ಇಂದು ಅಗ್ನಿ-5 ಕ್ಷಿಪಣಿ ಪರೀಕ್ಷೆ ಮಾಡಲಿರುವ ಭಾರತ? ತವಾಂಗ್‌ ಚಕಮಕಿ ನಡುವೆ ರಕ್ಷಣಾ ಪಡೆಗಳಿಗೆ ಮತ್ತಷ್ಟು ಬಲ!

By Santosh NaikFirst Published Dec 15, 2022, 12:04 PM IST
Highlights

ಭಾರತವು ಅಭಿವೃದ್ಧಿಪಡಿಸಿದ ಮಧ್ಯಮ ಮತ್ತು ದೀರ್ಘ-ಶ್ರೇಣಿಯ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಗಳ ಸರಣಿಯಲ್ಲಿ ಅಗ್ನಿ-5 ಐದನೆಯದು. ಕ್ಷಿಪಣಿಯನ್ನು ಮೊದಲ ಬಾರಿಗೆ 2012 ರಲ್ಲಿ ಪರೀಕ್ಷೆ ಮಾಡಲಾಗಿತ್ತು. ನಂತರದ ಪರೀಕ್ಷೆಗಳನ್ನು 2013, 2015, 2016, 2018 ಮತ್ತು 2021 ರಲ್ಲಿ ನಡೆಸಲಾಯಿತು. ಇಂದು ಒಡಿಶಾ ಕರಾವಳಿಯಲ್ಲಿ ಹೊಸ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಅದಕ್ಕಾಗಿ ರಕ್ಷಣಾ ಇಲಾಖೆ ಅಲರ್ಟ್‌ ನೋಟಿಸ್‌ ಕೂಡ ನೀಡಿದೆ.
 

ನವದೆಹಲಿ (ಡಿ.15): ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಯಾವುದೇ ದಾಳಿಯನ್ನು ಎದುರಿಸಲು ಭಾರತವು ಸನ್ನದ್ಧವಾಗಿದೆ. ಡಿಸೆಂಬರ್‌ 9 ರಂದು ಅರುಣಾಚಲ ಪ್ರದೇಶದ ತವಾಂಗ್‌ ಭಾಗದಲ್ಲಿ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಲು ಯತ್ನಿಸಿದ ಪಿಎಲ್‌ಎ ಪಡೆಗಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದಾಗ ಸೇನಾಪಡೆಗಳ ಶಕ್ತಿಯ ಬಗ್ಗೆ ಮತ್ತೊಮ್ಮೆ ಜಗತ್ತಿಗೆ ಸಾಬೀತಾಗಿದೆ. ಇತ್ತೀಚೆಗೆ ಚೀನಾ ಗಡಿ ಭಾಗದಲ್ಲಿ ತನ್ನ ತಂಟೆಗಳನ್ನು ಹೆಚ್ಚಳ ಮಾಡುತ್ತಿರುವ ಕಾರಣಕ್ಕೆ ಭಾರತ ಈ ಪ್ರದೇಶದಲ್ಲಿ ತನ್ನ ಕಣ್ಗಾವಲನ್ನು ಮತ್ತಷ್ಟು ಹೆಚ್ಚಿಸಿದೆ. ಚೀನಾದ ವಾಯುಪಡೆಗಳು ಗಡಿಭಾಗದಲ್ಲಿ ಹೆಚ್ಚಿನ ಚಟುವಟಿಕೆಯನ್ನು ನಡೆಸುತ್ತಿರುವುದನ್ನು ಭಾರತದ ಸೇನೆ ನೋಡಿದ ಬೆನ್ನಲ್ಲಿಯೇ ಅರುಣಾಚಲ ಪ್ರದೇಶದಲ್ಲಿ ಭಾರತದ ವಾಯುಪಡೆ ಕೂಡ ತನ್ನ ಗಸ್ತು ಪ್ರಕ್ರಿಯೆ ಆರಂಭ ಮಾಡಿದೆ. 300ಕ್ಕೂ ಅಧಿಕ ಸೈನಿಕರೊಂದಿಗೆ ಭಾರತದ ಕಡೆಯ ಮೇಲೆ ದಾಳಿ ಮಾಡಲು ಭಾರೀ ತಯಾರಿಯಲ್ಲಿ ಬಂದಿದ್ದ ಚೀನಾಗೆ, ಭಾರತದಿಂದ ದಿಟ್ಟ ಉತ್ತರ ಹೊರತಾಗಿ ಮತ್ತೇನೂ ಸಿಕ್ಕಿರಲಿಲ್ಲ. ಅರುಣಾಚಲ ಪ್ರದೇಶ ಮತ್ತು ಲಡಾಖ್‌ ಭಾಗದ ಮೇಲೆ ಕೆಟ್ಟ ಕಣ್ಣಿಟ್ಟಿರುವ ಚೀನಾಕ್ಕೆ ಕಠಿಣ ಸಂದೇಶ ನೀಡುವ ಭಾರತವು ಕೆಲ ಸರಣಿ ಚಟುವಟಿಕೆಗಳನ್ನು  ನಿಗದಿ ಮಾಡಿದೆ. ಅದರಲ್ಲಿ ಅಗ್ನಿ-5 ಕ್ಷಿಪಣಿಯ ಪರೀಕ್ಷೆ ಕೂಡ ಒಂದಾಗಿದೆ.

