
ನವದೆಹಲಿ(ಏ.10): ವಿಶ್ವವೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಇದೀಗ ಭಾರತಕ್ಕೆ 2ನೇ ಕೊರೋನಾ ಅಲೆ ಭೀತಿ ಎದುರಾಗಿದೆ. ಇದರ ನಡುವೆ ಲಸಿಕೆ ವಿತರಣೆ ವೇಗ ಹೆಚ್ಚಿಸಲು ಲಸಿಕಾ ಉತ್ಸವ ಆಯೋಜಿಸಲಾಗಿದೆ. ಹಂತ ಹಂತವಾಗಿ ಲಸಿಕೆ ವಿತರಣೆಯನ್ನು ವಿಸ್ತರಿಸಲಾಗುತ್ತಿದೆ. ಇದೀಗ ಲಸಿಕೆ ವಿತರಣೆಯಲ್ಲಿ ಭಾರತ ಮತ್ತೊಂದು ದಾಖಲೆ ಬರೆದಿದೆ. ಇಷ್ಟೇ ಅಲ್ಲ ಅಮೆರಿಕ ಹಾಗೂ ಚೀನಾ ದೇಶವನ್ನೇ ಹಿಂದಿಕ್ಕಿದೆ.
ಕೊರೋನಾ 2ನೇ ಅಲೆಯಿಂದ ಶೇ.77 ರಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ; ಸಮೀಕ್ಷೆ ಬಹಿರಂಗ!.
ಭಾರತ ಕೇವಲ 85 ದಿನದಲ್ಲಿ 100 ಮಿಲಿಯನ್(10 ಕೋಟಿ) ಕೊರೋನಾ ಡೊಸೇಜ್ ನೀಡಿದೆ. ಚೀನಾ ಈ ಸಂಖ್ಯೆ ತಲುಪಲು 102 ದಿನ ತೆಗೆದುಕೊಂಡಿತ್ತು. ಇನ್ನು ಅಮೆರಿಕ 100 ಮಿಲಿಯನ್ ಡೊಸೇಜ್ ನೀಡಲು 89 ದಿನ ತೆಗೆದುಕೊಂಡಿದೆ. ಈ ಮೂಲಕ ಭಾರತ ಅತೀ ವೇಗದಲ್ಲಿ ಕೊರೋನಾ ಲಸಿಕೆಯನ್ನು ಜನರಿಗೆ ನೀಡುತ್ತಿರುವ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊರೋನಾ 2 ಅಲೆ ಭೀತಿ ಎದುರಾದ ಕಾರಣ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಲಸಿಕೆ ಅಭಿಯಾನಕ್ಕೂ ಹೆಚ್ಚಿನ ಒತ್ತು ನೀಡಲು ಮೋದಿ ಮನವಿ ಮಾಡಿದ್ದಾರೆ. ಇನ್ನು ಮಹಾರಾಷ್ಟ್ರ ಹಾಗೂ ಪಂಜಾಬ್ ಲಸಿಕೆ ಅಭಾವವಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದೆ. ಲಸಿಕೆ ವಿತರಣೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿದೆ.
ಈ ಆರೋಪಗಳ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿದೇಶಕ್ಕೆ ರಫ್ತು ಮಾಡುವ ಲಸಿಕೆ ನಿಲ್ಲಿಸಿ ದೇಶಕ್ಕೆ ವಿತರಿಸಲು ಸಾಧ್ಯವಿಲ್ಲವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಆದರೆ ಇದೀಗ ಅತೀ ಕಡಿಮೆ ದಿನದಲ್ಲಿ ಭಾರತ ಅತೀ ಹೆಚ್ಚು ಕೋವಿಡ್ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ ಅನ್ನೋದು ಅಂಕಿ ಅಂಶದಲ್ಲಿ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