ರೈಲುಹಳಿ ಮೇಲೆ ಕುಳಿತು ಫೋನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಕಲ್ಲೆಸೆದೆ ರೈಲು ಚಾಲಕ!

Published : Jan 29, 2025, 04:30 PM IST
ರೈಲುಹಳಿ ಮೇಲೆ ಕುಳಿತು ಫೋನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಕಲ್ಲೆಸೆದೆ ರೈಲು ಚಾಲಕ!

ಸಾರಾಂಶ

ರೈಲು ಹಳಿಯ ಮೇಲೆ ಮೊಬೈಲ್‌ನಲ್ಲಿ ಮಗ್ನನಾಗಿದ್ದ ಯುವಕನಿಗೆ ರೈಲು ಬರುತ್ತಿರುವುದು ತಿಳಿಯಲಿಲ್ಲ. ಚಾಲಕನ ಸಮಯಪ್ರಜ್ಞೆಯಿಂದ ಯುವಕನ ಪ್ರಾಣ ಉಳಿದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊಬೈಲ್ ಫೋನಿನಲ್ಲಿ ಪ್ರೀತಿ ಪಾತ್ರರೊಂದಿಗೆ ಮಾತನಾಡುತ್ತಾ ಕುಳಿತರೆ ಜಗತ್ತೇ ಪ್ರಳವಾದರೂ ಎಚ್ಚರಗೊಳ್ಳದ ಕೆಲವರು ಇದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬ ಯುವಕ ರೈಲು ಹಳಿಯ ಮೇಲೆ ಫೋನಿನಲ್ಲಿ ಮಾತನಾಡುತ್ತಾ ಕುಳಿತಿದ್ದಾನೆ. ರೈಲು ಚಾಲಕ ಎಷ್ಟೇ ಹಾರ್ನ್‌ ಹಾಕಿದರೂ ಎದ್ದೇಳದೇ ಕುಳಿತಿದ್ದು, ಒಬ್ಬ ಅಮಾಯಕ ಯುವಕನ ಜೀವಕ್ಕೆ ಹಾನಿ ಮಾಡಬಾರದು ಎಂದು ಸ್ವತಃ ರೈಲನ್ನು ನಿಲ್ಲಿಸಿ ಚಾಲಕ ಕೆಳಗಿಳಿದು ಕಲ್ಲನ್ನು ಹಿಡಿದು ಯುವಕನ ಬಳಿ ಬಂದಿದ್ದಾನೆ. ಆಗ, ಮೊಬೈಲ್‌ ಹಿಡಿದುಕೊಂಡು ಯುವ ಹಳಿಯಿಂದ ಎದ್ದು ಓಡಿ ಹೋಗಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವರು ಫೋನಿನಲ್ಲಿ ಮಾತನಾಡುತ್ತಾ ಮುಳುಗಿದರೆ ಬೇರೆ ಏನೂ ಗೊತ್ತಾಗಲ್ಲ ಅನ್ನೋರು ಇದ್ದಾರೆ. ಯಾರ ಜೊತೆಗಾದರೂ ಅಥವಾ ಪ್ರೀತಿ ಪಾತ್ರರೊಂದಿಗೆ ಮಾತನಾಡುತ್ತಾ ಕುಳಿತರೆ ಸುತ್ತಿಲಿನ ಜಗತ್ತಿನಲ್ಲಿ ಏನಾಗುತ್ತದೆ ಎಂಬ ಅರಿವು ಕೂಡ ಇರುವುದಿಲ್ಲ. ಇನ್ನು ಕೆಲವರು ಕಿವಿಗೆ ಇಯರ್‌ಫೋನ್ ಹಾಕಿಕೊಂಡು ರಿಲ್ಸ್ ನೋಡುತ್ತಾ ಅಥವಾ ಕೆಲವು ವಿಡಿಯೋ ನೋಡುತ್ತಾ ಕುಳಿತರೆ ಅವರು ಕೂಡ ತಮ್ಮ ಸುತ್ತಲೂ ಏನಾಗುತ್ತದೆ ಎಂಬುದನ್ನು ಗಮನಿಸುವುದೇ ಇಲ್ಲ. ಇಂಥವರು ತಮಗೂ ಮತ್ತು ಇತರರಿಗೂ ತೊಂದರೆ ಆಗುತ್ತದೆ ಎಂಬ ಪರಿಜ್ಞಾನವನ್ನೂ ಇಟ್ಟುಕೊಂಡಿರುವುದಿಲ್ಲ. ಜೊತೆಗೆ, ರೀಲ್ಸ್ ನೋಡುವವರು ಹಾಗೂ ಮೊಬೈಲ್‌ನಲ್ಲಿ ಮಾತನಾಡುವವರು ರೈಲ್ವೆ ಹಳಿ ಕುಳಿತುಕೊಳ್ಳುವುದು, ರಸ್ತೆಯಲ್ಲಿ ಮಧ್ಯಭಾಗ ನಿಂತು ಮಾತನಾಡುವುದು ಅಥವಾ ವಾಹನ ಚಾಲನೆ ವೇಳೆ ಫೋನ್ ವೀಕ್ಷಣೆ ಮಾಡುವುದರಿಂದ ತಮ್ಮ ಪ್ರಾಣಕ್ಕೆ ಆಪತ್ತಿನ ಜೊತೆಗೆ ಇತರರಿಗೂ ತೊಂದರೆ ಆಗುತ್ತದೆ. ಇಂತಹ ಅನೇಕ ವಿಡಿಯೋಗಳ ನಡುವೆ, ಇದೀಗ ಮತ್ತೊಂದು ತಾಜಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ: ಟೇಕಾಫ್ ಆಗಲು ಕೆಲ ನಿಮಿಷಗಳಿದ್ದಾಗ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ಪ್ರಯಾಣಿಕ

