ವುಹಾನ್‌ನಿಂದ ಬಂದ ಭಾರತೀಯರಿಂದ ಆರೋಗ್ಯ ಶಿಬಿರದಲ್ಲಿ ಡ್ಯಾನ್ಸ್!

By Suvarna News  |  First Published Feb 2, 2020, 2:41 PM IST

ಚೀನಾದ ವುಹಾನ್'ನಿಂದ ತಾಯ್ನಾಡಿಗೆ ಮರಳಿದ 647 ಭಾರತೀಯರು| ನವದೆಹಲಿ ಬಳಿಯ ಮನೆಸರ್ ಆರೋಗ್ಯ ಶಿಬಿರದಲ್ಲಿ ಭಾರತೀಯರು| 14 ದಿನಗಳ ಕಾಲ ಭಾರತೀಯರ ಆರೋಗ್ಯ ತಪಾಸಣೆ| ಶಿಬಿರದಲ್ಲಿ ನೃತ್ಯ ಮಾಡಿ ಗಮನ ಸೆಳೆದ ಭಾರತೀಯರು| ಶಿಬಿರದಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್|


ನವದೆಹಲಿ(ಫೆ.02): ಕೊರೋನಾ ವೈರಸ್’ಗೆ ತುತ್ತಾಗಿರುವ ಚೀನಾದ ವುಹಾನ್'ನಿಂದ ಬಂದಿರುವ ಭಾರತೀಯರು, ನವದೆಹಲಿಯಲ್ಲಿ ತಾವು ತಂಗಿರುವ  ಆರೋಗ್ಯ ಶಿಬಿರದಲ್ಲಿ ನೃತ್ಯ ಮಾಡಿದ್ದಾರೆ.

ಮನೆಸರ್’ನ ಆರೋಗ್ಯ ಶಿಬಿರದಲ್ಲಿ ವುಹಾನ್’ನಿಂದ ಬಂದ ಭಾರೀಯರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಇನ್ನೂ 14 ದಿನಗಳ ಕಾಲ ಅವರು ಈ ಶಿಬಿರದಲ್ಲೇ ಇರಬೇಕಾಗುತ್ತದೆ.

Tap to resize

Latest Videos

ಚೀನಾದಿಂದ ವಾಪಸ್ಸಾದವರಿಗೆ 14 ದಿನ ಆಸ್ಪತ್ರೆ ವಾಸ ಕಡ್ಡಾಯ!

ಈ ಮಧ್ಯೆ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಶಿಬಿರದಲ್ಲಿ ನೃತ್ಯ ಮಾಡಿರುವ ಭಾರತೀಯರು, ಅದಮ್ಯ ಆತ್ಮಸ್ಥೈರ್ಯ ಪ್ರದರ್ಶಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Guess???? pic.twitter.com/w2ZA47s1lX

— Dhananjay kumar (@dhananjaypro)

ಮರಳಿ ತಾಯ್ನಾಡಿಗೆ ಬಂದಿರುವುದು ಖುಷಿ ತಂದಿದ್ದು, ಕೊರೋನಾ ಭೀತಿಯಲ್ಲಿ ದಿನದೂಡುವ ಬದಲು ಎಲ್ಲರೊಂದಿಗೆ ಬೆರೆತು ಕಾಲ ಕಳೆಯವುದಾಗಿ ಶಿಬಿರದಲ್ಲಿರುವ ಭಾರತೀಯರು ಹೇಳಿದ್ದಾರೆ.

ಕೊರೋನಾ ಭೀತಿ: ಸುವರ್ಣ ನ್ಯೂಸ್‌ ಜೊತೆ ಚೀನಾ ಅನುಭವ ಬಿಚ್ಚಿಟ್ಟ ಯೋಗ ಶಿಕ್ಷಕ!

ಮುಖಕ್ಕೆ ಮೂರು ಪದರಗಳ ಮಾಸ್ಕ್ ಹಾಕಿಕೊಂಡಿರುವ ಕೆಲವು ಯುವಕರು ಶಿಬಿರದಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

click me!