ಚೀನಾ, ಪಾಕ್‌ ಮೇಲೆರಗಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ!

Published : Dec 16, 2022, 08:44 AM ISTUpdated : Dec 16, 2022, 09:48 AM IST
ಚೀನಾ, ಪಾಕ್‌ ಮೇಲೆರಗಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ!

ಸಾರಾಂಶ

ಇಡಿ ಚೀನಾ ಹಾಗೂ ಪಾಕಿಸ್ತಾನ ತಲುಪಬಲ್ಲ, ರಷ್ಯಾ, ಯುರೋಪ್‌ ಮತ್ತು ಆಫ್ರಿಖಾ ಖಂಡವನ್ನೂ ತಲುಪಬಲ್ಲ 5400 ಕಿಲೋಮೀಟರ್‌ಗಿಂತ ದೂರ ಹಾರುವ ಗುರಿಯ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ5 ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಮಾಡಿದೆ.  

ನವದೆಹಲಿ (ಡಿ.16): ಗಡಿಯಲ್ಲಿ ಪದೇ ಪದೇ ಚೀನಾ ತಗಾದೆ ತೆಗೆಯುತ್ತಿರುವಾಗಲೇ ಇಡೀ ಚೀನಾ, ಪಾಕಿಸ್ತಾನ ತಲುಪಬಲ್ಲ, ರಷ್ಯಾ, ಯುರೋಪ್‌, ಆಫ್ರಿಕಾ ಖಂಡವನ್ನೂ ಮುಟ್ಟಬಲ್ಲ 5000 ಕಿ.ಮೀ.ಗಿಂತ ದೂರ ಹಾರುವ ಗುರಿಯ ಅಣ್ವಸ್ತ್ರ ಸಾಮರ್ಥ್ಯದ ಬ್ಯಾಲಿಸ್ಟಿಕ್‌ ಕ್ಷಿಪಣಿ ಅಗ್ನಿ-5 ಅನ್ನು ಭಾರತ ಗುರುವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಒಡಿಶಾ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪ ಪ್ರದೇಶದಿಂದ ಚಿಮ್ಮಿದ ಈ ಕ್ಷಿಪಣಿ ತನ್ನ ನಿಗದಿತ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದೆ. ಈ ಕ್ಷಿಪಣಿ ಪರೀಕ್ಷೆ ಸಲುವಾಗಿ ‘ಅಗ್ನಿ-5’ ಉಡಾವಣೆಯಾಗುವ ಸುತ್ತಲಿನ 5400 ಕಿ.ಮೀ. ಸರಹದ್ದಿನಲ್ಲಿ ವಿಮಾನ ಹಾರಾಟ ನಿರ್ಬಂಧಿಸುವಂತೆ ವಿಮಾನ ಕಂಪನಿಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿಂದೆ ನಡೆದ 6 ಪರೀಕ್ಷೆ ವೇಳೆ ಅಗ್ನಿ-5 ಕ್ಷಿಪಣಿ 5000 ಕಿ.ಮೀ. ಸಾಗಬಲ್ಲ ಸಾಮರ್ಥ್ಯದ ಪ್ರದರ್ಶನ ಮಾಡಿತ್ತು. ಆದರೆ ಈ ಸಲ ಕ್ಷಿಪಣಿಯಲ್ಲಿನ ತಂತ್ರಜ್ಞಾನ ಹಾಗೂ ಸಲಕರಣೆ ಬದಲಿಸಲಾಗಿದ್ದು, ಕ್ಷಿಪಣಿ ಇನ್ನಷ್ಟುಹಗುರಗೊಂಡಿದೆ. ಹೀಗಾಗಿ ಅಗತ್ಯ ಬಿದ್ದರೆ 5 ಸಾವಿರ ಕಿ.ಮೀ.ಗಿಂತ ಹೆಚ್ಚು ದೂರ ಹಾರಬಲ್ಲ ಸಾಮರ್ಥ್ಯ ಅಗ್ನಿ-5 ಕ್ಷಿಪಣಿಗೆ ಇದ್ದು, ಅದರಲ್ಲಿ ಯಶ ಕಂಡಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.

ಚೀನಾಗೆ ಆತಂಕ: ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗುವುದರೊಂದಿಗೆ ಭಾರತದ ಮೇಲೆ ಮುಗಿಬೀಳಲು ಯತ್ನಿಸುತ್ತಿರುವ ಚೀನಾಕ್ಕೆ ಒಂದಷ್ಟುಆತಂಕವಂತೂ ಎದುರಾದಂತಾಗಿದೆ. ಚೀನಾ ಬಳಿ ಡಾಂಗ್‌ಫೆಂಗ್‌-41 ಎಂಬ ಬಲಿಷ್ಠ ಕ್ಷಿಪಣಿ ಇದೆ. 12ರಿಂದ 15 ಸಾವಿರ ಕಿ.ಮೀ. ದೂರವನ್ನು ಆ ಕ್ಷಿಪಣಿ ಕ್ರಮಿಸಬಹುದಾಗಿದೆಯಾದರೂ, ಭಾರತ ಕೂಡ ಇಡೀ ಚೀನಾ ಮೇಲೆ ಲಗ್ಗೆ ಇಡಬಲ್ಲ ಕ್ಷಿಪಣಿ ಅಭಿವೃದ್ಧಿಪಡಿಸಿರುವುದು ಚಿಂತೆಯ ವಿಷಯವಾಗಿರುವುದಂತೂ ಸತ್ಯ ಎಂಬ ವಿಶ್ಲೇಷಣೆಗಳು ಇವೆ.

