ದೇಶದ 45 ಪ್ರದೇಶಗಳಲ್ಲಿ ಶನಿವಾರ ಏಕಕಾಲಕ್ಕೆ ನಡೆದ ಉದ್ಯೋಗ ಮೇಳದಲ್ಲಿ 51000 ಜನರಿಗೆ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಪ್ರಮಾಣಪತ್ರ ವಿತರಿಸಿದರು. ಇದರೊಂದಿಗೆ ಈವರೆಗೆ ಆಯೋಜಿಸಲಾದ ಒಟ್ಟು 20 ಉದ್ಯೋಗ ಮೇಳಗಳ ಮೂಲಕ ಒಟ್ಟು 12.75 ಲಕ್ಷ ಜನರಿಗೆ ಮೋದಿ ಉದ್ಯೋಗ ಪ್ರಮಾಣಪತ್ರ ವಿತರಿಸಿದಂತೆ ಆಯಿತು.
ವರ್ಚ್ಯುವಲ್ ಆಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ವಿವಿಧ ರಾಷ್ಟ್ರಗಳ ಜತೆ ಭಾರತ ಮಾಡಿಕೊಂಡಿರುವ 40 ಮುಕ್ತ ವ್ಯಾಪಾರ ಒಪ್ಪಂದಗಳು (ಎಫ್‌ಟಿಎಗಳು) ಯುವಜನತೆಗೆ ವೃತ್ತಿಜೀವನದ ಅವಕಾಶಗಳ ಹೊಸ ಕದ ತೆರೆಯುತ್ತಿವೆ. ಭಾರತದ ಯುವಜನತೆ ಪ್ರತಿಭೆ ಮತ್ತು ಕೌಶಲ್ಯ ಇಡೀ ವಿಶ್ವದ ನಂಬಿಕೆ ಗಳಿಸಿದ್ದು ಅದು ಭಾರತದ ಅನ್ವೇಷಕರು, ಉದ್ಯಮಿಗಳು, ಯುವಶಕ್ತಿಯ ಮೇಲೆ ಭಾರಿ ನಿರೀಕ್ಷೆ ಹೊಂದಿದೆ’ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿನ ಗಬ್ಬೂರು ಕ್ರಾಸ್ ಬಳಿ ನಿರ್ಮಿಸಿರುವ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಕಾಹೇರ್) ಜೆಜಿಎಂಎಂ ವೈದ್ಯಕೀಯ ಕಾಲೇಜು ಕಟ್ಟಡ, ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾರದೆ ವೈದ್ಯರ ಸಲಹೆ ಮೇರೆಗೆ ಹೋಟೆಲ್‌ನಲ್ಲೇ ವಿಶ್ರಾಂತಿ ಪಡೆದರು.