ಚೀನಾಗೆ ತಿರುಗೇಟು: ಟಿಬೆಟ್‌ 30 ಸ್ಥಳಗಳಿಗೆ ಹೊಸ ಹೆಸರಿಡಲು ಭಾರತ ನಿರ್ಧಾರ..!

By Kannadaprabha News  |  First Published Jun 12, 2024, 10:31 AM IST

ಚೀನಾ ಗಡಿಯಲ್ಲಿರುವ ವಾಸ್ತವಿಕ ಗಡಿ ನಿಯಂತ್ರಣಾರೇಖೆ(ಎಲ್‌ಎಸಿ) ಆಸುಪಾಸಿನಲ್ಲಿ ಬರುವ 11 ವಸತಿ ಪ್ರದೇಶಗಳು, 12 ಪರ್ವತಗಳು, 4 ನದಿಗಳು, 1 ಕೆರೆ, 1 ಪರ್ವತ ಕಣಿವೆ ಮತ್ತು 1 ತುಂಡು ಭೂಮಿಯ ಹೆಸರನ್ನು ಬದಲಿಸಲು ಅನುಮೋದನೆ ನೀಡಿದ ಭಾರತ ಸರ್ಕಾರ 


ನವದೆಹಲಿ(ಜೂ.12):  ಅರುಣಾಚಲ ಪ್ರದೇಶದಲ್ಲಿ ಸದಾ ತಕರಾರು ತೆಗೆಯುವ ಚೀನಾಗೆ ಭಾರತ ತಿರುಗೇಟು ನೀಡಲು ಮುಂದಾಗಿದ್ದು, ಚೀನಾ ಆಕ್ರಮಿತ ಟಿಬೆಟ್‌ನಲ್ಲಿ 30 ಪ್ರದೇಶಗಳನ್ನು ಮರು ನಾಮಕರಣ ಮಾಡಿ ಬಹಿರಂಗ ಮಾಡಲು ನಿರ್ಧರಿಸಿದೆ.

ಚೀನಾ ಗಡಿಯಲ್ಲಿರುವ ವಾಸ್ತವಿಕ ಗಡಿ ನಿಯಂತ್ರಣಾರೇಖೆ(ಎಲ್‌ಎಸಿ) ಆಸುಪಾಸಿನಲ್ಲಿ ಬರುವ 11 ವಸತಿ ಪ್ರದೇಶಗಳು, 12 ಪರ್ವತಗಳು, 4 ನದಿಗಳು, 1 ಕೆರೆ, 1 ಪರ್ವತ ಕಣಿವೆ ಮತ್ತು 1 ತುಂಡು ಭೂಮಿಯ ಹೆಸರನ್ನು ಬದಲಿಸಲು ಸರ್ಕಾರ ಅನುಮೋದನೆ ನೀಡಿದೆ. 

Tap to resize

Latest Videos

ಕೆಲಸ ಮಾಡದೆಯೂ ಚೀನಾಕ್ಕಿಂತ ಎತ್ತರಕ್ಕೆ ಬೆಳೆಯಬಹುದೆಂಬುದು ಕೆಲವರ ಭಾವನೆ ತಪ್ಪಲ್ಲ: ನಾರಾಯಣಮೂರ್ತಿ

ಇದನ್ನು ಭಾರತೀಯ ಸೇನೆ ತನ್ನ ನಕ್ಷೆಯಲ್ಲಿ ಪ್ರಕಟಿಸುವ ಮೂಲಕ ಅರುಣಾಚಲದಲ್ಲಿ ಮರುನಾಮಕರಣ ಮಾಡಿ ಭಾರತಕ್ಕೆ ತೊಂದರೆ ನೀಡುತ್ತಿದ್ದ ಚೀನಾಗೆ ತಿರುಗೇಟು ನೀಡಲು ಮುಂದಾಗಿದೆ. ಚೀನಾ ಅರುಣಾಚಲದಲ್ಲಿ 2017ರಿಂದಲೂ ಹೆಸರುಗಳನ್ನು ಮರುನಾಮ ಕರಣ ಮಾಡುತ್ತಿದ್ದು, ಇತ್ತೀಚೆಗೆ ಕಳೆದ ಏಪ್ರಿಲ್ ನಲ್ಲಿ ಹೆಸರುಗಳನ್ನು ಬದಲಿಸಿತ್ತು.

click me!