Ramayan Expressನಲ್ಲಿ ಕೇಸರಿ ದಿರಿಸು : ಸ್ವಾಮಿಗಳ ಆಕ್ಷೇಪ ಬಳಿಕ ಸಿಬ್ಬಂದಿ ಸಮವಸ್ತ್ರ ಬದಲು!

By Kannadaprabha NewsFirst Published Nov 23, 2021, 2:39 PM IST
Highlights

*ಕೇಸರಿ ಸಮವಸ್ತ್ರ  ಧರಿಸುವುದಕ್ಕೆ ಸ್ವಾಮಿಗಳ ಆಕ್ಷೇಪ!
*ರುದ್ರಾಕ್ಷಿ ಮಾಲೆ ಹಾಕಿಕೊಳ್ಳುವುದು ಸಾಧುಗಳಿಗೆ ಅಪಮಾನ
*ಸಿಬ್ಬಂದಿ ಸಮವಸ್ತ್ರ ಬದಲಿಸಿದ  ರಾಮಾಯಣ ಎಕ್ಸ್‌ಪ್ರೆಸ್‌

ಉಜ್ಜಯಿನಿ(ನ.23): ಇತ್ತೀಚೆಗೆ ಉದ್ಘಾಟನೆಗೊಂಡ ರಾಮಾಯಣ ಎಕ್ಸ್‌ಪ್ರೆಸ್‌ ರೈಲು (Ramayana Express train) ಸಿಬ್ಬಂದಿ ಕೇಸರಿ ಸಮವಸ್ತ್ರ (Orange dress) ಧರಿಸುವುದಕ್ಕೆ ಸ್ಥಳೀಯ ಸ್ವಾಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಸಮವಸ್ತ್ರ ಹಿಂಪಡೆಯದಿದ್ದರೆ ಡಿ.12 ರಂದು ರೈಲನ್ನು ದೆಹಲಿಯಲ್ಲಿ  ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರೈಲಲ್ಲಿ ಉಪಹಾರ ನೀಡುವ ವೇಟರ್‌ (Waiter) ಸಾಧುಗಳಂತೆ ಕೇಸರಿ ಉಡುಪು ಧರಿಸಿ ರುದ್ರಾಕ್ಷಿ ಮಾಲೆಯನ್ನು ಹಾಕಿಕೊಳ್ಳುವುದು ಹಿಂದೂ ಧರ್ಮ ಹಾಗೂ ಸಾಧುಗಳಿಗೆ ಅಪಮಾನಕಾರಿಯಾಗಿದೆ ಎಂದು ಉಜ್ಜೈನಿ ಅಖಾಡ ಪರಿಷತ್‌ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಹೇಳಿದ್ದಾರೆ. ಅದರ ಬೆನ್ನಲ್ಲೇ ರೈಲ್ವೆ ಸಿಬ್ಬಂದಿಗಳ ಸಮವಸ್ತ್ರ ಬದಲು ಮಾಡಿ, ಹೇಳಿಕೆ ಬಿಡುಗಡೆ ಮಾಡಿದೆ.

ಇನ್ನುಮುಂದೆ ಶರ್ಟ್ ಮತ್ತು ಪ್ಯಾಂಟ್ ಸಮವಸ್ತ್ರ! 

“ಸೇವಾ ಸಿಬ್ಬಂದಿಯ ವೃತ್ತಿಪರತೆಯನ್ನು ಗಮನಲ್ಲಿಕೊಟ್ಟುಕೊಂಡು ಸೇವಾ ಸಿಬ್ಬಂದಿಯ ಉಡುಗೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದರಿಂದ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ” ಎಂದು IRCTC ಹೇಳಿದೆ. ಸಮವಸ್ತ್ರವನ್ನು ಶರ್ಟ್ ಮತ್ತು ಪ್ಯಾಂಟ್ (Shirt and Pant) ಹಾಗೂ ಸಾಂಪ್ರದಾಯಿಕ ಪೇಟಕ್ಕೆ ಬದಲಾಯಿಸಲಾಗಿದೆ. ಆದಾಗ್ಯೂ, ಮಾಣಿಗಳು (Waiter) ಕೇಸರಿ ಮಾಸ್ಕ್‌ (Orange Mask) ಮತ್ತು ಕೈಗವಸುಗಳನ್ನು (Hand Glouse) ಧರಿಸಲಿದ್ದಾರೆ.

ರುದ್ರಾಕ್ಷಿ ಮಾಲೆ ಹಾಕಿಕೊಳ್ಳುವುದು ಸಾಧುಗಳಿಗೆ ಅಪಮಾನ!

