ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್, ಹೊಸ ವ್ಯವಸ್ಥೆ ಜಾರಿ!

Published : Oct 10, 2020, 10:50 AM IST
ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್, ಹೊಸ ವ್ಯವಸ್ಥೆ ಜಾರಿ!

ಸಾರಾಂಶ

ರೈಲು ಹೊರ​ಡುವ 5 ನಿಮಿಷ ಮುನ್ನವೂ ಟಿಕೆಟ್‌ ಬುಕ್ಕಿಂಗ್‌| ಇಂದಿನಿಂದ ಹೊಸ ವ್ಯವಸ್ಥೆ ಜಾರಿ

ನವ​ದೆ​ಹ​ಲಿ(ಅ.10): ರೈಲು ಹೊರ​ಡುವ ಕೇವಲ 5 ನಿಮಿಷ ಮುನ್ನವೂ ಟಿಕೆಟ್‌ ಬುಕ್‌ ಮಾಡುವ ಹೊಸ ವ್ಯವಸ್ಥೆ ಶನಿ​ವಾ​ರ​ದಿಂದ ಜಾರಿಗೆ ಬರ​ಲಿದೆ. ಇದು ಪ್ರಯಾ​ಣಿ​ಕ​ರಿಗೆ ಭಾರೀ ಅನು​ಕೂಲ ಕಲ್ಪಿ​ಸ​ಲಿ​ದೆ.

ಕೊರೋನಾ ಕಾಟ ಆರಂಭ​ವಾಗಿ ರೈಲು ಸಂಚಾರ ಸ್ಥಗಿತ ಆಗುವ ಮುಂಚೆ ರೈಲು ಹೊರ​ಡುವ 30 ನಿಮಿಷ ಮೊದಲು ಬುಕ್‌ ಮಾಡುವ ವ್ಯವಸ್ಥೆ ಇತ್ತು. ಆದರೆ ಕೊರೋನಾ ಲಾಕ್‌​ಡೌನ್‌ ಸಡಿ​ಲ​ಗೊ​ಳ್ಳು​ತ್ತಿ​ದ್ದಂತೆಯೇ ಆರಂಭ​ವಾ​ಗಿದ್ದ ವಿಶೇಷ ರೈಲು​ಗಳ ಮೊದಲ ಚಾರ್ಟನ್ನು ರೈಲು ಹೊರ​ಡುವ 4 ತಾಸು ಮುನ್ನ ಹಾಗೂ ಎರ​ಡನೇ ಚಾರ್ಟನ್ನು 2 ತಾಸು ಮುನ್ನ ಸಿದ್ಧ​ಪ​ಡಿ​ಸ​ಲಾ​ಗು​ತ್ತಿ​ತ್ತು.

ಇನ್ನು ಮುಂದೆ ಮೊದ​ಲಿ​ನ ವ್ಯವ​ಸ್ಥೆ​ಯನ್ನೇ ಪುನಾ​ರಂಭಿ​ಸಲು ರೈಲ್ವೆ ಇಲಾಖೆ ನಿರ್ಧ​ರಿ​ಸಿದೆ. ಮೊದಲ ಚಾರ್ಟನ್ನು ರೈಲು ಹೊರ​ಡು​ವ 4 ತಾಸು ಮೊದಲು ಸಿದ್ಧ​ಪ​ಡಿ​ಸ​ಲಾ​ಗು​ತ್ತದೆ. ಆಗ ಸೀಟು​ಗಳು ಉಳಿ​ದಿ​ದ್ದರೆ ಎರ​ಡನೇ ಚಾರ್ಟನ್ನು ರೈಲು ಹೊರ​ಡುವ 30 ನಿಮಿ​ಷ​ದಿಂದ 5 ನಿಮಿಷದ ನಡು​ವಿನ ಅವ​ಧಿ​ಯಲ್ಲಿ ಸಿದ್ಧ​ಪ​ಡಿ​ಸ​ಲಾ​ಗು​ತ್ತದೆ.

ಇದ​ರರ್ಥ ರೈಲು ಹೊರ​ಡುವ 5 ನಿಮಿಷ ಮೊದಲೂ ಸೀಟು ಖಾಲಿ ಇದ್ದರೆ ಕೌಂಟ​ರ್‌​ನಲ್ಲಿ ಅಥವಾ ಆನ್‌​ಲೈನ್‌ ಮೂಲಕ ಟಿಕೆಟ್‌ ಬುಕ್‌ ಮಾಡ​ಬ​ಹು​ದಾ​ಗಿ​ದೆ. ಈ ಅವ​ಧಿ​ಯಲ್ಲಿ ಬುಕ್‌ ಆದ ಟಿಕೆಟ್‌ ರದ್ದು​ಗೊ​ಳಿ​ಸಲೂ ಅವ​ಕಾ​ಶ​ವಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತ ಅಮೆರಿಕಾ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಕರೆ ಬಹಳ ಅಗತ್ಯವಾಗಿತ್ತು: ಜೈಶಂಕರ್ ಪುತ್ರ ಧ್ರುವ್ ಜೈಶಂಕರ್
ಇಯು, ಅಮೆರಿಕ ಬಳಿಕ ಇನ್ನೂ 11 ದೇಶದ ಜತೆ ಟ್ರೇಡ್‌ ಡೀಲ್‌