ಪ್ರಜಾಪ್ರಭುತ್ವ ಪಟ್ಟೀಲಿ 10 ಸ್ಥಾನ ಕುಸಿದ ಭಾರತಕ್ಕೀಗ 51ನೇ ಸ್ಥಾನ!

By Suvarna NewsFirst Published Jan 23, 2020, 10:27 AM IST
Highlights

ಪ್ರಜಾಪ್ರಭುತ್ವ ಸೂಚ್ಯಂಕ ಪಟ್ಟೀಲಿ 10 ಸ್ಥಾನ ಕುಸಿದ ಭಾರತಕ್ಕೀಗ 51ನೇ ಸ್ಥಾನ|  ‘ದಿ ಎಕಾನಾಮಿಸ್ಟ್‌ ಇಂಟಲಿಜೆನ್ಸ್‌ ಯುನಿಟ್‌’ ಬಿಡುಗಡೆ ಮಾಡಿದ ಪಟ್ಟಿ

ನವದೆಹಲಿ[ಜ.23]: ‘ದಿ ಎಕಾನಾಮಿಸ್ಟ್‌ ಇಂಟಲಿಜೆನ್ಸ್‌ ಯುನಿಟ್‌’ ಬಿಡುಗಡೆ ಮಾಡಿದ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ ರಾಷ್ಟ್ರಗಳ ಪಟ್ಟಿಯಲ್ಲಿ 10 ಸ್ಥಾನ ಕುಸಿತ ಕಂಡಿರುವ ಭಾರತ 51ನೇ ರಾರ‍ಯಂಕ್‌ ಪಡೆದುಕೊಂಡಿದೆ.

ರಾಷ್ಟ್ರಾದ್ಯಂತ ಪ್ರಜೆಗಳ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ಘಟನೆಗಳ ಕಾರಣದಿಂದಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕುಸಿತ ದಾಖಲಿಸಿದೆ ಎಂದು ಅದು ಹೇಳಿದೆ.

ಚುನಾವಣಾ ಪ್ರಕ್ರಿಯೆ, ಬಹುತ್ವ, ಸರ್ಕಾರದ ಕಾರ್ಯಪ್ರವೃತ್ತಿ, ರಾಜಕೀಯ ಪಾಲುದಾರಿಕೆ, ರಾಜಕೀಯ ಸಂಸ್ಕೃತಿ ಹಾಗೂ ನಾಗರಿಕ ಸ್ವಾತಂತ್ರ್ಯಗಳ ಆಧಾರದಡಿಯಲ್ಲಿ ಈ ಸೂಚ್ಯಂಕ ಪ್ರಕಟಿಸಲಾಗಿದ್ದು, ಈ ಪ್ರಕಾರ 2018ರಲ್ಲಿ ಒಟ್ಟಾರೆ 7.23 ಅಂಕ ದಾಖಲಿಸಿದ್ದ ಭಾರತ 2019ರಲ್ಲಿ 6.90 ಅಂಕಕ್ಕೆ ಜಾರಿದೆ.

ಇನ್ನು ಈ ಪಟ್ಟಿಯಲ್ಲಿ ನಾರ್ವೆ, ಐಸ್‌ಲ್ಯಾಂಡ್‌ ಮತ್ತು ಸ್ವೀಡನ್‌ ಮೊದಲ 3 ಸ್ಥಾನ ಅಲಂಕರಿಸಿವೆ. ಭಾರತದ ನೆರೆಯ ರಾಷ್ಟ್ರವಾಗಿರುವ ಚೀನಾ ಈ ಪಟ್ಟಿಯ ಕೊನೆಯಿಂದ ಮೊದಲ ಸ್ಥಾನ ಅಂದರೆ 153ನೇ ರಾರ‍ಯಂಕ್‌, ಪಾಕಿಸ್ತಾನ 108ನೇ ರಾರ‍ಯಂಕ್‌, ಶ್ರೀಲಂಕಾ 69ನೇ ರಾರ‍ಯಂಕ್‌ ದಾಖಲಿಸಿವೆ.

click me!