ಇಂದು ನಡೆಯಬಹುದು ಅಗ್ನಿ-5 ಕ್ಷಿಪಣಿ ಪರೀಕ್ಷೆ?: ಚೀನಾ ಪಾಲಿಗೆ ಬಹುದೊಡ್ಡ ಆತಂಕ ಇರುವುದು ಭಾರತದ ಅಗ್ನಿ-5 ಕ್ಷಿಪಣಿಗಳ ಬಗ್ಗೆ. ಭಾರತದ ಈ ಕ್ಷಿಪಣಿಯ ಬಗ್ಗೆ ಹೆಚ್ಚೆಚ್ಚು ಮಾಹಿತಿ ಸಂಗ್ರಹ ಮಾಡುವ ನಿಟ್ಟಿನಲ್ಲಿ ಚೀನಾ ಪ್ರಯತ್ನಪಟ್ಟರೂ ಅದರಲ್ಲಿ ಯಶಸ್ವಿಯಾಗಿಲ್ಲ. ಇಂಥ ಅಗ್ನಿ-5 ಕ್ಷಿಪಣಿ ಪರೀಕ್ಷೆ ಇಂದು ಒಡಿಶಾ ಕರಾವಳಿಯಲ್ಲಿ ನಡೆಯುವ ಸಾಧ್ಯತೆ ಇದ್ದು, ಅದಕ್ಕಾಗಿ ರಕ್ಷಣಾ ಪಡೆಗಳಿಗೆ ಅಲರ್ಟ್‌ ನೋಟಿಸ್‌ ಕೂಡ ಜಾರಿಯಾಗಿದೆ.   ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಡಿಸೆಂಬರ್ 15-16 ರಂದು ಅಗ್ನಿ-V ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯ ಪರೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಬಂಗಾಳ ಕೊಲ್ಲಿಯನ್ನು ಹಾರಾಟ ನಿಷೇಧ ವಲಯ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಕ್ಷಿಪಣಿ ಪರೀಕ್ಷೆಗೆ ಮುಂಚಿತವಾಗಿ, ಚೀನಾ ಡಿಸೆಂಬರ್ 6 ರಂದು ಹಿಂದೂ ಮಹಾಸಾಗರಕ್ಕೆ ಚೀನಾ ತನ್ನ ಬೇಹುಗಾರಿಕಾ ಹಡಗನ್ನು ಕಳುಹಿಸಿತ್ತು. ಪರೀಕ್ಷೆಗೆ ಒಳಪಡುವ ಸಾಧ್ಯತೆಯಿರುವ ಕ್ಷಿಪಣಿಯು ಗರಿಷ್ಠ 5,400 ಕಿಲೋಮೀಟರ್ ದೂರದವರೆಗೆ ಹಾರಲಿದೆ ಎಂದು ಹೇಳಲಾಗಿದೆ.

