ಕೊರೋನಾ ನಿಗ್ರಹದ ರಾಸಾಯನಿಕ ಪತ್ತೆ?

By Kannadaprabha NewsFirst Published Mar 4, 2020, 12:36 PM IST
Highlights

ಕೊರೋನಾ ನಿಗ್ರಹದ ರಾಸಾಯನಿಕ ಪತ್ತೆ| ಯಶಸ್ವಿಯಾದರೆ ವರ್ಷಾಂತ್ಯದ ವೇಳೆ ಪರೀಕ್ಷೆ| 26 ಔಷಧ ರಫ್ತಿಗೆ ಕೇಂದ್ರ ನಿರ್ಬಂಧ|  ಫೈಜರ್‌ ಷೇರು 4% ಜಿಗಿತ

ಮುಂಬೈ[ಮಾ.04]: ಮಾರಕ ಕೊರೋನಾ ವೈರಸ್‌ಗೆ ಔಷಧ ಪತ್ತೆ ನಿಟ್ಟಿನಲ್ಲಿ ಅಮೆರಿಕ ಮೂಲದ ಫೈಜರ್‌ ಕಂಪನಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮುಂಬೈ ಷೇರುಪೇಟೆಯಲ್ಲಿ ಆ ಕಂಪನಿಯ ಷೇರುಗಳ ಮೌಲ್ಯ ಶೇ.3.70ರಷ್ಟುಏರಿಕೆಯಾಗಿ 4416.40 ರು.ಗೆ ತಲುಪಿದೆ. ಕೊರೋನಾ ವೈರಸ್‌ ನಿಗ್ರಹಿಸುವ ಸಂಭಾವ್ಯತೆ ಹೊಂದಿರುವ ಕೆಲವೊಂದು ಸಂಯುಕ್ತಗಳನ್ನು ಗುರುತಿಸಿರುವುದಾಗಿ ಫೈಜರ್‌ ಕಂಪನಿ ಹೇಳಿಕೊಂಡಿದೆ. ಆದರೆ ಇದಿನ್ನೂ ಪ್ರಯೋಗದ ಹಂತದಲ್ಲಿದೆ. ಈ ಪ್ರಯೋಗ ಯಶಸ್ವಿಯಾದರೆ, ವರ್ಷಾಂತ್ಯದ ವೇಳೆಗೆ ಅದನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

ಇದುವರೆಗೆ ವಿಶ್ವದ ಯಾವುದೇ ದೇಶದಲ್ಲೂ ಕೊರೋನಾಗೆಂದು ಯಾವುದೇ ನಿರ್ದಿಷ್ಟಔಷಧಿ ಕಂಡುಹಿಡಿಯಲಾಗಿಲ್ಲ. ಎಚ್‌ಐವಿ ಸೋಂಕು ಹರಡದಂತೆ ತಡೆಯಲು ನೀಡಲಾಗುವ ಔಷಧ ಮತ್ತು ಕೆಲ ಜ್ವರದ ಔಷಧಗಳನ್ನೇ ಹಲವು ದೇಶಗಳಲ್ಲಿ ರೋಗ ನಿಯಂತ್ರಣಕ್ಕಾಗಿ ನೀಡಲಾಗುತ್ತಿದೆ.

26 ಔಷಧ ರಫ್ತಿಗೆ ಕೇಂದ್ರ ನಿರ್ಬಂಧ

ನವದೆಹಲಿ: ಚೀನಾದಲ್ಲಿ ವ್ಯಾಪಕವಾಗಿ ಹಬ್ಬಿರುವ ಮಾರಕ ಕೊರೋನಾ ವೈರಸ್‌ ಭಾರತದಲ್ಲೂ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಔಷಧೀಯ ಅಂಶಗಳು ಹಾಗೂ ಪ್ಯಾರಾಸಿಟಮಲ್‌, ವಿಟಮಿನ್‌ ಬಿ1, ಬಿ12 ಸೇರಿದಂತೆ ಔಷಧಕ್ಕೆ ಸಂಬಂಧಿಸಿದ 26 ಬಗೆಯ ವಸ್ತುಗಳ ರಫ್ತಿಗೆ ನಿರ್ಬಂಧ ಹೇರಿದೆ. ಭಾರತ ಪ್ರತಿ ವರ್ಷ 25 ಲಕ್ಷ ಕೋಟಿ ರು. ಮೌಲ್ಯದ ಔಷಧೀಯ ಅಂಶಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆ ಪೈಕಿ ಶೇ.70ರಷ್ಟುಅಂದರೆ 18 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳು ಚೀನಾದಿಂದಲೇ ಬರುತ್ತವೆ. ಔಷಧಗಳಿಗೆ ಈ ಔಷಧೀಯ ಅಂಶಗಳು ಕಚ್ಚಾ ವಸ್ತುಗಳು. ದೇಶದಲ್ಲೂ ಕೊರೋನಾ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ನಿರ್ಬಂಧ ಮಹತ್ವದ್ದಾಗಿದೆ.

click me!