ದೇಶದ ಬತ್ತಳಿಕೆಗೆ ಕ್ಷಿಪಣಿ ನಾಶಕ ಯುದ್ಧನೌಕೆ ಮರ್ಮುಗೋವಾ: ರಕ್ಷಣಾ ಸಚಿವರಿಂದ ದೇಶಕ್ಕೆ ಸಮರ್ಪಣೆ

Published : Dec 19, 2022, 07:51 AM ISTUpdated : Dec 19, 2022, 07:53 AM IST
ದೇಶದ ಬತ್ತಳಿಕೆಗೆ ಕ್ಷಿಪಣಿ ನಾಶಕ ಯುದ್ಧನೌಕೆ ಮರ್ಮುಗೋವಾ: ರಕ್ಷಣಾ ಸಚಿವರಿಂದ ದೇಶಕ್ಕೆ ಸಮರ್ಪಣೆ

ಸಾರಾಂಶ

ಸ್ವದೇಶಿ ನಿರ್ಮಿತ ಶಕ್ತಿಶಾಲಿ ಯುದ್ಧನೌಕೆಗಳಲ್ಲಿ ಒಂದು ನೌಕೆಯ ಶೇ.75 ಭಾಗಗಳು ದೇಶದಲ್ಲೇ ನಿರ್ಮಾಣ ದೇಶದ ಕರಾವಳಿ ಸಾಮರ್ಥ್ಯಕ್ಕೆ ಬಲ  

ಮುಂಬೈ: ಸ್ಟೆಲ್ತ್‌ ಗೈಡೆಡ್‌ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ, ಸ್ವದೇಶಿ ನಿರ್ಮಿತ ಯುದ್ಧನೌಕೆ ಐಎನ್‌ಎಸ್‌ ಮರ್ಮುಗೋವಾ ಅನ್ನು ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ಭಾನುವಾರ ದೇಶಕ್ಕೆ ಸಮರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಯುದ್ಧ ನೌಕೆಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿನ ಭಾರತದ ಕೌಶಲ್ಯವನ್ನು ಈ ನೌಕೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ಐಎನ್‌ಎಸ್‌ ಮರ್ಮುಗೋವಾ (INS Mormugao), ಸ್ವದೇಶದಲ್ಲೇ ನಿರ್ಮಿಸಿರುವ ಶಕ್ತಿಶಾಲಿ ಯುದ್ಧ ನೌಕೆಗಳ (Warship) ಪೈಕಿ ಒಂದಾಗಿದ್ದು, ತಾಂತ್ರಿಕವಾಗಿ ಅತ್ಯಾಧುನಿಕವಾಗಿದೆ. ಇದು ದೇಶದ ಕರಾವಳಿ ಸಾಮರ್ಥ್ಯವನ್ನು ಇನ್ನಷ್ಟುಬಲಪಡಿಸಲಿದೆ. ನೌಕೆಯ ಶೇ.75ರಷ್ಟುಭಾಗಗಳನ್ನು ದೇಶೀಯವಾಗಿ ಉತ್ಪಾದಿಸಲಾಗಿದೆ. ಈ ಯುದ್ಧನೌಕೆ ಭಾರತ ಮತ್ತು ಭಾರತದ ಮಿತ್ರ ದೇಶಗಳ ಭದ್ರತೆಗೆ ನೆರವಾಗಲಿದೆ ಎಂದು ರಾಜ್‌ನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೌಕಾಪಡೆ ಮುಖ್ಯಸ್ಥ ಜ.ಹರಿಕುಮಾರ್‌ (Navy chief J. Harikumar) ಮಾತನಾಡಿ, ಗೋವಾ ವಿಮೋಚನಾ ದಿನದ (Goa's liberation day) ಮುನ್ನಾ ದಿನ ಯುದ್ಧನೌಕೆಗೆ ಚಾಲನೆ ನೀಡಿರುವುದು ಯುದ್ಧನೌಕೆ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಕಳೆದೊಂದು ದಶಕದಲ್ಲಿ ದೇಶ ಸಾಧಿಸಿರುವ ನೈಪುಣ್ಯತೆ ಸಾಕ್ಷಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಶಸ್ತ್ರಪಡೆಗಳ ಮುಖ್ಯಸ್ಥ ಅನಿಲ್‌ ಚೌಹಾಣ್‌, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಗೋವಾ ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬರಲಿದ್ದಾರೆ ಮಹಿಳಾ ಕಮಾಂಡೋ..! ಇತಿಹಾಸದಲ್ಲಿ ಮೊದಲ ಬಾರಿಗೆ ನೌಕಾ ಪಡೆಯಲ್ಲಿ ಅವಕಾಶ