ಭಾರತದ ಕ್ಷಿಪಣಿ ಪರೀಕ್ಷೆ ಮೇಲೆ ನಿಗಾಕ್ಕೆ China ಗುಪ್ತಚರ ಹಡಗು..!

ಏನಿದು ಅಗ್ನಿ-5 ಕ್ಷಿಪಣಿ: ಭಾರತವು ಅಭಿವೃದ್ಧಿಪಡಿಸಿದ ಮಧ್ಯಮ ಮತ್ತು ದೀರ್ಘ-ಶ್ರೇಣಿಯ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿಗಳ ಸರಣಿಯಲ್ಲಿ ಅಗ್ನಿ-5 ಐದನೆಯದು. ಕ್ಷಿಪಣಿಯನ್ನು ಮೊದಲು 2012 ರಲ್ಲಿ ಪರೀಕ್ಷೆ ಮಾಡಲಾಗಿತ್ತು. ನಂತರದ ಪರೀಕ್ಷೆಗಳನ್ನು 2013, 2015, 2016, 2018 ಮತ್ತು 2021 ರಲ್ಲಿ ನಡೆಸಲಾಗಿತ್ತು.

ಇನ್ಮುಂದೆ ಬ್ರಹ್ಮೋಸ್‌ ಕ್ಷಿಪಣಿಗೆ ಮೇಡ್‌ ಇನ್‌ ಇಂಡಿಯಾ ಬೂಸ್ಟರ್‌!

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) 2008 ರಲ್ಲಿ ಅಗ್ನಿ-5 ಅನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿತು. ಅಗ್ನಿ 5 ಕೂಡ ಜಲಾಂತರ್ಗಾಮಿ ಮೂಲಕ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಅಗ್ನಿ-5 ಆತಂಕ ಏಕೆ?: ಅಗ್ನಿ 5 ಯೋಜನೆಯು, 12,000-15,000 ಕಿಮೀ ವ್ಯಾಪ್ತಿಯಲ್ಲಿರುವ ಡಾಂಗ್‌ಫೆಂಗ್-41 ನಂತಹ ಕ್ಷಿಪಣಿಗಳನ್ನು ಹೊಂದಿರುವ ಚೀನಾದ ವಿರುದ್ಧ ಭಾರತದ "ಪರಮಾಣು ತಡೆ" ಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 5 ಸಾವಿರ ಕಿಲೋಮೀಟರ್‌ಗಳ ವ್ಯಾಪ್ತಿಯೊಂದಿಗೆ, ಅಗ್ನಿ-5 ಚೀನಾದ ಉತ್ತರದ ಭಾಗಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿಯೇ ಈ ಖಂಡಾಂತರ ಕ್ಷಿಪಣಿ ಚೀನಾಕ್ಕೆ ಭಾರೀ ತಲ್ಲಣ ಮೂಡಿಸಿದೆ. ಏತನ್ಮಧ್ಯೆ, ಚೀನಾದ ಸರ್ಕಾರಿ ಮಾಧ್ಯಮಗಳು ಈ ಕ್ಷಿಪಣಿಯು ವ್ಯಾಪ್ತಿ 8,000 ಕಿ.ಮೀ ಆಗಿರಬಹುದು ಎಂದು ಅಂದಾಜಿಸಿವೆ. ಇದರೊಂದಿಗೆ ಭಾರತೀಯ ವಾಯುಪಡೆ (IAF) ತನ್ನ ವಿಮಾನದ ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ಈಶಾನ್ಯ ರಾಜ್ಯದಲ್ಲಿ ಎರಡು ದಿನಗಳ ಯುದ್ಧ ವ್ಯಾಯಾಮ ಆರಂಭ ಮಾಡಲಿದೆ.

click me!