
ನವದೆಹಲಿ(ಡಿ.29): ಕೊರೋನಾ ರೂಪಾಂತರ ವೈರಸ್ ತಳಿ ಪತ್ತೆಯಾಗಿರುವ ಕಾರಣ ದೇಶದಲ್ಲಿ ತೀವ್ರ ಮುನ್ನಚ್ಚೆರಿಕೆ ವಹಿಸಲಾಗುತ್ತಿದೆ. ರೂಪಾಂತರ ವೈರಸ್ ತೀವ್ರವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎಚ್ಚರಿಕೆ ಅತೀ ಅಗತ್ಯವಾಗಿದೆ. ಬೆಂಗಳೂರು ಸೇರಿದಂತೆ ರೂಪಾಂತರ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಇದೀಗ ಬ್ರಿಟನ್ ವಿಮಾನಗಳ ನಿರ್ಬಂಧ ಮುಂದುವರಿಸುವು ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ.
ಕೊರೋನಾ ಅತೀ ಹೆಚ್ಚು ಬಲಿ ಪಡೆದಿದ್ದು ಪುರುಷರನ್ನೋ-ಮಹಿಳೆಯರೋ? ಇಲಾಖೆ ವರದಿ ಪ್ರಕಟ
ಬ್ರಿಟನ್‌ನಲ್ಲಿ ಕಾಣಿಸಿಕೊಂಡ ರೂಪಾಂತರ ವೈರಸ್ ತೀವ್ರವಾಗಿ ಹರಡು ಆರಂಭಿಸಿದಾಗ, ಭಾರತ ಡಿಸೆಂಬರ್ 31ರ ವರೆಗೆ ಬ್ರಿಟನ್ ವಿಮಾನ್‌ಗಳ ಮೇಲೆ ನಿರ್ಬಂಧ ಹೇರಿತ್ತು. ಆದರೆ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ 6 ಮಂದಿಯಲ್ಲಿ ರೂಪಾಂತರ ವೈರಸ್ ತಳಿ ಪತ್ತೆಯಾದ ಕಾರಣ ಇದೀಗ ಬ್ರಿಟನ್ ವಿಮಾನ ನಿರ್ಬಂಧವನ್ನು ಜವರಿ ವರೆಗೂ ಮುಂದುವರಿಸುವ ಸಾಧ್ಯತ ಇದೆ.
ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಈ ಕುರಿತು ಮಾಹಿತಿ ನೀಡಿದ್ದಾರೆ. ಬ್ರಿಟನ್ ವಿಮಾನಕ್ಕೆ ತಾತ್ಕಾಲಿಕ ನಿಬ್ರಂಧ ವಿಧಿಸುವ ಮೂಲಕ ಹರಡುವಿಕೆಯನ್ನು ತಡೆಯುಲು ಸಾಧ್ಯವಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