ಭಾರತ ನಿಷೇಧಿಸಿದ 5 ಪುಸ್ತಕಗಳು: ದೇಶದ ನಾಗರೀಕರು ಓದುವಂತಿಲ್ಲ!

Published : Nov 22, 2024, 12:41 PM IST
ಭಾರತ ನಿಷೇಧಿಸಿದ 5 ಪುಸ್ತಕಗಳು: ದೇಶದ ನಾಗರೀಕರು  ಓದುವಂತಿಲ್ಲ!

ಸಾರಾಂಶ

ಭಾರತದಲ್ಲಿ ಧಾರ್ಮಿಕ ಭಾವನೆ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಪುಸ್ತಕಗಳನ್ನು ನಿಷೇಧಿಸಲಾಗಿದೆ. ವಿ.ಎಸ್. ನೈಪಾಲ್, ಸಲ್ಮಾನ್ ರಶ್ದಿ, ವೆಂಡಿ ಟೋನಿಕರ್, ಸೀಮರ್ ಹರ್ಜ್ ಮತ್ತು ಹಮೀಶ್ ಮ್ಯಾಕ್ಡೊನಾಲ್ಡ್ ಅವರಂತಹ ಪ್ರಸಿದ್ಧ ಲೇಖಕರ ಕೃತಿಗಳು ಈ ಪಟ್ಟಿಯಲ್ಲಿ ಸೇರಿವೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನಮ್ಮ ಭಾರತ ದೇಶದಲ್ಲಿ ಸರ್ವ ಧರ್ಮ ಸಮಾನತೆಯನ್ನು ಕಾಣುವ ಹಾಗೂ ವಿವಿಧತೆಯಲ್ಲಿ ಏಕತೆಯಿಂದ ಸಾಗುತ್ತಿರುವ ದೇಶವಾಗಿದೆ. ಇಲ್ಲಿ ನಮ್ಮ ದೇಶದ ಸ್ವಾತಂತ್ರ್ಯ, ಧಾರ್ಮಿಕ ಭಾವನೆ, ಸಾಮಾಜಿಕ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬರುವಂತೆ ಯಾರೂ ನಡೆದುಕೊಳ್ಳುವಂತಿಲ್ಲ. ಇಂತಹ ಸಂದೇಶಗಳನ್ನು ಸಾರುವಂತಿಲ್ಲ. ಆದರೂ, ಕೆಲವೊಬ್ಬರು ಧಾರ್ಮಿಕ ಭಾವನೆಗಳು, ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯ ಭಾವನೆಗೆ ಧಕ್ಕೆ ತರುವಂತಹ ಬರಗಳನ್ನು ಬರೆದು ಪುಸ್ತಕಗಳನ್ನು ಪ್ರಕಟ ಮಾಡಿದ್ದಾರೆ. ಹೀಗಾಗಿ, ಜಾಗತಿಕ ಮಟ್ಟದಲ್ಲಿ ತೀರಾ ಖ್ಯಾತಿಯನ್ನು ಗಳಿಸಿರುವಂತಹ ಪ್ರಸಿದ್ಧ ಲೇಖಕರ ಪುಸ್ತಕಗಳನ್ನು ಭಾರತ ದೇಶದಲ್ಇ ಓದುವುಕ್ಕೆ ನಿಷೇಧ ಮಾಡಲಾಗಿದೆ. ಭಾರತ ನಿಷೇಧಿಸಿದ ಪುಸ್ತಕಗಳು ಇಲ್ಲಿವೆ ನೋಡಿ..

ಜಾಗತಿಕ ಮಟ್ಟದ ಪ್ರಸಿದ್ಧ ಪ್ರಸ್ತಿಯಾದ ನೊಬೆಲ್ ಪ್ರಶಸ್ತಿಯನ್ನು ಪಡೆದಿರುವಂತಹ ಭಾರತೀಯ ಮೂಲದ ಲೇಖಕ ವಿ.ಎಸ್. ನೈಪಾಲ್ ಅವರು ಬರೆದಿರುವ 'ಆನ್ ಏರಿಯಾ ಆಫ್ ಡಾರ್ಕ್ನೆಸ್' ಪುಸ್ತಕವನ್ನು ನಮ್ಮ ದೇಶದಲ್ಲಿ ನಿಷೇಧ ಮಾಡಲಾಗಿದೆ. ಈ ಪುಸ್ತಕವನ್ನು ಭಾರತದಲ್ಲಿ ಮಾರಾಟ ಮಾಡುವುದಾಗಲೀ, ಓದುವುದನ್ನಾಗಲೀ ಮಾಡುವಂತಿಲ್ಲ. ಇನ್ನು ಈ ಪುಸ್ತಕದಲ್ಲಿ ದೇಶ ವಿರೋಧಿ ಹೇಳಿಕೆಗಳನ್ನು ಹಾಗೂ ಭಾರತದ ಬಗ್ಗೆ ನಕಾರಾತ್ಮಕತೆಯನ್ನು ಬಿಂಬಿಸಲಾಗಿದೆ. ಈ ಕಾರಣಕ್ಕೆ ಭಾರತದಲ್ಲಿ ವಿ.ಎಸ್.ನೈಪಾಲ್ ಅವರ ಒಂದು ಪುಸ್ತಕವನ್ನು ನಿಷೇಧಿಸಲಾಗಿದೆ.

