
ನವದೆಹಲಿ(ಜ.18) ರಾಮ ಮಂದಿರ ಉದ್ಘಾಟನೆಗೆ ಭಾರತ ಸಜ್ಜಾಗಿದೆ. ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೀಗ ರಾಮ ಭಕ್ತರಿಗೆ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ. ಜನವರಿ 22ರಂದು ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಾಣಪ್ರತಿಷ್ಠೆ ಬಳಿಕ ಆಯೋಧ್ಯೆಗೆ ಭಾರತೀಯ ರೈಲ್ವೇ ವಿಶೇಷ ಆಸ್ಥಾ ರೈಲು ಸೇವೆ ಆರಂಭಿಸುತ್ತಿದೆ. ಪ್ರತಿ ದಿನ ಆಯೋಧ್ಯೆಗೆ 66 ರೈಲುಗಳು ಸೇವೆ ನೀಡಲಿದೆ. ದೇಶದ ಮೂಲೆ ಮೂಲೆಗಳಿಂದ ಆಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ.
ಪ್ರತಿ ರೈಲು 22 ಬೋಗಿಗಳನ್ನು ಹೊಂದಿದೆ. ಸದ್ಯ ಭಾರತೀಯ ರೈಲ್ವೇ ಪ್ರತಿ ದಿನ 66 ರೈಲು ಸೇವೆಯನ್ನು ಆಯೋಧ್ಯೆಗೆ ನೀಡಲಿದೆ. ಆದರೆ ಶೀಘ್ರದಲ್ಲೇ ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಖ್ಯೆ ಹಾಗೂ ವಿವಿಧ ನಗರ ಪಟ್ಟಣಗಳಿಂದಲೂ ಆಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಲು ಭಾರತೀಯ ರೈಲ್ವೇ ಇಲಾಖೆ ನಿರ್ಧರಿಸಿದೆ. ದೆಹಲಿ, ಮುಂಬೈ, ಚೆನ್ನೈ, ಸಬರಮತಿ, ಡೆಹ್ರಡೂನ್ ಸೇರಿದಂತೆ ದೇಶದ ವಿವಿಧ ನಗರಳಿಂದ ಆಯೋಧ್ಯೆಗೆ ರೈಲು ಸೇವೆ ಇರಲಿದೆ.
ರಾಮ ಮಂದಿರ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ, ಮೊಬೈಲ್ ಬಳಕೆ ನಿಷೇಧ!
ಆಯೋಧ್ಯೆಗೆ ಸಂಚರಿಸುವ ಆಸ್ಥಾ ವಿಶೇಷ ರೈಲಿನಲ್ಲಿ ಸಸ್ಯಾಹಾರಿ ಆಹಾರದ ಮಾತ್ರ ಇರಲಿದೆ. ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ತಣಿಲುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಆಸ್ಥಾ ವಿಶೇಷ ರೈಲು ಆಯೋಧ್ಯೆಗೆ ಸಂಚಾರ ಮಾಡಲಿದೆ.
ಇತ್ತ ಬೆಂಗಳೂರಿನಿಂದ ಆಯೋಧ್ಯೆಗೆ ನೇರ ವಿಮಾನ ಸೇವೆಯೂ ಆರಂಭಗೊಂಡಿದೆ. ಏರ್ ಇಂಡಿಯಾ ಆಯೋಧ್ಯೆಗೆ ನೇರ ವಿಮಾನ ಸೇವೆ ನೀಡುತ್ತಿದೆ. ಏರ್ ಇಂಡಿಯಾ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಯೋಧ್ಯೆಯಲ್ಲಿ ಉದ್ಘಾಟನೆಯಾಗಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮಕ್ಕೆ ಸೇವೆ ಒದಗಿಸಲಿದೆ. ಇದರ ಜೊತೆಗೆ ಅಯೋಧ್ಯೆಯಿಂದ ಕೊಲ್ಕತಾಗೂ ವಿಮಾನ ಸೇವೆ ಪ್ರಾರಂಭವಾಗಿದೆ. ಇದಕ್ಕೂ ಮೊದಲು ಅಯೋಧ್ಯೆಯಿಂದ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ಗೆ ವಿಮಾನ ಸೇವೆ ಆರಂಭವಾಗಿತ್ತು.
ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕೇಂದ್ರ ಸರ್ಕಾರದ ಗಿಫ್ಟ್, ಅರ್ಧ ದಿನ ರಜೆ ಘೋಷಣೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