Diwali Airfare: ದೀಪಾವಳಿಗೆ ಊರಿಗೆ ಹೋಗ್ತಿದ್ದೀರಾ? ಟಿಕೆಟ್ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ! ರಿಟರ್ನ್ ಟಿಕೆಟ್‌ಗೆ ₹18,000!

Published : Sep 15, 2026, 01:49 PM IST
Indian Domestic Airfares Skyrocket Ahead of Diwali Festival rav

ಸಾರಾಂಶ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿವೆ. ನವೆಂಬರ್ 6 ರಿಂದ 8ರ ನಡುವೆ ದೆಹಲಿ, ಮುಂಬೈ, ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಪ್ರಯಾಣ ದರ ಗಗನಕ್ಕೇರಿದೆ. ದರ ಏರಿಕೆಗೆ ಕಾರಣವೇನು?

ದೀಪಾವಳಿ ಸಮೀಪಿಸಿದೆ. ಹಬ್ಬಕ್ಕೆ ಊರಿಗೆ ಹೋಗಲು ಜನರು ತಯಾರಿ ಹೊತ್ತಲ್ಲಿ ಬಸ್ ಪ್ರಯಾಣ ದರ ಮಾತ್ರವಲ್ಲ, ವಿಮಾನಯಾನ ಕಂಪನಿಗಳು ಸಹ ಟಿಕೆಟ್ ದರ ಹೆಚ್ಚಿಸಿ ಶಾಕ್ ನೀಡಿವೆ

ಹೌದು. ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಟಿಕೆಟ್ ದರಗಳು ದೀಪಾವಳಿ ಹಬ್ಬದ ಹಿನ್ನೆಲೆ ಗಗನಕ್ಕೇರಿವೆ. ಅದರಲ್ಲೂ ನೀವು ನವೆಂಬರ್ 6 ರಿಂದ 8ರ ನಡುವೆ ಪ್ರಯಾಣಿಸುವುದಾದರೆ ನಿಮ್ಮ ಜೇಬಿಗೆ ಕತ್ತರಿ ಬಿಳುವುದು ಗ್ಯಾರೆಂಟಿ. ಯಾವ್ಯಾವ ರೂಟ್‌ಗಳಲ್ಲಿ ರಿಟರ್ನ್ ದರ ಹೆಚ್ಚಿಸಿವೆ ಅನ್ನೋದು ಇಲ್ಲಿ ವಿವರಿಸಲಾಗಿದೆ. ನೀವು ಇದನ್ನ ಓದಿದ ಬಳಿಕವೇ ಮುಂದಿನ ಪ್ರಯಾಣದ ದಿನಾಂಕ ನಿರ್ಧರಿಸುವುದು ಒಳ್ಳೆಯದು.

ಪ್ರಮುಖ ರೂಟ್‌ಗಳಲ್ಲಿ ರಿಟರ್ನ್ ಟಿಕೆಟ್ ದರ ಹೀಗಿದೆ

  • ದೆಹಲಿ - ಹೈದರಾಬಾದ್: ₹18,000 ವರೆಗೆ (AIR India)
  • ದೆಹಲಿ - ಕೋಲ್ಕತ್ತಾ: ₹17,000 ವರೆಗೆ (AIR India)
  • ದೆಹಲಿ - ಅಹಮದಾಬಾದ್: ₹17,000 ವರೆಗೆ (AIR India)
  • ದೆಹಲಿ - ಬೆಂಗಳೂರು: ₹16,000 ವರೆಗೆ
  • ದೆಹಲಿ - ಮುಂಬೈ: ₹13,000 ವರೆಗೆ (indiGO)

ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಇದನ್ನೇ ಬಂಡವಾಳ ಮಾಡಿಕೊಳ್ಳುವ ವಿಮಾನಯಾನ ಕಂಪನಿಗಳು ದರ ಹೆಚ್ಚಿಸಲು ಮುಂದಾಗಿವೆ. ಅದರಲ್ಲೂ ದೀಪಾವಳಿ ಸೀಸನ್‌ಗೆ ದಿಢೀರ್ ಬೇಡಿಕೆ ಹೆಚ್ಚಾಗುತ್ತೆ. ಬೇರೆ ಬೇರೆ ನಗರಗಳಿಂದ ಬೆಂಗಳೂರಿಗೆ ಬಂದಿರುವ ಜನರು ದೀಪಾವಳಿ ಆಚರಿಸಲು ತಮ್ಮ ರಾಜ್ಯಗಳಿಗೆ ಹೋಗುವುದರಿಂದ ಬೇಡಿಕೆ ಹೆಚ್ಚಾಗುತ್ತೆ. ಕಡಿಮೆ ದರದ ಸೀಟುಗಳು ಬೇಗನೆ ಖಾಲಿಯಾಗುತ್ತವೆ. ಹೀಗಾಗಿ 'ಡೈನಾಮಿಕ್ ಪ್ರೈಸಿಂಗ್' (Dynamic Pricing) ವ್ಯವಸ್ಥೆಯಡಿ ವಿಮಾನಯಾನ ಕಂಪನಿಗಳು ಟಿಕೆಟ್ ದರಗಳನ್ನು ಹೆಚ್ಚಿಸುತ್ತವೆ. ವಾಯುಯಾನ ಡೇಟಾ ಏಜೆನ್ಸಿಯಾದ OAG ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ದೇಶೀಯ ವಿಮಾನಗಳ ಸೀಟುಗಳ ಸಂಖ್ಯೆಯಲ್ಲಿ (Capacity) ಶೇ. 5.6 ರಷ್ಟು ಇಳಿಕೆಯಾಗಿದೆ. ಇಂಡಿಗೋ ಶೇ. 4.5 ರಷ್ಟು ಮತ್ತು ಏರ್ ಇಂಡಿಯಾ ಶೇ. 8.8 ರಷ್ಟು ಸೀಟುಗಳನ್ನು ಕಡಿತಗೊಳಿಸಿವೆ. ವಿಮಾನಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದು ಮತ್ತು ವಿಮಾನಗಳ ಓಡಾಟ ಕಡಿಮೆ ಇರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಶೇ. 90ಕ್ಕಿಂತ ಹೆಚ್ಚು ದೇಶೀಯ ವಿಮಾನ ಸೇವೆಗಳನ್ನು ಇಂಡಿಗೋ ಮತ್ತು ಏರ್ ಇಂಡಿಯಾ ಕಂಪನಿಗಳೇ ನಿರ್ವಹಿಸುತ್ತವೆ. ಹೀಗಾಗಿ, ಈ ಕಂಪನಿಗಳು ಸೀಟುಗಳ ಸಂಖ್ಯೆ ಕಡಿಮೆ ಮಾಡಿರುವುದು, ಹಬ್ಬದಂತಹ ಹೆಚ್ಚು ಬೇಡಿಕೆಯಿರುವ ಸಮಯದಲ್ಲಿ ಸೀಟುಗಳ ಲಭ್ಯತೆ ಮತ್ತು ಟಿಕೆಟ್ ದರಗಳ ಮೇಲೆ ನೇರ ಪರಿಣಾಮ ಬೀರಿದೆ. ಮುಂಬರುವ ದಿನಗಳಲ್ಲಿ ಟಿಕೆಟ್ ದರಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಿವಿ ಕೇಳಲ್ಲ, ಮಾತು ಬರಲ್ಲ: ಅಮ್ಮನಿಗೆ ಮಗನೇ ಶಿಕ್ಷಕನಾದ, 22 ವರ್ಷಗಳ ನಂತರ SSLC ಪರೀಕ್ಷೆಯಲ್ಲಿ ಶೇ.82 ಅಂಕ ಗಳಿಸಿದ ತಾಯಿ
ತಮಿಳುನಾಡು ದೇಗುಲಗಳಿಂದ ಮ್ಯಾನ್‌ಹ್ಯಾಟನ್ ಗ್ಯಾಲರಿವರೆಗೆ: ಭಾರತದ ವಿಗ್ರಹ ಕದ್ದವನಿಗೆ ಈ ನಿಯಮವೇ ವರ! ಜರ್ಮನಿಗೆ ವಾಪಸ್