LIVE NOW
Published : Sep 30, 2026, 06:32 AM ISTUpdated : Sep 30, 2026, 07:56 AM IST

India Latest News Live 30 September 2026: 400 ರೂ. ವಸ್ತು ಡಿಮಾರ್ಟ್‌ನಲ್ಲಿ 199 ರೂ.ಗೆ! ತಿಂಗಳ ಕೊನೆ ಶಾಪಿಂಗ್‌ನಲ್ಲಿ ಬಿಗ್‌ ಆಫರ್

ಸಾರಾಂಶ

ನವದೆಹಲಿ: ದೇಶದ 14466 ಸರ್ಕಾರೇತರ ಸಂಸ್ಥೆಗಳು (ಎನ್ ಜಿಒ) ವಿದೇಶಿ ದೇಣಿಗೆ ಸ್ವೀಕರಿಸಲು ಎಫ್‌ಸಿಆರ್‌ಎ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿವೆ. ಹೀಗೆ ನೊಂದಾಯಿತ ಪಟ್ಟಿಯಲ್ಲಿ 1355 ಎನ್‌ಜಿಒಗಳೊಂದಿಗೆ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ 2026 ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಗೆ ನೀಡಲಾಗಿರುವ ಮಾಹಿತಿ ಅನ್ವಯ, ದೇಶದ 15 ರಾಜ್ಯಗಳಲ್ಲಿ 14,466 ಎನ್ ಜಿಒಗಳು ನೋಂದಣಿ ಮಾಡಿಕೊಂಡಿವೆ. ಈ ಪೈಕಿ ತಮಿಳುನಾಡು (2102) ಮೊದಲ ಸ್ಥಾನದಲ್ಲಿದೆ. ಉಳಿದಂತೆ ಮಹಾರಾಷ್ಟ್ರ (1578), ಕರ್ನಾಟಕ (1355), ದೆಹಲಿ ( 1022), ಆಂಧ್ರ ಪ್ರದೇಶ (1218) ಅಗ್ರ ಐದರಲ್ಲಿವೆ

2015ರಲ್ಲಿ 29022 ಎನ್‌ಜಿಒಗಳು 17832 ಕೋಟಿ ರು. ದೇಣಿಗೆ ಸಂಗ್ರವಾಗಿದ್ದವು. 2025ರಲ್ಲಿ ಸಂಖ್ಯೆ 14556ಕ್ಕೆ ಕುಸಿದಿದ್ದು ದೇಣಿಗೆ 22974 ಕೋಟಿ ರು. ಸ್ವೀಕಾರವಾಗಿದೆ.

07:56 AM (IST) Sep 30

400 ರೂ. ವಸ್ತು ಡಿಮಾರ್ಟ್‌ನಲ್ಲಿ 199 ರೂ.ಗೆ! ತಿಂಗಳ ಕೊನೆ ಶಾಪಿಂಗ್‌ನಲ್ಲಿ ಬಿಗ್‌ ಆಫರ್

ಡಿಮಾರ್ಟ್‌ನಲ್ಲಿ ತಿಂಗಳ ಕೊನೆಯಲ್ಲಿ 400 ರಿಂದ 500 ರೂ. ಬೆಲೆಬಾಳುವ ಕೆಲವು ವಸ್ತುಗಳನ್ನು ಕೇವಲ 199 ರೂ.ಗೆ ಲಭ್ಯವಿವೆ. ಗ್ರಾಹಕರು ಶಾಪಿಂಗ್ ಮಾಡುವ ಮುನ್ನ ಅಗತ್ಯ ವಸ್ತುಗಳ ಪಟ್ಟಿ ಮಾಡಿ, ಗುಣಮಟ್ಟ ಮತ್ತು ಬೆಲೆಯನ್ನು ಪರಿಶೀಲಿಸಿ ಖರೀದಿಸುವುದು ಉತ್ತಮ.

Read Full Story

06:54 AM (IST) Sep 30

ತೆರಿಗೆ ತಪ್ಪಿಸಲು ಗುಜರಾತಲ್ಲಿ ಚುನಾವಣಾ ದೇಣಿಗೆಯ ದಂಧೆ; ಬರೋಬ್ಬರಿ ₹680 ಕೋಟಿ ಹಣ

ಗುಜರಾತ್‌ನಲ್ಲಿ ಚುನಾವಣೆಗೆ ಸ್ಪರ್ಧಿಸದ ನಕಲಿ ರಾಜಕೀಯ ಪಕ್ಷಗಳಿಗೆ 680 ಕೋಟಿ ರೂ. ದೇಣಿಗೆ ನೀಡಿ, 200 ಕೋಟಿ ರೂ. ತೆರಿಗೆ ವಂಚಿಸಿರುವ ಬೃಹತ್ ದಂಧೆ ಸಿಐಡಿ ತನಿಖೆಯಿಂದ ಬಯಲಾಗಿದೆ. ತೆರಿಗೆ ವಿನಾಯಿತಿ ಪಡೆಯಲು ಕಂಪನಿಗಳು ಈ ನಕಲಿ ಪಕ್ಷಗಳಿಗೆ ಹಣ ನೀಡಿ, ಬಳಿಕ 'ಅಂಗಾಡಿಯಾ' ವ್ಯವಸ್ಥೆ ಮೂಲಕ ಅದೇ ಹಣವನ್ನು ವಾಪಸ್ ಪಡೆಯುತ್ತಿದ್ದವು.
Read Full Story

More Trending News