ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್: ಕ್ರಮ ಕೈಗೊಳ್ಳಲು ಮುಂದಾದ ಇಂಡಿಯನ್ ಆರ್ಮಿ!

Published : Feb 24, 2020, 01:39 PM ISTUpdated : Feb 25, 2020, 05:47 PM IST
ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್: ಕ್ರಮ ಕೈಗೊಳ್ಳಲು ಮುಂದಾದ ಇಂಡಿಯನ್ ಆರ್ಮಿ!

ಸಾರಾಂಶ

ಭಾರತೀಯ ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್| ನಾವು ಆಂತರಿಕ ಸುರಕ್ಷತೆಗಾಗಿ ಯೋಧರನ್ನು ನಿಯೋಜಿಸಿಲ್ಲ ಅಂದ್ರು ಸೇನಾಧಿಕಾರಿ| ಸೇನಾ ಸಮವಸ್ತ್ರ ಧರಿಸಿದ ರಾಜ್ಯ ಪೊಲೀಸ್ ಇಲಾಖೆ ಹಾಗೂ ಖಾಸಗಿ ಭದ್ರತಾ ಏಜೆನ್ಸಿ ವಿರುದ್ಧ ಕ್ರಮ

ನವದೆಹಲಿ[ಫೆ.24]: ಪೌರತ್ವ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯ ಜಾಫರಾಬಾದ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ದೆಹಲಿ ಪೊಲೀಸರು ಭಾರತೀಯ ಸೇನಾ ಸಮವಸ್ತ್ರದಲ್ಲಿ ಕಂಡು ಬಂದಿದ್ದಾರೆ. 

ಸುಮಾರು 1.04 ನಿಮಿಷದ ಈ ವಿಡಿಯೋದಲ್ಲಿ ದೆಹಲಿ ಪೊಲೀಸರು ಸೇನಾ ಸಮವಸ್ತ್ರ ಧರಿಸಿರುವುದು ಸ್ಪಷ್ಟವಾಗಿದೆ. ಸದ್ಯ ಈ ಸಂಬಂಧ ಪ್ರತಿಕ್ರಿಯಿಸಿರುವ ಸೇನಾಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. 

ಸುದ್ದಿ ಸಂಸ್ಥೆ ANI ಟ್ವೀಟ್ ಒಂದನ್ನು ಮಾಡಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಸೇನಾಧಿಕಾರಿಗಳು 'ಆಂತರಿಕ ಸುರಕ್ಷತೆಗಾಗಿ ಭಾರತೀಯ ಸೇನೆಯನ್ನು ಇಲ್ಲಿ ನಿಯೋಜಿಸಿರಲಿಲ್ಲ ಎಂಬುವುದನ್ನು ಸ್ಪಷ್ಟಪಡಿಸುತ್ತೇವೆ' ಎಂದಿದೆ.

ಅಲ್ಲದೇ 'ಭಾರತೀಯ ಸೇನಾ ಸಮವಸ್ತ್ರ ಧರಿಸಿದ ರಾಜ್ಯ ಪೊಲೀಸ್ ಪಡೆ ಹಾಗೂ ಖಾಸಗಿ ಭದ್ರತಾ ಏಜಡನ್ಸಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದು ತಿಳಿಸಿದೆ. ನಿಯಮಗಳನ್ವಯ ಅರೆಸೇನಾ ಪಡೆ ಹಾಗೂ ರಾಜ್ಯ ಪೊಲೀಸ್ ಪಡೆ ಸಿಬ್ಬಂದಿ ಭಾರತೀಯ ಯೋಧರು ಧರಿಸುವ ಸಮವಸ್ತ್ರ ಧರಿಸುವಂತಿಲ್ಲ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್‌

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