ಭಾರತದ ಶ್ರೀಮಂತ ಮಹಿಳೆ, 2.77 ಲಕ್ಷ ಕೋಟಿ ಒಡತಿಯನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ!

By Santosh NaikFirst Published Oct 5, 2024, 11:37 AM IST
Highlights

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಕ್ಕಾಗಿ ಬಿಜೆಪಿ ಹರಿಯಾಣ ಘಟಕವು ಸಾವಿತ್ರಿ ಜಿಂದಾಲ್ ಸೇರಿದಂತೆ ನಾಲ್ವರು ನಾಯಕರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಹೊರಹಾಕಿದೆ.

ನವದೆಹಲಿ (ಅ.5):  ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹರಿಯಾಣ ಘಟಕವು ಶನಿವಾರ ಭಾರತದ 'ಶ್ರೀಮಂತ ಮಹಿಳೆ', 2.77 ಲಕ್ಷ ಕೋಟಿಯ ಒಡತಿ ಸಾವಿತ್ರಿ ಜಿಂದಾಲ್ ಸೇರಿದಂತೆ ನಾಲ್ವರು ನಾಯಕರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ. ಜಿಂದಾಲ್ ಅವರು 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವಾಗಲೇ ಈ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿಯಿಂದ ಅಮಾನತುಗೊಂಡಿರುವ ಇತರ ಮೂವರು ನಾಯಕರಲ್ಲಿ ಗೌತಮ್ ಸರ್ದಾನ, ತರುಣ್ ಜೈನ್ ಮತ್ತು ಅಮಿತ್ ಗ್ರೋವರ್ ಸೇರಿದ್ದಾರೆ. ಅವರು ಹಿಸಾರ್ ಅಸೆಂಬ್ಲಿ ವಿಭಾಗವನ್ನೂ ಪ್ರತಿನಿಧಿಸಿದ್ದರು.

ಇದಕ್ಕೂ ಮುನ್ನ ಸೆ.29ರಂದು ಇದೇ ಕಾರಣಕ್ಕೆ ಹರ್ಯಾಣ ಬಿಜೆಪಿ ಎಂಟು ನಾಯಕರನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿತ್ತು. ಈ ಪಟ್ಟಿಯಲ್ಲಿ ಮಾಜಿ ಸಚಿವ ರಂಜಿತ್ ಚೌಟಾಲಾ ಮತ್ತು ಮಾಜಿ ಶಾಸಕ ದೇವೇಂದ್ರ ಕಾಡ್ಯನ್ ಅವರ ಹೆಸರುಗಳಿವೆ.

Savitri Jindal: ಕಾಂಗ್ರೆಸ್ ಪಕ್ಷ ತೊರೆದ ಭಾರತದ ಶ್ರೀಮಂತ ಮಹಿಳೆ

ಸಾವಿತ್ರಿ ಜಿಂದಾಲ್ ಯಾರು?: ಸಾವಿತ್ರಿ ಜಿಂದಾಲ್ ಬಿಜೆಪಿಯ ಕುರುಕ್ಷೇತ್ರ ಸಂಸದ ನವೀನ್ ಜಿಂದಾಲ್ ಅವರ ತಾಯಿ ಮತ್ತು ದಿವಂಗತ ಕೈಗಾರಿಕೋದ್ಯಮಿ ಓಪಿ ಜಿಂದಾಲ್ ಅವರ ಪತ್ನಿ. ಅವರು ಹರ್ಯಾಣ ಸಚಿವ ಮತ್ತು ಹಿಸಾರ್‌ನ ಹಾಲಿ ಶಾಸಕ ಕಮಲ್ ಗುಪ್ತಾ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಹಿಸಾರ್ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ.

Latest Videos

ಒಂದೇ ವರ್ಷದಲ್ಲಿ 3 ಸ್ಥಾನ ಏರಿಕೆ, ಕಾಂಗ್ರೆಸ್‌ನ ನಾಯಕಿ ಈಗ ದೇಶದ 7ನೇ ಶ್ರೀಮಂತ ವ್ಯಕ್ತಿ!

click me!