿ, ಆ ವೃದ್ಧೆಯ ಪುತ್ರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಂಡಿಗೋ ವಿಮಾನದ ಪೈಲಟ್‌ನ ಲೈಸೆನ್ಸನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 3 ತಿಂಗಳು ಅಮಾನತುಗೊಳಿಸಿದೆ.

ಇದಕ್ಕೂ ಮುನ್ನ ಇಂಡಿಗೋ ಕಂಪನಿ ಕೂಡ ಈತನನ್ನು ತನಿಖೆ ಮುಗಿವವರೆಗೆ ಅಮಾನತಿನಲ್ಲಿಟ್ಟಿತ್ತು. ಇದರ ಬೆನ್ನಲ್ಲೇ ಡಿಜಿಸಿಎ ಶಿಸ್ತುಕ್ರಮ ಜರುಗಿಸಿದ್ದು, ಪೈಲಟ್‌ ವರ್ತನೆ ಸರಿ ಇರಲಿಲ್ಲ ಎಂದು ಸಾಬೀತಾಗಿದೆ ಎಂದಿದೆ.

ಆಗಿದ್ದೇನು?:

‘ಚೆನ್ನೈನಿಂದ ಬೆಂಗಳೂರಿಗೆ ನಾನು, 75 ವರ್ಷದ ನನ್ನ ತಾಯಿ ಬಂದೆವು. ತಾಯಿಗೆ ನಡೆಯಲು ಆಗದ ಕಾರಣ ಏರ್‌ಪೋರ್ಟ್‌ಗೆ ಗಾಲಿಕುರ್ಚಿಯನ್ನು ಮನೆಯವರೇ ತಂದಿದ್ದರು. ಆದರೆ ವಿಮಾನದಲ್ಲಿ ಗಾಲಿಕುರ್ಚಿ ತೆಗೆದುಕೊಂಡು ಬರಲು ಪೈಲಟ್‌ ಜಯಕೃಷ್ಣ ಆಸ್ಪದ ನೀಡಲಿಲ್ಲ.

ಆತ ನಮಗೆ ಬೆದರಿಕೆ ಹಾಕಿದ ಹಾಗೂ ರಾತ್ರಿಯಿಡೀ ಜೈಲಲ್ಲೇ ಕಳೆಯುತ್ತೀರಿ ಹುಷಾರ್‌ ಎಂದ’ ಎಂದು ಸುಪ್ರಿಯಾ ಉನ್ನಿ ನಾಯರ್‌ ಎಂಬ ಪತ್ರಕರ್ತೆ ಆರೋಪಿಸಿದ್ದರು. ಜ.13ರಂದು ಘಟನೆ ನಡೆದಿತ್ತು. ಈ ಟ್ವೀಟ್‌ ಗಮನಿಸಿದ್ದ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್‌ ಪುರಿ ಕ್ರಮ ಜರುಗಿಸಲು ಇಂಡಿಗೋಗೆ ಸೂಚಿಸಿದ್ದರು.indigo staff denies wheel chair to 75 year old lady in bangalore

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!