ಐದು ಜ್ಯೋತಿರ್ಲಿಂಗಗಳನ್ನು ಒಳಗೊಂಡ ಜ್ಯೋತಿರ್ಲಿಂಗ ಯಾತ್ರಾ ಪ್ರವಾಸಿ ರೈಲು ಪ್ರಾರಂಭವಾಗಿದೆ. ರೈಲು ಶನಿವಾರ ಕೋಲ್ಕತ್ತಾ ನಿಲ್ದಾಣದಿಂದ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಿದೆ.
ನವದೆಹಲಿ (ಮೇ.22): ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್‌ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆಯು ಭಾರತ್ ಗೌರವ್ ಯೋಜನೆಯನ್ನು ಪರಿಚಯಿಸಿದ್ದು, IRCTC ಯ ಮೊದಲ ಭಾರತ್ ಗೌರವ್ ಪ್ರವಾಸಿ ರೈಲು ಶನಿವಾರ ಕೋಲ್ಕತ್ತಾ ರೈಲು ನಿಲ್ದಾಣದಿಂದ 'ಜ್ಯೋತಿರ್ಲಿಂಗ ಯಾತ್ರೆ' ಆರಂಭಿಸಿದೆ. ವಿಶೇಷ ಪ್ರವಾಸಿ ರೈಲು ಐದು ಜ್ಯೋತಿರ್ಲಿಂಗಗಳನ್ನು ಒಳಗೊಂಡಿದೆ - ಓಂಕಾರೇಶ್ವರ, ಮಹಾಕಾಳೇಶ್ವರ, ಸೋಮನಾಥ, ನಾಗೇಶ್ವರ ಮತ್ತು ತ್ರಯಂಬಕೇಶ್ವರ ಜೊತೆಗೆ ಏಕತಾ ಪ್ರತಿಮೆ, ಶಿರಡಿ ಸಾಯಿಬಾಬಾ ಮತ್ತು ಶನಿ ಶಿಂಗ್ನಾಪುರ, ಪೂರ್ವ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ರೈಲು ಶನಿವಾರ ಕೋಲ್ಕತ್ತಾ ನಿಲ್ದಾಣದಿಂದ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಿತು. ಇದು 11 ರಾತ್ರಿ ಪ್ರಯಾಣ ಮತ್ತು 12 ಹಗಲು ಪ್ರಯಾಣದ ಅನುಭವವನ್ನು ಯಾತ್ರಿಕರಿಗೆ ನೀಡಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಏಪ್ರಿಲ್ 29 ರಂದು, ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಕಿಶನ್ ರೆಡ್ಡಿ ಅವರು ಸಿಕಂದರಾಬಾದ್ ರೈಲು ನಿಲ್ದಾಣದಿಂದ "ಗಂಗಾ ಪುಷ್ಕರಲಾ ಯಾತ್ರೆ: ಪುರಿ - ಕಾಸಿ - ಅಯೋಧ್ಯೆ" ಭಾರತ್ ಗೌರವ್ ಪ್ರವಾಸಿ ರೈಲಿಗೆ ಹಸಿರು ನಿಶಾನೆ ತೋರಿದರು.
Foreign Trip ಮಾಡಬೇಕಾ? ರೈಲಲ್ಲೇ ಭೇಟಿ ನೀಡಬಹುದು ಈ ದೇಶಗಳಿಗೆ!
ಪ್ಲಾಟ್‌ಫಾರ್ಮ್ ನಂ.10 ರಿಂದ ರೈಲನ್ನು ಫ್ಲ್ಯಾಗ್ ಆಫ್ ಮಾಡಲಾಯಿತು. SCR ಜನರಲ್ ಮ್ಯಾನೇಜರ್, ಅರುಣ್ ಕುಮಾರ್ ಜೈನ್ ಮತ್ತು ಇತರ IRCTC ಮತ್ತು ರೈಲ್ವೆ ಅಧಿಕಾರಿಗಳು ಫ್ಲ್ಯಾಗ್-ಆಫ್ನಲ್ಲಿ ಸಚಿವರ ಜೊತೆಗಿದ್ದರು.
ಬೇಸಿಗೆ ದಟ್ಟಣೆ ತಪ್ಪಿಸಲು ವಿಶೇಷ ರೈಲು ಘೋಷಿಸಿದ ಭಾರತೀಯ ರೈಲ್ವೆ, ಕರ್ನಾಟಕಕ್ಕೆ ಅತೀ ಹೆಚ್ಚು!
ಎಎನ್‌ಐ ಜೊತೆ ಮಾತನಾಡಿದ ಕೇಂದ್ರ ಸಚಿವ ಕಿಶನ್ ರೆಡ್ಡಿ, "ಗಂಗಾ ಪುಷ್ಕರಲಕ್ಕೆ ವಿಶೇಷ ರೈಲುಗಳನ್ನು ಮಂಜೂರು ಮಾಡುವಂತೆ ನಮಗೆ ಹಲವು ಮನವಿಗಳು ಬಂದವು, ಆದರೆ ನಾವು ಭಾರತ್ ಗೌರವ್ ರೈಲುಗಳನ್ನು ಪರಿಚಯಿಸಲು ನಿರ್ಧರಿಸಿದ್ದೇವೆ" ಎಂದು ಹೇಳಿದರು. ಭಾರತ್ ಗೌರವ್ ಪ್ರವಾಸಿ ರೈಲು ಪ್ರಾರಂಭವು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು "ದೇಖೋ ಅಪ್ನಾ ದೇಶ್" ನ ಭಾರತ ಸರ್ಕಾರದ ಉಪಕ್ರಮಕ್ಕೆ ಅನುಗುಣವಾಗಿದೆ ಎಂದರು.