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ಯುವಕ ರೈಲ್ವೆ ಹಳಿ ಮೇಲೆ ಕುಳಿತು ಫೋನಿನಲ್ಲಿ ಮಾತನಾಡುತ್ತಿದ್ದಾನೆ. ಅವನು ಫೋನ್ ಮಾಡುತ್ತಿರುವಾಗಲೇ ಒಂದು ರೈಲು ಅದೇ ಹಳಿಯಲ್ಲಿ ನಿಧಾನವಾಗಿ ಬರುತ್ತಿದೆ. ಆದರೆ ರೈಲ್ವೆ ಹಳಿಯಲ್ಲಿ ಟ್ರೈನ್ ಬರುತ್ತಿರುವುದು ಯುವಕನಿಗೆ ಗೊತ್ತೇ ಆಗಿಲ್. ಆದರೆ, ಟ್ರೈನ್ ಚಾಲಕ ಯುವಕನನ್ನು ದೂರದಿಂದ ನೋಡುತ್ತಲೇ ರೈಲನ್ನು ನಿಧಾನವಾಗಿ ಚಲಿಸುತ್ತಾ ಬರುತ್ತಾನೆ. ಜೊತೆಗೆ, ನಿರಂತರವಾಗಿ ಹಾರ್ನ್ ಹೊಡೆಯುತ್ತಿದ್ದರೂ ಅದನ್ನು ಗಮನಿಸದೇ ಯುವಕ ಹೆಡ್‌ಫೋನ್ ಧರಿಸಿಕೊಂಡು ಕುಳಿತಿದ್ದರಿಂದ ಆತನಿಗೆ ಏನೂ ಕೇಳಿಸಿಲ್ಲ.

ಇನ್ನು ರೈಲು ಯುವಕ ಕುಳಿತಿದ್ದ ಜಾಗದ ಹತ್ತಿರ ಬಂದಿದೆ. ಟ್ರೈನ್ ಚಾಲಕ ಯುವಕನ ಹತ್ತಿರ ಬಂದು ಆತನಿಗೆ ಡಿಕ್ಕಿ ಹೊಡೆಸದೇ ಟ್ರೈನನ್ನು ನಿಲ್ಲಿಸಿದ್ದಾನೆ. ಹೀಗಾಗಿ, ಯುವಕನ ಪ್ರಾಣ ಉಳಿಯಿತು. ತನ್ನ ಪಕ್ಕದಲ್ಲಿ ಏನೋ ಬಂದು ನಿಂತಿದೆ ಎಂಬುದನ್ನು ಆಗ ಯುವಕ ಗಮನಿಸಿ, ರೈಲ್ವೆ ಹಳಿಯಿಂದ ಎದ್ದು ಪಕ್ಕಕ್ಕೆ ನಿಧಾನವಾಗಿ ಹೆಜ್ಜೆ ಹಾಕಿದ್ದಾನೆ. ಆದರೆ, ಈ ಯುವಕನ ವರ್ತನೆಯಿಂದ ಕೋಪಗೊಂಡ ರೈಲ್ವೆ ಪೈಲೆಟ್ ಟ್ರೈನಿಂದ ಇಳಿದುಬಂದು ಯುವಕನ ಬಳಿಗೆ ಬರುತ್ತಾರೆ. ಅದಾಗಲೇ ತನಗೆ ರೈಲ್ವೆ ಸಿಬ್ಬಂದಿ ಹಲ್ಲೆ ಮಾಡಬಹುದು ಎಂದು ಅಲ್ಲಿಂದ ಓಡಿ ಹೋಗುತ್ತಾನೆ. ಯುವಕ ಓಡಿ ತಪ್ಪಿಸಿಕೊಂಡರೂ ರೈಲ್ವೆ ಚಾಲಕ ಯುವಕನಿಗೆ ಕಲ್ಲು ಎಸೆಯುತ್ತಾರೆ. ಆದರೆ, ಈ ಕಲ್ಲು ಯುವಕನಿಗೆ ಬೀಳುವುದಿಲ್ಲ.

ಇದನ್ನೂ ಓದಿ: ಮದುವೆ ಮಾಡಲು ಒಪ್ಪದ ಪುರೋಹಿತ, ಮಧ್ಯರಾತ್ರಿ ರಸ್ತೆಯಲ್ಲೇ ಹಾರ ಬದಲಿಸಿಕೊಂಡ ವಿವಾಹವಾದ ಪ್ರೇಮಿಗಳು!

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಬಹಳಷ್ಟು ಜನ ಕಮೆಂಟ್ ಮಾಡಿದ್ದಾರೆ. ಜೊತೆಗೆ, ವಿಡಿಯೋದಲ್ಲಿ ಬರೆದಿರುವ ಪ್ರಕಾರ ಈ ಘಟನೆ ಗಾಜಿಪುರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..