LIVE NOW
Published : Sep 29, 2026, 07:01 AM ISTUpdated : Sep 29, 2026, 08:44 AM IST

India Latest News Live: ಮುಂಬೈ ಮೆಟ್ರೋ ಸ್ಟೇ‍ಷನ್‌ನಲ್ಲಿ ಉಗುಳಲೂ ಪ್ರತ್ಯೇಕ ಸ್ಥಳ - ವಿಶ್ವದಲ್ಲೇ ಇದೇ ಮೊದಲು!

ಸಾರಾಂಶ

ನವದೆಹಲಿ: ಎಲ್‌ ನಿನೋ ಪರಿಣಾಮದಿಂದಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಮುಂಬರುವ ಹಿಂಗಾರು ಬೆಳೆ ಅವಧಿ ಸವಾಲಾಗಿ ಪರಿಣಮಿಸಲಿದೆ. ಇದು ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ಆತಿಶ್‌ ಚಂದ್ರ ಎಚ್ಚರಿಸಿದ್ದಾರೆ.

ಹಿಂಗಾರು ಬೆಳೆ ಸಿದ್ಧತೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರಿನ ಬೆಳೆ ಅವಧಿಯೂ ಸವಾಲಿನಿಂದ ಕೂಡಿತ್ತು. ಹಲವು ರಾಜ್ಯಗಳು ಮೊದಲಿಗೆ ಬೆಳೆ ವ್ಯಾಪ್ತಿಯನ್ನು ಖಚಿತಪಡಿಸಲು ಪರದಾಡಿದರೆ, ಬಳಿಕ ಆ ಬೆಳೆ ಉಳಿಸಿಕೊಳ್ಳಲು ಹೆಣಗಾಡಿದವು ಎಂದರು.

ಮಳೆಯಾಶ್ರಿತ ಪ್ರದೇಶಗಳಲ್ಲಿ ಮುಂಗಾರು ಬೆಳೆಯ ರೀತಿ ಹಿಂಗಾರು ಬೆಳೆಯೂ ಸವಾಲುಗಳನ್ನು ಎದುರಿಸಲಿದೆ. ಕೆಲ ರಾಜ್ಯಗಳು ಹೆಚ್ಚಿನ ತೇವಾಂಶದ ಸಮಸ್ಯೆ ಎದುರಿಸಲಿವೆ, ಇನ್ನು ಕೆಲ ಪ್ರದೇಶಗಳು ಮಳೆ ಕೊರತೆಯಿಂದ ಒತ್ತಡ ಎದುರಿಸಲಿವೆ. ಹೀಗಾಗಿ ಹಿಂಗಾರು ಬೆಳೆ ಅವಧಿಗೆ ಸಂಬಂಧಿಸಿ ಕೃಷಿ ತಂತ್ರಗಾರಿಕೆಯನ್ನು ಸರಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದ ಅ‍ವರು, ಇದರ ಪರಿಣಾಮ ಬೆಳೆ ಅವಧಿಯಲ್ಲಿ ಆಹಾರ ಉತ್ಪಾದನೆ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ ಎಂದರು.

08:44 AM (IST) Sep 29

ಮುಂಬೈ ಮೆಟ್ರೋ ಸ್ಟೇ‍ಷನ್‌ನಲ್ಲಿ ಉಗುಳಲೂ ಪ್ರತ್ಯೇಕ ಸ್ಥಳ - ವಿಶ್ವದಲ್ಲೇ ಇದೇ ಮೊದಲು!

ಮುಂಬೈ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿಶ್ವದಲ್ಲೇ ಮೊದಲ ಬಾರಿಗೆ ಉಗುಳಲೆಂದೇ ಪ್ರತ್ಯೇಕ ಸ್ಥಳವನ್ನು ನಿರ್ಮಿಸಲಾಗಿದೆ. ಮತ್ತೊಂದೆಡೆ, ಡಬ್ಲ್ಯುಎಚ್‌ಒ ವರದಿಯ ಪ್ರಕಾರ ಭಾರತದ 5 ಕೋಟಿ ಶಾಲಾ ಮಕ್ಕಳಿಗೆ ನೈರ್ಮಲ್ಯ ಸೌಲಭ್ಯಗಳಿಲ್ಲದಿದ್ದರೂ, ಕುಡಿಯುವ ನೀರಿನ ಲಭ್ಯತೆಯಲ್ಲಿ ದೇಶವು ಉತ್ತಮ ಸಾಧನೆ ಮಾಡಿದೆ.
Read Full Story

07:27 AM (IST) Sep 29

ಸ್ಮೃತಿ ಇರಾನಿ, ಕರ್ನಾಟಕ ಬಿಜೆಪಿ ಹೊಸ ಉಸ್ತುವಾರಿ ದ್ವಿವೇದಿಗೆ ರಾಜ್ಯಸಭೆ ಟಿಕೆಟ್‌?

ಉತ್ತರಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 16ರಂದು ಚುನಾವಣೆ ನಡೆಯಲಿದೆ. ಇದರಲ್ಲಿ ಎಂಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿರುವ ಬಿಜೆಪಿ, ಸ್ಮೃತಿ ಇರಾನಿ ಮತ್ತು ಹರೀಶ್‌ ದ್ವಿವೇದಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಅಲ್ಲದೆ, ಮಾಜಿ ಸಂಸದ ವರುಣ್ ಗಾಂಧಿ ಅವರಿಗೂ ಟಿಕೆಟ್ ನೀಡುವ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.
Read Full Story

More Trending News