LIVE NOW
Published : May 08, 2026, 07:29 AM ISTUpdated : May 08, 2026, 09:44 AM IST

India Latest News Live: West Bengal fish pond conflict - ಚುನಾವಣಾ ಹಿಂಸಾಚಾರ ಆಯ್ತು, ಈಗ ಪಶ್ಚಿಮ ಬಂಗಾಳದಲ್ಲೀಗ ಮೀನುಗಾರಿಕೆ ಕೆರೆಗಳ ಹಿಡಿತಕ್ಕಾಗಿ ಸಂಘರ್ಷ

ಸಾರಾಂಶ

ತಮಿಳುನಾಡು ಚುನಾವಣಾ ಫಲಿತಾಂಶದ ಬಳಿಕ ಪ್ರತಿ ದಿನ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಹಿಂಬಾಗಿಲಿನಿಂದ ಸರ್ಕಾರ ರಚಿಸಲು ಡಿಎಂಕೆ ಹಾಗೂ ಎಐಡಿಎಂಕೆ ರಾಜ್ಯಪಾಲರನ್ನು ಕೇಳಿಕೊಂಡರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ವಿಜಯ್ ಜೊಸೆಫ್ ನೇತೃತ್ವದ ಟಿವಿಕೆ ಪಕ್ಷ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಟಿವಿಕೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮ್ಯಾಜಿಕ್ ನಂಬರ್ ದಾಟಿಲ್ಲ. ಹೀಗಾಗಿ ಇತ್ತ ಎಂಕೆ ಸ್ಟಾಲಿನ್ ಇಂದು ಮಹತ್ವದ ಸಭೆ ಕರೆದಿದ್ದಾರೆ.

Election Violence is Over Now Conflict in West Bengal for Control of Fishing Ponds

09:44 AM (IST) May 08

West Bengal fish pond conflict - ಚುನಾವಣಾ ಹಿಂಸಾಚಾರ ಆಯ್ತು, ಈಗ ಪಶ್ಚಿಮ ಬಂಗಾಳದಲ್ಲೀಗ ಮೀನುಗಾರಿಕೆ ಕೆರೆಗಳ ಹಿಡಿತಕ್ಕಾಗಿ ಸಂಘರ್ಷ

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಐವರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರನ್ನು ಬಂಧಿಸಲಾಗಿದೆ. ಟಿಎಂಸಿ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ, ಈ ಹಿಂದೆ ಅವರ ಹಿಡಿತದಲ್ಲಿದ್ದ ಮೀನುಗಾರಿಕೆ ಕೆರೆಗಳ ನಿಯಂತ್ರಣಕ್ಕಾಗಿ ಸಂಘರ್ಷಗಳು ನಡೆಯುತ್ತಿವೆ.
Read Full Story

08:34 AM (IST) May 08

ಯಾರಿಗೆ ಒಲಿಯಲಿದೆ ಕೇರಳ ಸಿಎಂ ಪಟ್ಟ? ಖರ್ಗೆ ಹೆಗಲಿಗೆ ಆಯ್ಕೆ ನಿರ್ಧಾರ

ಕೇರಳದಲ್ಲಿ ಯುಡಿಎಫ್ ಬಹುಮತ ಗಳಿಸಿದರೂ, ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿದೆ. ಹಾಲಿ ಸಂಸದ ಕೆ.ಸಿ.ವೇಣುಗೋಪಾಲ್‌ ಪರ ಬಹುತೇಕ ಶಾಸಕರು ಒಲವು ತೋರಿದ್ದು, ಇದು ಹಿರಿಯ ನಾಯಕರಾದ ವಿ.ಡಿ. ಸತೀಶನ್‌ ಮತ್ತು ರಮೇಶ್‌ ಚೆನ್ನಿತ್ತಲ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

Read Full Story

07:36 AM (IST) May 08

ಪ.ಬಂಗಾಳ ವಿಧಾನಸಭೆ ವಿಸರ್ಜನೆ - ಮಮತಾಗೆ ಗೌರ್ನರ್ ಗೇಟ್‌ ಪಾಸ್, ದೀದಿ ಈಗ ಬೀದಿಗೆ!

ಚುನಾವಣೆಯಲ್ಲಿ ಸೋತರೂ ರಾಜೀನಾಮೆ ನೀಡಲು ನಿರಾಕರಿಸಿದ್ದ ಮಮತಾ ಬ್ಯಾನರ್ಜಿಗೆ, ರಾಜ್ಯಪಾಲರು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸುವ ಮೂಲಕ ಗೇಟ್‌ಪಾಸ್‌ ನೀಡಿದ್ದಾರೆ. ಅಧಿಕಾರ ಕಳೆದುಕೊಂಡಿರುವ ಮಮತಾ ಇದೀಗ ತಮ್ಮ ಹಳೆಯ ವಕೀಲಿ ವೃತ್ತಿಗೆ ಮರಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Read Full Story

07:29 AM (IST) May 08

108 ಸ್ಥಾನ ಗೆದ್ದ ಟಿವಿಕೆಗೆ ಬೇಕು 10 ಶಾಸಕರ ಬೆಂಬಲ

ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದಿರುವ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸವು 10 ಶಾಸಕರ ಬೆಂಬಲ ಬೇಕಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದರೂ ವಿಜಯ್ ಪಕ್ಷದ ನಂಬರ್ 112 ಮಾತ್ರ. ಹೀಗಾಗಿ ಕಸರತ್ತು ಆರಂಭಗೊಂಡಿದೆ.


More Trending News