Nepal: ಭಾರತದ ಎಚ್ಚರಿಕೆ ಕಡೆಗಣಿಸಿ ಚೀನಾ ಬಲೆಗೆ ಬಿದ್ದ ನೇಪಾಳ; ಭಾರತೀಯ ರಾಜತಾಂತ್ರಿಕ ದೂರದೃಷ್ಟಿಗೆ ಸಾಟಿಯೇ ಇಲ್ಲ ಎನ್ನುವುದಕ್ಕೆ ಆ ಒಂದು ಕಾರಣವೇ ಸಾಕ್ಷಿ!

Published : Aug 31, 2026, 05:23 PM IST
India-Nepal

ಸಾರಾಂಶ

ಭಾರತದ ಎಚ್ಚರಿಕೆಯನ್ನು ಕಡೆಗಣಿಸಿ ಚೀನಾದ 'ಬೆಲ್ಟ್ ಅಂಡ್ ರೋಡ್' ಯೋಜನೆಗೆ ನೇಪಾಳ ಕೈಹಾಕಿತ್ತು. ಆದರೆ, ಇತ್ತೀಚಿನ ಪ್ರಕೃತಿ ವಿಕೋಪದಿಂದ ಚೀನಾ ನಿರ್ಮಿತ ಹೆದ್ದಾರಿ ನಾಶವಾಗಿದ್ದು, ಇದು ಭಾರತದ ರಾಜತಾಂತ್ರಿಕ ದೂರದೃಷ್ಟಿ ಮತ್ತು ಚೀನಾದ ಕಳಪೆ ಯೋಜನೆಗೆ ಸಾಕ್ಷಿಯಾಗಿದೆ.

ದೇವಭೂಮಿ ಹಿಮಾಲಯಕ್ಕೂ ಮತ್ತು ತಾಯಿ ಭಾರತೀಗೂ ಯುಗಯುಗಾಂತರಗಳ ಕರುಳಬಳ್ಳಿ ಸಂಬಂಧವಿದೆ. ಭಾರತವು ನೆರೆಯ ದೇಶಗಳನ್ನು ತನ್ನ ಸ್ವಂತ ಕುಟುಂಬದಂತೆ ಗೌರವಿಸುತ್ತಾ, 'ವಸುಧೈವ ಕುಟುಂಬಕಂ' ತತ್ವದಡಿ ಸದಾ ರಕ್ಷಾಕವಚವಾಗಿ ನಿಂತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಹೋದರ ರಾಷ್ಟ್ರವಾದ ನೇಪಾಳ, ನೈಜ ಬಾಂಧವ್ಯದ ಬೆಲೆಯನ್ನು ಮರೆತು ಭಾರತ ವಿರೋಧಿ ಭಾವನೆಗಳನ್ನು ಪ್ರಚೋದಿಸುತ್ತಾ, ಡ್ರಾಗನ್ ಚೀನಾದ ಮೃಗೀಯ ಆಸೆಗೆ ತನ್ನ ಮಡಿಲನ್ನು ಹಾಸಿದ್ದು ದುರಂತದ ಸಂಗತಿಯಾಗಿತ್ತು. ಅಷ್ಟಕ್ಕೂ ಆಗಿದ್ದೇನು? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಮೊದಲೇ ಅಪಾಯವನ್ನು ಮನಗಂಡ ಭಾರತ!

ಶ್ರೀಲಂಕಾ, ಬಾಂಗ್ಲಾದೇಶಗಳ ಸಾಲದ ದುರಂತವನ್ನು ಕಣ್ಣಾರೆಯಾಗಿ ಕಂಡಿದ್ದ ಭಾರತ, ಚೀನಾದ ನಯವಂಚಕ 'ಬೆಲ್ಟ್ ಅಂಡ್ ರೋಡ್' ಯೋಜನೆಗಳ ಅಪಾಯದ ಬಗ್ಗೆ ನೇಪಾಳಕ್ಕೆ ಮೊದಲೇ ಎಚ್ಚರಿಕೆ ನೀಡಿತ್ತು. ಆದರೆ, ರಾಜಕೀಯ ಲಾಭಕ್ಕಾಗಿ ಭಾರತದ ಮಮತೆಯ ಎಚ್ಚರಿಕೆಯನ್ನು ತಳ್ಳಿಹಾಕಿದ ನೇಪಾಳ, ಹಿಮಾಲಯದ ಸೂಕ್ಷ್ಮತೆಯನ್ನು ಲೆಕ್ಕಿಸದೇ ಚೀನಾದೊಂದಿಗೆ ಸೇರಿ 800 ಕಿ.ಮೀ ಉದ್ದದ 'ಫ್ರೆಂಡ್‌ಶಿಪ್ ಹೈವೇ' ನಿರ್ಮಾಣಕ್ಕೆ ಕೈಹಾಕಿತು.