ಭಾರತೀಯ ನೌಕಾಪಡೆ ಪ್ರಾಜೆಕ್ಟ್ 15ಬಿ ಯೋಜನೆಯಡಿ ವಿಶಾಖಪಟ್ಟಣಂ ಕ್ಲಾಸ್‌ ಕ್ಷಿಪಣಿ ನಾಶಕಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಆ ಪೈಕಿ ಐಎನ್‌ಎಸ್‌ ಮರ್ಮುಗೋವಾ ಎರಡನೇಯದ್ದಾಗಿದೆ. ಗೋವಾದ ಐತಿಹಾಸಿಕ ಬಂದರು ನಗರಿ ಮರ್ಮುಗೋವಾದ ಹೆಸರನ್ನೇ ಈ ನೌಕೆಗೆ ಇಡಲಾಗಿದೆ.

Indian Navy MR Recruitment 2022: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರರು ನೇಮಕಾತಿ
ಯುದ್ಧನೌಕೆ ವಿಶೇಷತೆ:

  • ಯುದ್ಧನೌಕೆ 535 ಅಡಿ ಉದ್ದ, 55 ಅಡಿ ಅಗಲ ಮತ್ತು 7400 ಟನ್‌ ತೂಕ
  • ಗಂಟೆಗೆ ಗರಿಷ್ಠ 55 ಕಿ.ಮೀ ವೇಗದಲ್ಲಿ ಚಲಿಸಬಲ್ಲದು
  • ನೌಕೆಯಲ್ಲಿ ಭೂಮಿಯಿಂದ ಭೂಮಿಗೆ, ಭೂಮಿಯಿಂದ ಆಗಸಕ್ಕೆ ಹಾರಬಲ್ಲ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ
  • ನೌಕೆಯಲ್ಲಿ ಬ್ರಹ್ಮೋಸ್‌ ಸೇರಿ ದೇಶದ ವಿವಿಧ ಕ್ಷಿಪಣಿಗಳ ನಿಯೋಜನೆ
  • ನೌಕೆಯಲ್ಲಿ ಅತ್ಯಾಧುನಿಕ ಕಣ್ಗಾವಲು ರಾಡಾರ್‌, ಸೆನ್ಸರ್‌ ವ್ಯವಸ್ಥೆ
  • ಶತ್ರು ದೇಶದಿಂದ ಹಾರಿಬರುವ ಅಸ್ತ್ರಗಳ ಕುರಿತು ನಿಖರ ಮಾಹಿತಿ ಇದರಿಂದ ಪತ್ತೆ
  • 300 ಸಿಬ್ಬಂದಿಗಳಿಗೆ ವಾಸಕ್ಕೆ ಎಲ್ಲಾ ಸೌಕರ್ಯ, ಸತತ 45 ದಿನ ಸಂಚಾರ ಸಾಮರ್ಥ್ಯ
  • ಗರಿಷ್ಠ 7400 ಕಿ.ಮೀ ದೂರ ಸಾಗಬಲ್ಲದು, ಯುದ್ಧ ವಿಮಾನಗಳು ಮತ್ತು ಕಾಪ್ಟರ್‌ಗಳನ್ನು ಹೊರಬಲ್ಲದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!