ದೇಶದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಆದವರ ಪ್ರಮಾಣ ಅಧಿಕ!

By Kannadaprabha NewsFirst Published Jun 4, 2020, 8:56 AM IST
Highlights

ಸೋಂಕಿತರಿಗಿಂತ ಚೇತರಿಕೆ ಆದವರ ಪ್ರಮಾಣ ಅಧಿಕ!| 1 ಲಕ್ಷ ಜನ ಚೇತರಿಕೆ 99000 ಜನಕ್ಕೆ ಚಿಕಿತ್ಸೆ

ನವದೆಹಲಿ(ಜೂ.04): ಒಂದೆಡೆ ಕೊರೋನಾಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹೊರತಾಗಿಯೂ, ಸೋಂಕಿತರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಗುಣಮುಖರಾಗಿರುವ ಹೊಸ ಬೆಳವಣಿಗೆಗೆ ಭಾರತ ಸಾಕ್ಷಿಯಾಗಿದೆ. ಹೀಗಾಗಿ ಈಗ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತಲೂ ಗುಣಮುಖವಾದವರ ಸಂಖ್ಯೆ ಮೊದಲ ಬಾರಿಗೆ ಹೆಚ್ಚಳಗೊಂಡಿದೆ.

ದೇಶದಲ್ಲಿ ಬುಧವಾರ ಮತ್ತೆ 8842 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 209163ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಒಂದೇ ದಿನ 3847 ಗುಣಮುಖರಾಗಿದ್ದು, ಇದುವರೆಗೆ ಗುಣಮುಖರಾದವರ ಸಂಖ್ಯೆ 103460 ತಲುಪಿದೆ. ಹೀಗಾಗಿ ಕೊರೋನಾದಿಂದ ಸಾವನ್ನಪ್ಪಿದ ಪ್ರಕರಣಗಳನ್ನು ಹೊರುತುಪಡಿಸಿ ಸಕ್ರಿಯ ಪ್ರಕರಣಗಳ ಸಂಖ್ಯೆ 99707ಕ್ಕೆ ಇಳಿಕೆ ಕಂಡಿದೆ.

ಇನ್ನು ಸೋಂಕು ಹೆಚ್ಚಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 74860ಕ್ಕೆ ಏರಿಕೆಯಾಗಿದ್ದು, 32329 ಮಂದಿ ಗುಣಮುಖರಾಗಿದ್ದಾರೆ. ಸಾವನ್ನಪ್ಪಿದರ ಸಂಖ್ಯೆ 2587ಕ್ಕೆ ಏರಿಕೆ ಕಂಡಿದೆ. ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 25872ಕ್ಕೆ ಏರಿಕೆಯಾಗಿದ್ದು, 14316 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ನಿನ್ನೆ ಎಷ್ಟು ಕೇಸ್‌?

ಹೊಸ ಸೋಂಕು 8842

ಒಟ್ಟು 209163

ಸಾವು 257

ಒಟ್ಟು 5996

click me!