ಅಮೆರಿಕ ರಾಜ್ಯ ಎಲೆಕ್ಷನ್: ಬೆಂಗಳೂರಿಗನಿಗೆ ಜಯ

By Kannadaprabha NewsFirst Published Nov 8, 2019, 9:14 AM IST
Highlights

ಬೆಂಗಳೂರಿನ ಸುಹಾಸ್ ಸುಬ್ರಮಣ್ಯಂ ವರ್ಜಿನಿಯಾ ರಾಜ್ಯದ ಜನ ಪ್ರತಿನಿಧಿ ಸದನಕ್ಕೆ ಲೌಡನ್ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಬೆಂಗಳೂರಿಗೆ ಹೆಮ್ಮೆ ತಂದಿದ್ದಾರೆ ಸುಹಾಸ್. 

ವಾಷಿಂಗ್ಟನ್ (ನ. 08): ಅಮೆರಿಕದ ರಾಜ್ಯ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಾಲ್ವರು ಭಾರತೀಯರಿಗೆ ಜಯ ಲಭಿ ಸಿದ್ದು, ಇವರಲ್ಲಿ ಒಬ್ಬ ಬೆಂಗಳೂರಿಗರೂ ಇದ್ದಾರೆ. ಬೆಂಗಳೂರಿನ ಸುಹಾಸ್ ಸುಬ್ರಮಣ್ಯಂ
ವರ್ಜಿನಿಯಾ ರಾಜ್ಯದ ಜನ ಪ್ರತಿನಿಧಿ ಸದನಕ್ಕೆ ಲೌಡನ್ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಡಿಮಾನಿಟೈಸೇಶನ್‌ಗೆ 3 ವರ್ಷ: ಅಪನಗದೀಕರಣ ಮತ್ತೆ ಆದರೂ ಆಗಬಹುದು!

ಲೌಡನ್ ಜಿಲ್ಲೆಯಲ್ಲಿ ಭಾರತೀಯ ಮೂಲದವರ ಪ್ರಾಬಲ್ಯವೇ ಹೆಚ್ಚು. ಸುಬ್ರ ಮಣ್ಯಂ ಅವರ ತಾಯಿ ಮೂಲತಃ ಬೆಂಗಳೂರಿನವರು. ಅವರು 1979 ರಲ್ಲೇ ಅಮೆರಿಕಕ್ಕೆ ತೆರಳಿದ್ದು, ವೈದ್ಯೆಯಾಗಿ ಕೆಲಸ ಗಿಟ್ಟಿಸಿಕೊಂಡು ಕುಟುಂಬದ ಪೋಷಣೆ ಮಾಡಿದ್ದರು. ಸುಹಾಸ್ ಆರೋಗ್ಯ ನೀತಿ ನಿರೂಪಣಾ ತಂಡದಲ್ಲಿದ್ದರು ಹಾಗೂ ತಾಂತ್ರಿಕ ವಕೀಲರಾಗಿ ಕೆಲಸ ಮಾಡಿದ ವರು. ತಮ್ಮ ಜಯದ ಬಗ್ಗೆ ಹರ್ಷಿಸಿರುವ ಸುಹಾಸ್,  ‘ನಾನು ಲೌಡನ್ ಹಾಗೂ ಪ್ರಿನ್ಸ್ ವಿಲಿಯಂ ಜಿಲ್ಲೆಗಳ ಜನರ ಎಲ್ಲ ಅಹವಾಲು ಕೇಳುವೆ. ಅವಿಶ್ರಾಂತವಾಗಿ ದುಡಿಯುವೆ. ನಿಮ್ಮ ಸಬಲೀ ಕರಣಕ್ಕಾಗಿ ಶ್ರಮಿಸುವೆ. ಇನ್ನು ಭರವಸೆ ಕೊಡುವುದು ಮುಗಿಯಿತು. ಈಗ ಏನಿದ್ದರೂ ಕೆಲಸ ಮಾಡುವುದು’ ಎಂದಿದ್ದಾರೆ. ಸುಹಾಸ್ ಅವರಲ್ಲದೆ ಗೆದ್ದ ಇತರ ಭಾರತೀ ಯರೆಂದರೆ ಘಜಾಲಾ ಹಾಷ್ಮಿ, ಮನೋ ರಾಜು ಹಾಗೂ ಡಿಂಪಲ್ ಅಜ್ಮೇರಾ. 

 

My promise to the people of Loudoun and Prince William: I will always listen to you, work tirelessly for you, and do everything I can to empower you. The campaign is over, but my work for you has just begun.

— Suhas Subramanyam (@SuhasforVA)

Proud of all the Americans who showed up to vote yesterday, electing a set of hopeful, forward-thinking leaders primed to protect Medicaid, draw fair voting maps, and reduce gun violence. A great night for our country—one that’ll leave a lasting legacy.

— Barack Obama (@BarackObama)

 

click me!