ಸೋಂಕಿನಲ್ಲಿ 20ನೇ ಸ್ಥಾನದಲ್ಲಿದ್ದ ಭಾರತ ಟಾಪ್ 10ರತ್ತ!

By Kannadaprabha NewsFirst Published May 24, 2020, 8:07 AM IST
Highlights

ಸೋಂಕಿತರ ಸಂಖ್ಯೆ: ಭಾರತ ಟಾಪ್‌ 10ಕ್ಕೆ| ಇರಾನ್‌ ಹಿಂದಿಕ್ಕಿ ಇಂದು 10ನೇ ಸ್ಥಾನಕ್ಕೆ ತಲುಪುವ ಸಾಧ್ಯತೆ| 10ನೇ ಸ್ಥಾನದಲ್ಲಿರುವ ಇರಾನ್‌ಗಿಂತ ಕೇವಲ 50000 ಕಡಿಮೆ

ನವದೆಹಲಿ(ಮೇ.24): ಕಳೆದ ಕೆಲ ದಿನಗಳಿಂದ ನಿತ್ಯವೂ 5000ಕ್ಕಿಂತ ಹೆಚ್ಚು ಹೊಸ ಕೊರೋನಾ ಪ್ರಕರಣ ದಾಖಲಿಸುತ್ತಿರುವ ಭಾರತ, ಇದೀಗ ವಿಶ್ವದಲ್ಲೇ ಅತ್ಯಂತ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಟಾಪ್‌ 10ರ ಸಮೀಪಕ್ಕೆ ಬಂದು ನಿಂತಿದೆ. ಪ್ರಸಕ್ತ ಏರುಗತಿ ಮುಂದುವರೆದದ್ದೇ ಆದಲ್ಲಿ ಭಾನುವಾರವೇ ಭಾರತ 10ನೇ ಸ್ಥಾನಕ್ಕೆ ಏರಲಿದೆ. ಪ್ರಸಕ್ತ 10ನೇ ಸ್ಥಾನದಲ್ಲಿರುವ ಇರಾನ್‌ನಲ್ಲಿ 000000 ಸೋಂಕಿತರು ಇದ್ದರೆ, ಭಾರತದ ಸೋಂಕಿತರ ಪ್ರಮಾಣ 000000 ಇದೆ. ಇರಾನ್‌ನಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯ 1500 ಆಸುಪಾಸಿನಲ್ಲೇ ಹೊಸ ಕೇಸು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರವೇ ಭಾರತ, ಇರಾನ್‌ ಅನ್ನು ಹಿಂದಿಕ್ಕುವುದು ಖಚಿತವಾಗಿದೆ.

ಭಾರತದಲ್ಲಿ 2020ರ ಜ.30ರ ಕೇರಳದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಅದಾದ 116ನೇ ದಿನ ಭಾರತ ಟಾಪ್‌ 10ರ ಪಟ್ಟಿಸೇರುವ ಸಾಧ್ಯತೆ ಕಂಡುಬಂದಿದೆ. ಆರಂಭದ ದಿನಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 20ನೇ ಸ್ಥಾನದಲ್ಲಿತ್ತು. ಆದರೆ ದೇಶದಲ್ಲಿ ಪರೀಕ್ಷಾ ಪ್ರಮಾಣ ಹೆಚ್ಚಾದ ಬಳಿಕ ಮತ್ತು ವಲಸೆ ಕಾರ್ಮಿಕರು ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆ ಕಂಡುಬಂದಿದ್ದು, ಕೆಲವೇ ದಿನಗಳಲ್ಲಿ ಟಾಪ್‌ 10ರ ದಾಪುಗಾಲಿಟ್ಟಿದೆ.

ದೇಶದಲ್ಲಿ 14 ದಿನಕ್ಕೆ, ರಾಜ್ಯದಲ್ಲಿ 9 ದಿನಕ್ಕೆ ಕೊರೋನಾ ಡಬಲ್‌!

ಪ್ರಸಕ್ತ ಅಮೆರಿಕ, ಬ್ರೆಜಿಲ್‌, ರಷ್ಯಾ, ಸ್ಪೇನ್‌, ಬ್ರಿಟನ್‌, ಇಟಲಿ, ಫ್ರಾನ್ಸ್‌, ಜರ್ಮನಿ, ಟರ್ಕಿ, ಇರಾನ್‌ ಟಾಪ್‌ 10ರಲ್ಲಿವೆ. ಈ ದೇಶಗಳಲ್ಲಿ ಒಟ್ಟು 35 ಲಕ್ಷ ಸೋಂಕಿತರು ಇದ್ದಾರೆ. ಜೊತೆಗೆ 2.65 ಲಕ್ಷ ಜನ ಸಾವನ್ನಪ್ಪಿದ್ದಾರೆ.

ಭಾರತದ ಕೊರೋನಾ ಹಾದಿ

ಜ.30: ಮೊದಲ ಕೇಸು

ಮಾ.20: 1000ನೇ ಕೇಸು

ಏ.13: 10000ನೇ ಕೇಸು

ಮೇ 6: 50000ನೇ ಕೇಸು

ಮೇ 18: 100000ನೇ ಕೇಸು

click me!