LIVE NOW
Published : Nov 21, 2026, 07:22 AM ISTUpdated : Nov 21, 2026, 07:54 AM IST

India Latest News Live: ರಕ್ತಸಂಬಂಧಿಗಳ ಮದುವೆ - ಬೆಂಗಳೂರು ವಿದ್ಯಾರ್ಥಿನಿ ಅರ್ಜಿಗೆ ಸುಪ್ರೀಂ ಕೋರ್ಟ್ ನೋಟಿಸ್

ಸಾರಾಂಶ

ಭೋಪಾಲ್‌: ಹಕ್ಕಿ ಜ್ವರದಿಂದ ರಕ್ಷಿಸುವ ಮೊದಲ ಸ್ವದೇಶಿ ಎಚ್‌5ಎನ್1 ಲಸಿಕೆಯನ್ನು ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಭೋಪಾಲ್‌ನ ಐಸಿಎಆರ್‌-ನ್ಯಾಷನಲ್‌ ಆಫ್ ಹೈ ಸೆಕ್ಯುರಿಟಿ ಆ್ಯನಿಮಲ್‌ ಡಿಸೀಸ್‌ ಸಂಸ್ಥೆಯು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾಗಿ ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇದು ತೀವ್ರ ರೋಗಕಾರಕವಾದ ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್‌5ಎನ್‌1 ವೈರಸ್‌ನ 2.3.2.1ಎ ವಂಶಾವಳಿ ಗುಂಪಿನ ವಿರುದ್ಧ ದೇಶದಲ್ಲಿ ಅಭಿವೃದ್ಧಿಪಡಿಸಿದ ಮೊದಲ ಲಸಿಕೆ ಇದಾಗಿದೆ. ಲಸಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಚೌಹಾಣ್‌ ಅವರು, ಈ ಲಸಿಕೆಯು ಭಾರತದ ಆತ್ಮನಿರ್ಭರತೆಗೆ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಹಕ್ಕಿಜ್ವರವು ತೀವ್ರ ಆತಂಕ ಸೃಷ್ಟಿಸಿದ್ದು, ಎಚ್‌5ಎನ್‌1 ವೈರಸ್‌ ಸೋಂಕಿತ ಕೋಳಿ, ಮತ್ತಿತರ ಹಕ್ಕಿಗಳ ಸಾವು ನಿಶ್ಚಿತ ಎನ್ನುವಂತಾಗಿದೆ. ಹಕ್ಕಿಜ್ವರದಿಂದಾಗಿ ದೇಶದ ಕುಕ್ಕುಟೋದ್ಯಮದ ಮೇಲೆ ಭಾರೀ ಹೊಡೆತ ಬೀಳುತ್ತಿರುವುದಲ್ಲದೆ, ಇದು ಮನುಷ್ಯನಿಗೂ ಹರಡು ಆತಂಕ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ದೇಶೀಯ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲಾಗಿದೆ.

07:54 AM (IST) Nov 21

ರಕ್ತಸಂಬಂಧಿಗಳ ಮದುವೆ - ಬೆಂಗಳೂರು ವಿದ್ಯಾರ್ಥಿನಿ ಅರ್ಜಿಗೆ ಸುಪ್ರೀಂ ಕೋರ್ಟ್ ನೋಟಿಸ್

ರಕ್ತಸಂಬಂಧಿಗಳ ನಡುವಿನ ಮದುವೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆದರೆ ಇಂತಹ ಮದುವೆಗಳನ್ನು ನ್ಯಾಯಾಲಯವು ನೇರವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

Read Full Story

More Trending News