ಕನ್ನಡ ಸೇರಿ 40 ಭಾಷೆಗಳಲ್ಲಿ ಹಾಡಿದ್ದ ಜುಬೀನ್‌ ಸ್ಕೂಬಾ ಡೈವಿಂಗ್‌ ವೇಳೆ ಸಾವು

Kannadaprabha News   | Kannada Prabha
Published : Sep 20, 2025, 04:46 AM IST
singer Zubeen Garg

ಸಾರಾಂಶ

ಕಳೆದ 33 ವರ್ಷಗಳಲ್ಲಿ ಕನ್ನಡ ಸೇರಿದಂತೆ 40 ಭಾಷೆಗಳಲ್ಲಿ 38000ಕ್ಕೂ ಹೆಚ್ಚು ಹಾಡುಗಳನ್ನು ಹೇಳಿದ್ದ ಖ್ಯಾತ ಗಾಯಕ ಜುಬೀಗ್‌ ಗಾರ್ಗ್‌ (52) ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ

ಗುವಾಹಟಿ: ಕಳೆದ 33 ವರ್ಷಗಳಲ್ಲಿ ಕನ್ನಡ ಸೇರಿದಂತೆ 40 ಭಾಷೆಗಳಲ್ಲಿ 38000ಕ್ಕೂ ಹೆಚ್ಚು ಹಾಡುಗಳನ್ನು ಹೇಳಿದ್ದ ಖ್ಯಾತ ಗಾಯಕ ಜುಬೀಗ್‌ ಗಾರ್ಗ್‌ (52) ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ, ಜುಬೀನ್‌ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿಯಾಗಿ ರಾಜಕೀಯ ಗಣ್ಯರು, ಚಿತ್ರ ನಟಿಯರು, ಗಾಯಕಿಯರು, ಕಲಾವಿದರು ಕಂಬನಿ ಮಿಡಿದಿದ್ದಾರೆ.

ಸೆ.20ರಂದು ಈಶಾನ್ಯ ಸಂಗೀತ ಉತ್ಸವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಸ್ಸಾಂ ಮೂಲದ ಜುಬೀನ್‌ ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ಅಸ್ಸಾಮಿ ಸಮುದಾಯದವರ ಜೊತೆ ಯಾಚ್‌ನಲ್ಲಿ ತೆರಳಿ ಅಲ್ಲಿ ಸ್ಕೂಬಾ ಡೈವಿಂಗ್‌ ಮಾಡುವಾಗ ಆಯ ತಪ್ಪಿಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹಿಂದಿಯ ಗ್ಯಾಂಗ್‌ಸ್ಟರ್‌ ಚಿತ್ರ ‘ಯಾ ಅಲಿ’ ಹಾಡು ಅವರಿಗೆ ಖ್ಯಾತಿ ತಂದು ಕೊಟ್ಟಿತ್ತು.

3ನೇ ವಯಸ್ಸಿನಲ್ಲೇ ಹಾಡಲು ಆರಂಭಿಸಿದ್ದ ಜುಬೀನ್‌, ಈ ಹಿಂದೆ ಉಲ್ಫಾ ಉಗ್ರರು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಹಾಡು ಹೇಳದಂತೆ ಬೆದರಿಕೆ ಒಡ್ಡಿದ್ದರೂ ಅದನ್ನು ಮೀರಿ ಹಿಂದಿ ಹಾಡುಗಳನ್ನು ಹೇಳುವ ಮೂಲಕ ಸುದ್ದಿಯಲ್ಲಿದ್ದರು.

ಕನ್ನಡದಲ್ಲೂ ಗಾಯನ:

2007ರಲ್ಲಿ ಬಿಡುಗಡೆಯಾದ ಹುಡುಗಾಟ ಚಿತ್ರದ ಒಮ್ಮೆಮ್ಮೆ ಹೀಗೂ... 2009ರಲ್ಲಿ ಬಿಡುಗಡೆಯಾದ ಪರಿಚಯ ಚಿತ್ರದ ಹೋಳಿ ಹಾಡು ಮತ್ತು 2022ರಲ್ಲಿ ಬಿಡುಗಡೆಯಾದ ಮಹಾರುದ್ರಂ ಚಿತ್ರದಲ್ಲಿನ ಅಮ್ಮಾ ನೀನೇ ತಾನೆ ಹಾಡುಗಳನ್ನು ಜಬೀನ್‌ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