ಕೋವಿಡ್‌ ಪಾಸಿಟಿವಿಟಿ ದರ ಶೇ.3.41ಕ್ಕೆ ಏರಿಕೆ: 35 ದಿನದ ಗರಿಷ್ಠ!

Published : Jul 27, 2021, 07:39 AM IST
ಕೋವಿಡ್‌ ಪಾಸಿಟಿವಿಟಿ ದರ ಶೇ.3.41ಕ್ಕೆ ಏರಿಕೆ: 35 ದಿನದ ಗರಿಷ್ಠ!

ಸಾರಾಂಶ

* ಪಾಸಿಟಿವಿಟಿ ದರ 35 ದಿನದ ಗರಿಷ್ಠ * ಕೋವಿಡ್‌ ಪಾಸಿಟಿವಿಟಿ ದರ ಶೇ.3.41ಕ್ಕೆ ಏರಿಕೆ * ಸಕ್ರಿಯ ಕೇಸು ಕೂಡ 4.11 ಲಕ್ಷಕ್ಕೆ ಹೆಚ್ಚಳ * 39,361 ಕೇಸ್‌, 416 ಸಾವು * 3ನೇ ಅಲೆ ಭೀತಿ ನಡುವೆಯೇ ಏರಿಕೆ

ನವದೆಹಲಿ(ಜು.27): ಸೋಮವಾರ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 39,361 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಇದೇ ಅವಧಿಯಲ್ಲಿ 416 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಆದರೆ, 35 ದಿನಗಳ ಬಳಿಕ ದೈನಂದಿನ ಪಾಸಿಟಿವಿಟಿ ದರ ಶೇ.3ಕ್ಕಿಂತ ಹೆಚ್ಚು (3.41%) ದಾಖಲಾಗಿದೆ. ಇದೇ ವೇಳೆ, ಸಕ್ರಿಯ ಸೋಂಕಿತರ ಸಂಖ್ಯೆ 4.08 ಲಕ್ಷದಿಂದ 4.11 ಲಕ್ಷಕ್ಕೆ ಹೆಚ್ಚಳವಾಗಿದೆ. 3ನೇ ಅಲೆ ಏಳಬಹುದು ಎಂದು ತಜ್ಞರು ಹೇಳುತ್ತಿರುವ ನಡುವೆಯೇ ಪಾಸಿಟಿವಿಟಿ ದರ ಹಾಗೂ ಸಕ್ರಿಯ ಪ್ರಕರಣಗಳು ಏರಿಕೆ ಆಗಿರುವುದು ಎಚ್ಚರಿಕೆ ಗಂಟೆ.

ಇನ್ನು ಚೇತರಿಕೆ ಪ್ರಮಾಣ ಶೇ.97.35ರಷ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 3.14ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,20,967ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.05 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ ಈವರೆಗೆ 43.51 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

- ಒಟ್ಟು ಸೋಂಕು 3.14 ಕೋಟಿ

- ಒಟ್ಟು ಸಾವು 4.20 ಲಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

After Ayodhya Badarinath Temple Hit: ಅಯೋಧ್ಯೆ ಬಳಿಕ ಬದರೀನಾಥ ದೇಗುಲದಲ್ಲೂ ಹುಂಡಿ ಅಕ್ರಮ, ತನಿಖೆಗೆ ಆದೇಶ
ರೂಫ್ ಕ್ಲೋಸ್ ಮಾಡಿ ಇಲ್ಲದಿದ್ದರೆ ಸಾವು ಖಚಿತ, ಮೋದಿ ಆಸ್ಟ್ರೇಲಿಯಾ ಕಾರ್ಯಕ್ರಮಕ್ಕೂ ಮುನ್ನ ಹತ್ಯೆ ಬೆದರಿಕೆ