ಇಂದು ಅಗ್ನಿ-5 ಕ್ಷಿಪಣಿ ಪರೀಕ್ಷೆ ಮಾಡಲಿರುವ ಭಾರತ? ತವಾಂಗ್‌ ಚಕಮಕಿ ನಡುವೆ ರಕ್ಷಣಾ ಪಡೆಗಳಿಗೆ ಮತ್ತಷ್ಟು ಬಲ!

ಇದು 7ನೇ ಪರೀಕ್ಷೆ: ಗುರುವಾರ ನಡೆದಿರುವುದು ಅಗ್ನಿ-5 ಕ್ಷಿಪಣಿಯ 7ನೇ ಪರೀಕ್ಷೆ. ಈ ಕ್ಷಿಪಣಿಯನ್ನು 2012ರಲ್ಲಿ ಮೊದಲ ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದಾದ ತರುವಾಯ 2013, 2015, 2016, 2018 ಹಾಗೂ 2021ರಲ್ಲೂ ಕ್ಷಿಪಣಿ ಪರೀಕ್ಷೆಗೆ ಒಳಪಟ್ಟಿತ್ತು. ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ಸಬ್‌ಮರೀನ್‌ ಮೂಲಕವೂ ಈ ಕ್ಷಿಪಣಿಯನ್ನು ಉಡಾವಣೆ ಮಾಡಬಹುದಾಗಿದೆ. 2018ರಲ್ಲೇ ಇದು ರಕ್ಷಣಾಪಡೆ ಸೇರಿಕೊಂಡಿದೆ.

ಗಂಟೆಗೆ 29,401 ಕಿಲೋಮೀಟರ್‌ ವೇಗ: ಅಗ್ನಿ-5 ಭಾರತದ ಮೊದಲ ಮತ್ತು ಏಕೈಕ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದೆ. ಇದು ಭಾರತದ ಬಳಿ ಲಭ್ಯವಿರುವ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಲ್ಲಿ ಒಂದಾಗಿದೆ. 5 ಸಾವಿರ ಕಿಲೋಮೀಟರ್ ವ್ಯಾಪ್ತಿಯ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ ಏಕಕಾಲದಲ್ಲಿ ಬಹು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀಎಂಟ್ರಿ ವೆಹಿಕಲ್ (ಎಂಐಆರ್‌ವಿ) ಯನ್ನು ಹೊಂದಿದೆ. ಅಂದರೆ, ಇದನ್ನು ಏಕಕಾಲದಲ್ಲಿ ಅನೇಕ ಗುರಿಗಳನ್ನು ಟಾರ್ಗೆಟ್‌ ಮಾಡಬಹುದು. ಈ ಕ್ಷಿಪಣಿ ಒಂದೂವರೆ ಟನ್‌ಗಳಷ್ಟು ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲದು. ಇದರ ವೇಗ ಮ್ಯಾಕ್ 24, ಅಂದರೆ ಶಬ್ದದ ವೇಗಕ್ಕಿಂತ 24 ಪಟ್ಟು ಹೆಚ್ಚು. ಅಗ್ನಿ-5 ಉಡಾವಣಾ ವ್ಯವಸ್ಥೆಯಲ್ಲಿ ಕ್ಯಾನಿಸ್ಟರ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಕಾರಣದಿಂದಾಗಿ, ಈ ಕ್ಷಿಪಣಿಯನ್ನು ಎಲ್ಲಿ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಅಗ್ನಿ-5 ಕ್ಷಿಪಣಿಯ ಬಳಕೆ ಕೂಡ ತುಂಬಾ ಸುಲಭ, ಈ ಕಾರಣದಿಂದಾಗಿ ಅದನ್ನು ದೇಶದ ಯಾವುದೇ ಸ್ಥಳದಲ್ಲಿ ನಿಯೋಜಿಸಬಹುದು.

5,000 ಕಿ.ಮೀ ಗುರಿ ಸಾಮರ್ಥ್ಯದ ಭಾರತದ ಅಗ್ನಿ V ಕ್ಷಿಪಣಿ ಪರೀಕ್ಷೆ ಯಶಸ್ವಿ!

- ರಷ್ಯಾ, ಯುರೋಪ್‌ವರೆಗೂ ತಲುಪುವ ಅಣ್ವಸ್ತ್ರ ಕ್ಷಿಪಣಿ

- 5000 ಕಿ.ಮೀ.ಗಿಂತ ದೂರ ಹಾರುವ ಕ್ಷಿಪಣಿಯಿಂದ ಭಾರತಕ್ಕೆ ಆನೆಬಲ

- ಹಿಂದಿನ ಅಗ್ನಿ-5ಗಿಂತ ಈ ಸಲದ ಕ್ಷಿಪಣಿ ಹಗುರ, ಸುಧಾರಿತ

- ಹೀಗಾಗಿ 5000 ಕಿ.ಮೀ.ಗಿಂತ ದೂರ ಹಾರಬಲ್ಲದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!