ಭಾರತ-ಚೀನಾ 9ನೇ ಸುತ್ತಿನ ಕಮಾಂಡರ್ ಮಾತುಕತೆ; 8 ತಿಂಗಳ ಗಡಿ ಘರ್ಷಣೆ ಕಾಣುತ್ತಾ ಅಂತ್ಯ?

By Suvarna NewsFirst Published Jan 23, 2021, 8:44 PM IST
Highlights

ಭಾರತ ಹಾಗೂ ಚೀನಾ ನಡುವೆ 8 ತಿಂಗಳ ಆರಂಭಗೊಂಡ ಲಡಾಖ್ ಘರ್ಷಣೆ ಇನ್ನೂ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ. ಪದೆ ಪದೇ ಚೀನಾ ಕಿರಿಕ್ ಮಾಡುತ್ತಲೇ ಇದೆ. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆ ಹರಿಸಲು ಉಭಯ ದೇಶಗಳು ಇದೀಗ 9ನೇ ಸುತ್ತಿನ ಮಾತುಕತೆಗೆ ರೆಡಿಯಾಗಿದೆ.
 

ನವದೆಹಲಿ(ಜ.23): ಗಲ್ವಾನ್ ಕಣಿವೆಯಲ್ಲಿನ ಘರ್ಷಣೆ ಬಳಿಕ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ.  ಈ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದರೆ, ಅತ್ತ ಚೀನಾಗೂ ಅಪಾರ ನಷ್ಟ ಸಂಭವಿಸಿದೆ. ಆದರೆ ಚೀನಾ ಇದುವರೆಗೆ ಬಹಿರಂಗಪಡಿಸಿಲ್ಲ. ಇದಾದ ಬಳಿಕ ಲಡಾಖ್ ಗಡಿಯಲ್ಲಿ ಭಾರತ-ಚೀನಾ ಕಿರಿಕ್ ನಡೆಯುತ್ತಲೇ ಇದೆ. ಇದೀಗ ಸಮಸ್ಯೆಗೆ ಪರಿಹಾರ ಹುಡುಕಲು 9ನೇ ಸುತ್ತಿನ ಮಾತುಕತೆ ನಡೆಯಲಾಗುತ್ತಿದೆ.

ಗಣರಾಜ್ಯೋತ್ಸವಕ್ಕೆ ಕರಾಚಿ ಬಂದರು ದಾಳಿ ಸ್ಥಬ್ಧಚಿತ್ರ; ಇಂಡೋ-ಪಾಕ್ ಯುದ್ಧ ಮೆಲುಕು ಹಾಕಲಿದೆ ನೌಕಾಪಡೆ!..

9ನೇ ಸುತ್ತಿನ ಕಮಾಂಡರ್ ಮಾತುಕತೆಗೆ ಭಾರತ ಹಾಗೂ ಚೀನಾ ಸಜ್ಜಾಗಿದೆ. ನಾಳೆ(ಜ.24) ಚೀನಾ ಭಾಗದ ಮೊಲ್ಡೊದಲ್ಲಿ ಕಮಾಂಡರ್ ಸುತ್ತಿನ ಮಾತುಕತೆ ನಡೆಯಲಿದೆ. ಬೆಳಗ್ಗೆ 10ಗಂಟೆ ಕಮಾಂಡರ್ ಮಟ್ಟದ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಲು ಮಾತುಕತೆ ನಡೆಸಲಿದ್ದಾರೆ. 

ಕಮಾಂಡರ್ ಮಟ್ಟದ 8ನೇ ಸುತ್ತಿನ ಮಾತುಕತೆ ನವೆಂಬರ್ 6, 2020ರಂದು ಭಾರತದ ಚುಶೊಲ್ ಮಿಲಿಟರಿ ವಲಯದಲ್ಲಿ ನಡೆದಿತ್ತು. ಆದರೆ 8ನೇ ಸುತ್ತು ಮಾತ್ರವಲ್ಲ, ಹಿಂದಿನ ಎಲ್ಲಾ ಸುತ್ತುಗಳಲ್ಲಿ ಒಮ್ಮತ ಮೂಡಿಲ್ಲ. ಹೀಗಾಗಿ ಸಮಸ್ಯೆ ಕಳೆದ 8 ತಿಂಗಳಿನಿಂದ ಬಗೆ ಹರಿಯದೆ ಹಾಗೇ ಉಳಿದುಕೊಂಡಿದೆ.

ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!

ಭಾರತ ಹಾಗೂ ಚೀನಾ ನಡುವಿನ ಗಡಿ ಘರ್ಷಣೆ ಅಂತ್ಯಗೊಳಿಸಲು ರಾಜತಾಂತ್ರಿಕ, ಮಿಲಿಟರಿ ಸೇರಿದಂತೆ ಎಲ್ಲಾ ರೀತಿಯ ಮಾತುಕತೆಗಳನ್ನು ನಡೆಸುತ್ತಿದ್ದೇವೆ. ಗಡಿಯ ಕೆಲ ಭಾಗದಲ್ಲಿ ನಿರ್ಮಾಣವಾಗಿರುವ ಉದ್ವಿಘ್ನ ಪರಿಸ್ಥಿತಿಯನ್ನು ತಿಳಿಸಿಗೊಳಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಭಾರತೀಯ ವಿದೇಶಾಂತ ಇಲಾಖೆ ಹೇಳಿದೆ.

ಮಿಲಿಟರಿ ಮಟ್ಟದ ಮಾತುಕತೆಗಳ ಜೊತೆಗೆ, ಎರಡು ಕೌಂಟಿಗಳು ವೊ ಮೂಲಕ ರಾಜತಾಂತ್ರಿಕ ಸುತ್ತಿನ ಮಾತುಕತೆಗಳನ್ನು ಮುಂದುವರಿಸಿದೆ. ಈ ಕುರಿತು ಡಿಸೆಂಬರ್ 18, 2020ರಂದು WMCC ಸಬೆ ನಡೆಸಲಾಗಿತ್ತು. 
 

click me!