ಜನವರಿಯಲ್ಲಿ ಮೊದಲ ಲಸಿಕೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಸುಳಿವು!

Published : Dec 21, 2020, 07:40 AM ISTUpdated : Dec 21, 2020, 08:00 AM IST
ಜನವರಿಯಲ್ಲಿ ಮೊದಲ ಲಸಿಕೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಸುಳಿವು!

ಸಾರಾಂಶ

 ಬ್ರಿಟನ್‌, ಅಮೆರಿಕ ಮತ್ತು ಇಸ್ರೇಲ್‌ ರಾಷ್ಟ್ರಗಳಲ್ಲಿ ಕೊರೋನಾ ಲಸಿಕೆ ಆರಂಭ| ಭಾರತದಲ್ಲಿ ಜನವರಿಯಲ್ಲಿ ಮೊದಲ ಲಸಿಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಸುಳಿವು

ನವದೆಹಲಿ(ಡಿ.21): ಬ್ರಿಟನ್‌, ಅಮೆರಿಕ ಮತ್ತು ಇಸ್ರೇಲ್‌ ರಾಷ್ಟ್ರಗಳಲ್ಲಿ ಕೊರೋನಾ ಲಸಿಕೆ ಆರಂಭವಾಗಿರುವ ಬೆನ್ನಲ್ಲೇ, ಹೊಸ ವರ್ಷದ ಮೊದಲ ತಿಂಗಳಲ್ಲೇ ದೇಶದಲ್ಲೂ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಬಹುದಾದ ನಿರೀಕ್ಷೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಲಸಿಕೆ ಕುರಿತಾದ ಜನ ಸಾಮಾನ್ಯರ ಪ್ರಶ್ನೋತ್ತರಗಳನ್ನು ಒಳಗೊಂಡ ವರದಿ ಬಿಡುಗಡೆ ಮಾಡಿತ್ತು.

ಈ ಬಗ್ಗೆ ಭಾನುವಾರ ಮಾತನಾಡಿದ ಅವರು, ‘ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿ ನಮ್ಮ ಮೊದಲ ಆದ್ಯತೆಯಾಗಿದೆ. ಈ ವಿಚಾರಗಳಲ್ಲಿ ಯಾವುದೇ ಕಾರಣಕ್ಕೆ ರಾಜಿಯಾಗಲ್ಲ. ವೈಯಕ್ತಿಕವಾಗಿ 2021ರ ಜನವರಿ ಯಾವುದೇ ವಾರದಲ್ಲಿ ದೇಶದ ಜನತೆಗೆ ಮೊದಲ ಹಂತದ ಕೊರೋನಾ ಲಸಿಕೆ ನೀಡಲಿದ್ದೇವೆ ಎಂಬ ಆಶಾಭಾವನೆ ಇದೆ’ ಎಂದರು.

ದೇಶದಲ್ಲಿ ತುರ್ತು ಬಳಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಭಾರತದ ಕೋವ್ಯಾಕ್ಸಿನ್‌, ಅಮೆರಿಕದ ಫೈಝರ್‌-ಬಯೋಎನ್‌ಟೆಕ್‌, ಬ್ರಿಟನ್‌ನ ಕೋವಿಶೀಲ್ಡ್‌ ಲಸಿಕೆಗಳನ್ನು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಪರೀಕ್ಷೆಗೊಳಪಡಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮಕಥಾ ವಾಚಿಸುತ್ತಲೇ ಕೊನೆಯುಸಿರು: ರಾಮಮಂದಿರ ಚಳುವಳಿಯ ಹಿರಿಯ ಸಂತ ಡಾ ರಾಮವಿಲಾಸ್ ದಾಸ್ ಇನ್ನಿಲ್ಲ...
ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ನವಜಾತ ಶಿಶು ಸಾವು