ವಾಷಿಂಗ್ಟನ್: ರಷ್ಯಾದ ಮೇಲೆ ನಿರ್ಬಂಧ ಹೇರುವ ಮತ್ತು ರಷ್ಯಾದಿಂದ ತೈಲ, ಗ್ಯಾಸ್ ಆಮದು ಮಾಡಿಕೊಳ್ಳುತ್ತಿರುವ ಭಾರತ, ಚೀನಾದಂಥ ದೇಶಗಳ ಮೇಲೆ ಶೇ.100ರವರೆಗೆ ತೆರಿಗೆ ವಿಧಿಸಲು ಅವಕಾಶ ನೀಡುವ ಮಹತ್ವದ ವಿಧೇಯಕಕ್ಕೆ ಅಮೆರಿಕ ಸಂಸತ್ತಿನ ಕೆಳಮನೆ ಗುರುವಾರ ಅನುಮೋದನೆ ನೀಡಿದೆ. ಸಂಸತ್ತಿನ ಉಭಯಗಳ ಅನುಮೋದನೆ ಪಡೆದಿರುವ ಬಿಲ್ ಇದೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗೆ ಕಾದಿದೆ. ಅವರು ಸಹಿ ಹಾಕಿದರೆ ಅದು ಕಾಯ್ದೆಯ ಸ್ವರೂಪ ಪಡೆದುಕೊಳ್ಳಲಿದೆ.
ಬೇರೆ ದಾರಿ ಹುಡುಕಿ:
ವಿಧೇಯಕ ಅಂಗೀಕಾರಗೊಂಡ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡೆಮಾಕ್ರಟಿಕ್ ಪಕ್ಷದ ಸೆನೆಟರ್ ರಿಚರ್ಡ್ ಬ್ಲೂಮೆಂಥಲ್ ಅವರು, ಭಾರತ ಮತ್ತು ಚೀನಾವು ತೈಲ ಮತ್ತು ಗ್ಯಾಸ್ ಖರೀದಿಗೆ ಬೇರೆ ದಾರಿ ಹುಡುಕುವಂತೆ ಸೂಚಿಸಿದ್ದಾರೆ.
ಇಂಧನ ಭದ್ರತೆಗೆ ಬದ್ಧ:
ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ನೀಡುವ ಬಿಲ್ ಅಮೆರಿಕ ಅಂಗೀಕರಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಭಾರತ, ನಮ್ಮ ಆರ್ಥಿಕ ಹಿತಾಸಕ್ತಿ ಹಾಗೂ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದೆ.
09:04 AM (IST) Sep 18
08:26 AM (IST) Sep 18
ಈಶಾನ್ಯ ಭಾರತದ ಸಿಕ್ಕಿಂ ಗಡಿಯಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ 44.96 ಕಿ.ಮೀ. ಉದ್ದದ 'ಸಿವಾಕ್ ರಾಂಗ್ಪೋ ರೈಲು ಮಾರ್ಗ' ನಿರ್ಮಾಣವಾಗುತ್ತಿದೆ. 17,146 ಕೋಟಿ ರೂ. ವೆಚ್ಚದ ಈ ಯೋಜನೆಯ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, 2027ರ ಡಿಸೆಂಬರ್‌ಗೆ ಲೋಕಾರ್ಪಣೆಯಾಗಲಿದೆ. ಇದರಲ್ಲಿ ಭಾರತದ ಮೊದಲ ಸುರಂಗ ರೈಲು ನಿಲ್ದಾಣವೂ ಸೇರಿದೆ.
08:02 AM (IST) Sep 18
ರಷ್ಯಾದಿಂದ ತೈಲ ಮತ್ತು ಗ್ಯಾಸ್ ಖರೀದಿಸುವ ಭಾರತದಂತಹ ದೇಶಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುವ ವಿಧೇಯಕಕ್ಕೆ ಅಮೆರಿಕ ಸಂಸತ್ತು ಅನುಮೋದನೆ ನೀಡಿದೆ. ಈ ಬಿಲ್ ಅಧ್ಯಕ್ಷ ಟ್ರಂಪ್ ಸಹಿಗಾಗಿ ಕಾಯುತ್ತಿದ್ದು, ಭಾರತವು ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.