ಭಾರತದ ಗಡಿಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದ್ದಂತೆ ಇತ್ತ ಸೇನೆಯ ಶಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪ್ರಮುಖವಾಗಿ ವಾಯುಸೇನೆಗೆ ಅತ್ಯಾಧುನಿಕ ಫೈಟರ್ ಜೆಟ್, ಮಿಸೈಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿದೆ. ಇದೀಗ ವಾಯುಸೇನೆಗೆ ಮತ್ತೊಂದು ಶಸ್ತಾಸ್ತ್ರ ಸೇರಿಕೊಳ್ಳುತ್ತಿದೆ. ರುದ್ರಂ ವಿಕಿರಣ ವಿರೋಧಿ ಕ್ಷಿಪಣಿ ಯಶಸ್ವಿ ಪ್ರಯೋಗ ನಡೆಸಲಾಗಿದೆ
ನವದೆಹಲಿ(ಅ.09): DRDO ಅಭಿವೃದ್ದಿ ಪಡಿಸಿದ ಭಾರತದ ಮೊದಲ ವಿಕಿರಣ ವಿರೋಧಿ ಕ್ಷಿಪಣಿ(ಆ್ಯಂಟಿ ರೇಡಿಯೇಶನ್ ಮಿಸೈಲ್) ರುದ್ರಂ-1 ಪ್ರಯೋಗ ಯಶಸ್ವಿಯಾಗಿದೆ. ಸುಖೋಯ್-30 ಫೈಟರ್‌ಜೆಟ್ ಮೂಲಕ ಈ ಕ್ಷಿಪಣಿ ಪ್ರಯೋಗ ನಡೆಸಲಾಗಿದ್ದು, ಪರಿಣಾಮಕಾರಿಯಾದ ಫಲಿತಾಂಶ ಹೊರಬಿದ್ದಿದೆ.
ಚೀನಾ ಸಂಘರ್ಷ ವೇಳೆ ಭಾರತದ ‘ಶೌರ್ಯ’ ಪ್ರಯೋಗ ಯಶಸ್ವಿ!..
ರುದ್ರಂ-1 ಮಿಸೈಲ್ ಭಾರತದ ಏರ್‌ಫೋರ್ಸ್ ಯುದ್ಧ ವಿಮಾನಗಳಿಗೆ ಅತ್ಯಾಧುನಿಕಿ ಹಾಗೂ ವಿಕಿರಣ ಭೇದಿಸಸುವ ಯುದ್ಧತಂತ್ರದ ಸಾಮರ್ಥ್ಯವನ್ನು ಒದಗಿಸಲಿದೆ. ಹಲವು ಹಂತ ಹಾಗೂ ಹಲವು ಭಾಗಗಳಲ್ಲಿ ರುದ್ರಂ-1 ಮಿಸೈಲ್ ಪರೀಕ್ಷೆ ನಡೆಸಲಾಗಿದ್ದು, ಯಶಸ್ವಿಯಾಗಿದೆ.
400ಕಿ.ಮೀ ಗುರಿ ಸಾಮರ್ಥ್ಯದ ಭಾರತದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ಅಭಿವೃದ್ಧಿ ಪಡಿಸಿದ ಈ ಕ್ಷಿಪಣಿ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ತಿಳಿಸಿದ್ದಾರೆ.
ಪ್ರಾಯೋಗಿಕ ಹಂತದಲ್ಲಿ ಯುದ್ಧವಿಮಾನವಾದ ಸುಖೋಯ್-30MKI ಮೂಲಕ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಯಶಸ್ವಿಯಾಗಿರುವ ಕಾರಣ ಇದೀಗ ಮಿರಾಜ್ 2000, ಜಾಗ್ವಾರ್, HAL ತೇಜಸ್ ಹಾಗೂ HAL ಮಾರ್ಕ್ ಯುದ್ಧ ವಿಮಾನದಲ್ಲೂ ಅಳವಡಿಸಲಾಗುತ್ತದೆ.
100 ರಿಂದ 150 ಕಿಲೋಮೀಟರ್ ರೇಂಜ್ ಹೊಂದಿರುವ ಈ ಮಿಸೈಲ್, ಹೊಸ ಜನರೇಶನ್ ವಿಕಿರಣ ವಿರೋಧಿ ಕ್ಷಿಪಣಿಯಾಗಿದೆ. DRDO ಅಭಿವೃದ್ಧಿ ಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಕ್ಷಿಪಣಿ ಇದಾಗಿದೆ. ಸೂಪರ್‌ಸಾನಿಕ್, ಬ್ರಹ್ಮೋಸ್ ಬಳಿಕ ರಷ್ಯಾ ಜೊತೆ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿ ಫೈಟರ್ ವಿಮಾನದ ಮೂಲಕ ಗಾಳಿಯಿಂದ ನೆಲಕ್ಕೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
ರುದ್ರಂ-1 ಸಿಂಗಲ್ ಸ್ಟೇಜ್ ಮಿಸೈಲ್ ಆಗಿದ್ದು, 140 ಕೆಜಿ ತೂಕ ಹೊಂದಿದೆ. ಇದು ಡ್ಯುಯಲ್-ಪಲ್ಸ್ ಘನ ರಾಕೆಟ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಗಡಿಯಲ್ಲಿ ಶತ್ರುಗಳ ಚಲನವಲನಗಳ ಮೇಲೆ ನಿಘಾ ಇಡಲಿದೆ. ಶತ್ರುಗಳ ರೇಡಾರ್ ಕಣ್ತಪ್ಪಿಸಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
ಚೀನಾ ಜೊತೆಗಿನ ಗಡಿ ವಿವಾದದ ಬೆನ್ನಲ್ಲೇ ಭಾರತದ ಒಂದರ ಮೇಲೊಂದರಂತೆ ಕ್ಷಿಪಣಿ ಪ್ರಯೋಗ ನಡೆಸುತ್ತಿದೆ. ಇದು ಚೀನಾ ಹಾಗೂ ಪಾಕಿಸ್ತಾನದ ನಿದ್ದೆಗೆಡಿಸಿದೆ.