ಯುದ್ಧದ ನಡುವೆಯೇ ಭಾರತಕ್ಕೆ ರಷ್ಯಾದಿಂದ ‘ಎಸ್‌-400’ ಆಗಮನ!

Published : Apr 16, 2022, 09:05 AM IST
 ಯುದ್ಧದ ನಡುವೆಯೇ ಭಾರತಕ್ಕೆ ರಷ್ಯಾದಿಂದ ‘ಎಸ್‌-400’ ಆಗಮನ!

ಸಾರಾಂಶ

* 2ನೇ ವಾಯುರಕ್ಷಣಾ ವ್ಯವಸ್ಥೆ ಭಾಗಗಳ ಪೂರೈಕೆ ಆರಂಭ * ಒಪ್ಪಂದದ 5ರ ಪೈಕಿ 2ನೇ ಏರ್‌ಡಿಫೆನ್ಸ್‌ ಸಿಸ್ಟಮ್‌ ಆಗಮನ * ಯುದ್ಧದ ನಡುವೆಯೇ ಭಾರತಕ್ಕೆ ರಷ್ಯಾದಿಂದ ‘ಎಸ್‌-400’ ಆಗಮನ

ನವದೆಹಲಿ(ಏ.16): ಉಕ್ರೇನ್‌ನೊಂದಿಗಿನ ಯುದ್ಧದ ಹೊರತಾಗಿಯೂ, ಭಾರತಕ್ಕೆ ಎರಡನೇ ಎಸ್‌-400 ವಾಯುರಕ್ಷಣಾ ವ್ಯವಸ್ಥೆಯನ್ನು ಪೂರೈಸುವ ಪ್ರಕ್ರಿಯೆಯನ್ನು ರಷ್ಯಾ ಆರಂಭಿಸಿದೆ. ಮಾಸಾಂತ್ಯದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಳಗಳು ತಿಳಿಸಿವೆ. ಇದರೊಂದಿಗೆ ಶೀಘ್ರವೇ ಭಾರತದ ವಾಯರಕ್ಷಣಾ ವ್ಯವಸ್ಥೆ ಮತ್ತಷ್ಟುಬಲಗೊಳ್ಳಲಿದೆ.

ಒಟ್ಟು ಇಂಥ 5 ಏರ್‌ ಡಿಫೆನ್ಸ್‌ ಸಿಸ್ಟಮ್‌ಗಳನ್ನು 37000 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಭಾರತ 2018ರಲ್ಲಿ ರಷ್ಯಾದ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೊದಲ ವ್ಯವಸ್ಥೆ 2021ರಲ್ಲಿ ಭಾರತಕ್ಕೆ ಪೂರೈಕೆಯಾಗಿದ್ದು ಅದನ್ನು ಭಾರತೀಯ ಸೇನೇ ಈಗಾಗಲೇ ಪಂಜಾಬ್‌ ಗಡಿಯಲ್ಲಿ ಅಳವಡಿಸಿದೆ.

‘ಎಸ್‌-400 ಟ್ರಯಂಫ್‌’ ರಷ್ಯಾ ಅಭಿವೃದ್ಧಿಪಡಿಸಿರುವ ವಿಶ್ವದ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯಾಗಿದೆ. ಇದರಲ್ಲಿನ ರಾಡಾರ್‌ಗಳು, ಶತ್ರು ದೇಶ ನಡೆಸುವ ದಾಳಿಯನ್ನು 1000 ಕಿ.ಮೀ ದೂರದಲ್ಲೇ ಪತ್ತೆ ಹಚ್ಚಿ ಅದನ್ನು ಸಮರ್ಥವಾಗಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿವೆ. ಜೊತೆಗೆ ಒಂದೇ ಬಾರಿಗೆ 30ಕ್ಕೂ ಹೆಚ್ಚು ದಾಳಿ ನಡೆದರೂ ಅದನ್ನು ಪತ್ತೆ ಹಚ್ಚಿ, ಪ್ರತಿದಾಳಿ ನಡೆಸುವ ಸಾಮರ್ಥ್ಯ ಇದಕ್ಕಿದೆ.

ಈ ವ್ಯವಸ್ಥೆಗಳನ್ನು ಪಾಕಿಸ್ತಾನ, ಚೀನಾ ಗಡಿ ಮತ್ತು ದೇಶದ ಇತರೆ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲು ಸೇನೆ ಉದ್ದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?