ಸಾಧುವಿನಂತಹ (Seer) ಪೇಟ್‌, ಕೇಸರಿ ಉಡುಪನ್ನು ಧರಿಸುವುದು ಮತ್ತು ರುದ್ರಾಕ್ಷಿಯ ಮಾಲೆಗಳನ್ನು (Rudraksha) (ಹಾರ) ಧರಿಸುವುದು ಹಿಂದೂ ಧರ್ಮ ಮತ್ತು ಅದರ ಹಿಂಬಾಲಕರಿಗೆ ಅವಮಾನವಾಗಿದೆ" ಎಂದು ಉಜ್ಜಯಿನಿ ಅಖಾಡ ಪರಿಷತ್ತಿನ (Ujjain AKhada Parishad) ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ (Avdeshpuri) ಹೇಳಿದ್ದಾರೆ  . ವೇಟರ್‌ಗಳ (Waiter) ಕೇಸರಿ ಡ್ರೆಸ್ ಕೋಡ್ ಅನ್ನು ಬದಲಾಯಿಸದಿದ್ದರೆ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಲ್ಲಿ  ರೈಲನ್ನು ನಿಲ್ಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ವಾಲಿದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಕಳಶ : ಭಕ್ತರದಲ್ಲಿ ಕೆಡುಕಿನ ಆತಂಕ

ರಾಮಾಯಣ ಎಕ್ಸ್‌ಪ್ರೆಸ್‌ ರೈಲು, ಈ ವಿವಾದವನ್ನು ಬೇರೆ ರೂಪ ಪಡೆಯದಿರಲು ಮತ್ತು ಸಮವಸ್ತ್ರವನ್ನು ಸ್ವೀಕಾರಾರ್ಹವಾದಂತೆ ಬದಲಾಯಿಸಲು ನಿರ್ಧರಿಸಿದೆ ಎಂದು ರೈಲ್ವೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲ ರಾಮಾಯಣ ಸರ್ಕ್ಯೂಟ್ ರೈಲು ನವೆಂಬರ್ 7 ರಂದು 17 ದಿನಗಳ ಪ್ರಯಾಣವನ್ನು ಪ್ರಾರಂಭಿಸಿದೆ.

ಅಯ್ಯಪ್ಪಗೆ ಕೈಮುಗಿಯದೇ, ತೀರ್ಥದಲ್ಲಿ ಕೈತೊಳೆದ ಸಚಿವ : ಸಮರ್ಥನೆ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ (Sabarimala Ayyappa Swamy Temple) ತೆರಳಿದ್ದ ವೇಳೆ, ಕೇರಳದ (Kerala) ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್‌ (K radhakrishnan) ಅವರು ದೇವರಿಗೆ ಮತ್ತು ಹಿಂದೂ ಸಂಪ್ರದಾಯಗಳಿಗೆ (Hindu Culture) ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ (Alligation) ಕೇಳಿಬಂದಿದೆ. ವಾರ್ಷಿಕ ಯಾತ್ರೆಗೆ ಶಬರಿಮಲೆ (Sabarimala) ದೇಗುಲದ  ಭಾಗಿಲು ತೆರೆದ ದಿನ ಸಚಿವ ರಾಧಾಕೃಷ್ಣನ್‌, ಅಯ್ಯಪ್ಪ ದೇಗುಲಕ್ಕೆ ತೆರಳಿದ್ದರು. ಈ ವೇಳೆ ಅವರು ಪೂಜೆ ವೇಳೆ ದೇವರಿಗೆ ಕೈಮುಗಿದಿರಲಿಲ್ಲ. ಜೊತೆಗೆ ಬಳಿಕ ಅರ್ಚಕರು ತೀರ್ಥ ನೀಡಿದಾಗ ಅದನ್ನು ಸೇವಿಸುವ ಬದಲು ಕೈಗೆ ಒರೆಸಿಕೊಂಡು ಸುಮ್ಮನಾಗಿದ್ದರು. ಈ ಕುರಿತ ವಿಡಿಯೋ(video) ಸಾಮಾಜಿಕ ಜಾಲತಾಣಗಳಲ್ಲಿ (social Media) ಭಾರೀ ವೈರಲ್‌ (Viral) ಆಗಿತ್ತು. ಜೊತೆಗೆ ಸಚಿವರ ವರ್ತನೆ ಬಗ್ಗೆ ಜಾಲತಾಣಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದರು.

Puneeth Rajkumar Death: ಮಂತ್ರಾಲಯ ಮಠಕ್ಕೂ ಅಪ್ಪುಗೂ ಅವಿನಾಭಾವ ಸಂಬಂಧ

ಈ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಸಚಿವರು, ನಾನು ದಿನವೂ ನನ್ನ ತಾಯಿಗೆ (mother) ಕೈ ಮುಗಿಯುವುದಿಲ್ಲ ಎಂದ ಮಾತ್ರಕ್ಕೆ ನನಗೆ ನನ್ನ ತಾಯಿಯ ಮೇಲೆ ಗೌರವವಿಲ್ಲ ಎಂದರ್ಥವಲ್ಲ. ನಾನು ಕೆಲವೊಂದು ಪದಾರ್ಥಗಳನ್ನು ಸೇವಿಸುವುದಿಲ್ಲ. ಭಕ್ತಿಯ ಹೆಸರಿನಲ್ಲಿ ಯಾರೇ ಒತ್ತಾಯಿಸಿದರೂ ನಾನು ಅದನ್ನು(ತೀರ್ಥ) ಸೇವಿಸುವುದಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

click me!