ಮತ್ತೊಬ್ಬ ಪ್ರಸಿದ್ಧ ಲೇಖಲ ಸಲ್ಮಾನ್ ರಶ್ದಿಯವರ 'ದಿ ಸೈಟಾನಿಕ್ ವರ್ಸಸ್' (The Satanic Verses) ಪುಸ್ತಕವನ್ನೂ ಕೂಡ ನಿಷೇಧಿಸಲಾಗಿದೆ. 1988ರಲ್ಲಿ ಪ್ರಕಟಿಸಿದ ಈ ಪುಸ್ತಕವು ಇಸ್ಲಾಂ ಧರ್ಮದ ಪ್ರವಾದಿ ಪ್ರವಾದಿ ಮುಹಮ್ಮದ್ ಅವಮಾನಿಸಿದ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಈ ಪುಸ್ತಕವನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು, ವಿಶ್ವದಲ್ಲಿ ಅನೇಕ ಮುಸ್ಲಿಂ ರಾಷ್ಟ್ರಗಳು ಕೂಡ ಈ ಪುಸ್ತಕ ಮಾರಾಟ ಮತ್ತು ಓದುವುದನ್ನು ನಿಷೇಧಿಸಿ ಆದೇಶ ಹೊರಡಿಸಿವೆ.

ಇದನ್ನೂ ಓದಿ: 5 ದಿನ ಪ್ರಯಾಣ, 4 ದೇಶಗಳ ಭೇಟಿ, 3 ದೇಶಗಳಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿ! ಮೋದಿ ವರ್ಲ್ಡ್ ಲೀಡರ್ ಆಗಿದ್ದು ಹೇಗೆ?

ಜಾಗತಿಕ ಮಟ್ಟದ ಮತ್ತೊಬ್ಬ ಪ್ರಸಿದ್ಧ ಲೇಖಕ ವೆಂಡಿ ಟೋನಿಕರ್ ಅವರು ಸಂಪಾದಿಸಿರುವ 'ದಿ ಹಿಂದೂ: ಆನ್ ಆಲ್ಟರ್ನೇಟಿವ್ ಹಿಸ್ಟರಿ' ಪುಸ್ತಕವನ್ನು 2014ರಲ್ಲಿ ಪ್ರಕಟ ಮಾಡಲಾಯಿತು. ಈ ಪುಸ್ತಕದಲ್ಲಿ ಭಾರತದ ಬಹುಸಂಖ್ಯಾತರಾದ ಹಿಂದೂಗಳು ಪಾಲಿಸುವ ಹಿಂದೂ ಧರ್ಮವನ್ನು ಅವಮಾನಿಸುವ ಹೇಳಿಕೆಗಳನ್ನು ಧಾಖಲಿಸಲಾಗಿದೆ. ಆದ್ದರಿಂದ ಈ ಪುಸ್ತಕವನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ.

ಭಾರತದದಲ್ಲಿ 1977ರಿಂದ 1979ರ ಅವಧಿಯಲ್ಲಿ ಪ್ರಧಾನಮಂತ್ರಿ ಆಗಿದ್ದ ಮೊರಾರ್ಜಿ ದೇಸಾಯಿ ಅನ್ಯ ದೇಶದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅನ್ಯ ದೇಶದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಆಧಾರದ ಮೇಲೆ ಲೇಖಕ ಸೀಮರ್ ಹರ್ಜ್ ಅವರು 'ದಿ ಪ್ರೈಸ್ ಆಫ್ ಪವರ್' ಎಂಬ ಪುಸ್ತಕವನ್ನು ಬರೆದಿದ್ದರು. ಹೀಗಾಗಿ, ಭಾರತದ ಮಾಜಿ ಪ್ರಧಾನಿಯ ಬಗ್ಗೆ ಆರೋಪವುಳ್ಳ ಪುಸ್ತಕವನ್ನು ನಿಷೇಧ ಮಾಡಲಾಯಿತು. 

ಇದನ್ನೂ ಓದಿ: ನಬಾರ್ಡ್‌ ಸಾಲ ಮಿತಿ ಹೆಚ್ಚಳ ಮಾಡಿ: ವಿತ್ತ ಸಚಿವೆ ನಿರ್ಮಲಾಗೆ ಸಿಎಂ ಸಿದ್ದರಾಮಯ್ಯ ಮನವಿ

ಜಾಗತಿಕ ಮಟ್ಟದ ಪ್ರಸಿದ್ಧ ಲೇಖಕರಲ್ಲಿ ಒಬ್ಬರಾದ ಹಮೀಶ್ ಮ್ಯಾಕ್ಡೊನಾಲ್ಡ್ ಅವರು, ಭಾರತೀಯ ಉದ್ಯಮಿ ಅಂಬಾನಿ ಕುಟುಂಬದ ಬಗ್ಗೆ ಬರೆದಿರುವಂತಹ ಪುಸ್ತಕ 'ದಿ ಪಾಲಿಯೆಸ್ಟರ್ ಪ್ರಿನ್ಸ್'ವನ್ನು ಕೂಡ ಭಾರತದಲ್ಲಿ ನಿಷೇಧಿಸಲಾಗಿದೆ. ಈ ಪುಕ್ತಕದಲ್ಲಿ ಅಂಬಾನಿ ಕುಟುಂಬದ ಬಗ್ಗೆ ಸುಳ್ಳು ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂಬ ಆರೋಪದ ಮೇಲೆ ನಿಷೇಧ ಮಾಡಲಾಗಿದ್ದು, ಈ ಪುಸ್ತಕ ದೇಶದ ಯಾವುದೇ ಭಾಗದಲ್ಲಿ ಓದಲು ಸಿಗುವುದಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
India Latest News Live: 19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು - ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