ಪ್ರಕೃತಿಯೇ ಮುನಿದರೆ ತಡೆಯುವವರಾರು?

ಚೀನಾ-ನೇಪಾಳದ ಈ ಕೃತಕ ಮೈತ್ರಿಗೆ ಹಿಮಾಲಯವೇ ಗೋಡೆಯಾಗಿ ನಿಂತಿದೆ. ಆಗಸ್ಟ್ 26 ರಂದು ಸಂಭವಿಸಿದ ಭೀಕರ ಹಿಮನದಿ ಪ್ರವಾಹ ಮತ್ತು ಪ್ರಕೃತಿಯ ವಿಕೋಪಕ್ಕೆ ಚೀನಾ ನಿರ್ಮಿಸಿದ 800 ಕಿ.ಮೀ ಹೆದ್ದಾರಿ, ಸೇತುವೆಗಳು ಹಾಗೂ ಒಣ ಬಂದರುಗಳು ಕ್ಷಣಾರ್ಧದಲ್ಲಿ ಕೊಚ್ಚಿಹೋಗಿ ಇಂದು 'ಸಾವಿನ ಕೂಪ'ವಾಗಿ ಮಾರ್ಪಟ್ಟಿವೆ.

ಭಾರತದ ರಾಜತಾಂತ್ರಿಕ ಹಿರಿಮೆ!

ಭಾರತವು ಎಂದಿಗೂ ಪರಿಸರ ಮತ್ತು ಪ್ರಕೃತಿಯ ನಿಯಮಗಳನ್ನು ಮೀರಿ, ನೆರೆಯವರನ್ನು ಸಾಲದ ಬಲೆಗೆ ನೂಕುವ ಸ್ವಾರ್ಥ ಯೋಜನೆಗಳನ್ನು ರೂಪಿಸುವುದಿಲ್ಲ. ಚೀನಾದ ಜಾರುವ ತಂತ್ರಗಳು ಮತ್ತು ಕಳಪೆ ಅಭಿವೃದ್ಧಿ ಮಾದರಿಗಳು ಪ್ರಕೃತಿಯ ಎದುರು ಹೇಗೆ ಮಂಡಿಯೂರುತ್ತವೆ ಎಂಬುದಕ್ಕೆ ಈ ದುರಂತವೇ ಸಾಕ್ಷಿ.

ಸುರಕ್ಷತೆಗೆ ಎಂದರೆ ಭಾರತ!

ನೇಪಾಳಕ್ಕೆ ಭಾರತ ಕೇವಲ ಭೌಗೋಳಿಕ ಗಡಿಯಲ್ಲ, ಅದು ಸಂಸ್ಕೃತಿ ಮತ್ತು ಜೀವನಾಡಿಯ ಭಾಗ. ಭಾರತೀಯ ರಾಜತಾಂತ್ರಿಕತೆಯು ಆತುರದ ಲಾಭಕ್ಕಿಂತ ಸುಸ್ಥಿರತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತದೆ ಎಂಬುದನ್ನು ಇಡೀ ಜಗತ್ತು ಇಂದು ಕಣ್ಣಾರೆ ಕಾಣುತ್ತಿದೆ. ನೈಜ ಪ್ರೀತಿ ಮತ್ತು ಕಳಕಳಿ ಭಾರತದಲ್ಲಿದೆಯೇ ಹೊರತು ಸ್ವಾರ್ಥಿ ಚೀನಾದ ಮಡಿಲಲ್ಲಲ್ಲ ಎಂಬುದನ್ನು ಕಾಲವೇ ಸಾಬೀತುಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೆಹಲಿಯಲ್ಲಿ ಮತ್ತೊಮ್ಮೆ ನಿರ್ಭಯಾ ಕೇಸ್‌: 47 ಕಿ.ಮೀ ನಾನ್‌ ಸ್ಟಾಪ್‌ ಪ್ರಯಾಣಿಸಿದ ಸ್ಲೀಪರ್‌ ಬಸ್‌ನಲ್ಲಿ 16ರ ಬಾಲಕಿಯ ಗ್ಯಾಂಗ್‌ರೇ*
'ಮಹಿಳೆಯರು ಚಿನ್ನದ ಒಡವೆಯಂತೆ ಮನೆಯಲ್ಲೇ ಇರಬೇಕು': ಇಸ್ಲಾಮಿಕ್ ಧರ್ಮಗುರು ಶೇಕ್ ಅಬೂಬಕರ್