
ನವದೆಹಲಿ(ಸೆ.22): ಭಾರತ ಹಾಗೂ ಚೀನಾ ಗಡಿಯಲ್ಲಿ ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತದೆ. ಇದು ವಾಡಿಕೆ. ಚಳಿಗಾಲ ಮುಗಿದ ಬಳಿಕ ಮತ್ತೆ ಉಭಯ ದೇಶಗಳು ತಮ್ಮ ತಮ್ಮ ಗಡಿ ಪೋಸ್ಟ್ ವಶಪಡಿಸಿಕೊಂಡು ಪಹರೆ ಕಾಯುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಕಳೆದ ಕೆಲ ತಿಂಗಳುಗಳಿಂದ ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಘ್ನ ವಾತಾವರಣವಿದೆ. ಇದೀಗ ಚಳಿಗಾಲ ಸನಿಹವಾಗುತ್ತಿದ್ದು, ಭಾರತೀಯ ಸೇನೆ ಹಲವು ಸವಾಲು ಎದುರಿಸಲು ಸಜ್ಜಾಗಿದೆ.
ಲಡಾಖ್: 20 ಬೆಟ್ಟದಲ್ಲಿ ಭಾರತ ಪ್ರಾಬಲ್ಯ!.
ಚೀನಾ ಗಡಿ ಕಾಯುವು ಭಾರತೀಯ ಸೈನಿಕರಿಗೆ ಇದೀಗ ವಿಶೇಷ ಟೆಂಟ್ ನೀಡಲಾಗಿದೆ. ಚಳಿಗಾಲದಲ್ಲಿ ಗಡಿಯ ಕೆಲ ಭಾಗದಲ್ಲಿ -45 ಡಿಗ್ರಿ ಚಳಿ ದಾಖಲಾಗುತ್ತದೆ. ಇಷ್ಟೇ ಅಲ್ಲ ಎಲ್ಲಾ ಕಡೆ ಮಂಜುಗಡ್ಡೆ ಆವರಿಸುತ್ತದೆ. ಈ ವೇಳೆ ಪಹರೆ ಅತ್ಯಂತ ಸವಾಲಿನಿಂದ ಕೂಡಿದೆ. ಇದಕ್ಕಾಗಿ ಸೇನಗೆ ವಿಶೇಷ ಟೆಂಟ್ ನೀಡಲಾಗಿದೆ. ಈ ಟೆಂಟ್ ಮೈನಸ್ 40 ರಿಂದ ಮೈನಸ್ 50 ಡಿಗ್ರಿ ವರೆಗಿನ ಚಳಿಯನ್ನು ತಡೆಯಲಿದೆ. ಟೆಂಟ್ ಒಳಗಡೆ ಬೆಚ್ಚಿಗಿನ ವಾತಾವರಣ ಒದಗಿಸಲಿದೆ.
ಲಡಾಖ್ ಗಡಿ ಸಂಘರ್ಷ; 6 ವಲಯ ಪ್ರದೇಶ ವಶಪಡಿಸಿಕೊಂಡ ಭಾರತೀಯ ಸೇನೆ!.
ಪ್ಯಾಂಗಾಂಗ್ ಲೇಕ್ ಸರೋವರ, ಗಲ್ವಾಣ್ ಕಣಿವೆ ಸೇರಿದಂತೆ ಭಾರತ ಚೀನಾದ 70 ಕಿಲೋಮೀಟರ್ ಗಡಿಯಲ್ಲಿ ಕಿರಿಕ್ ನಡೆಯುತ್ತಲೆ ಇದೆ. ಈ ಬಾರಿ ಚಳಿಗಾಲದಲ್ಲೂ ಹದ್ದಿನ ಕಣ್ಣಿಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದಕ್ಕಾಗಿ ಭಾರತೀಯ ಸೇನೆ ಈಗಲೇ ಸಿದ್ಧತೆ ಆರಂಭಿಸಿದೆ. ಟೆಂಟ್ ಜೊತೆಗೆ ಇತರ ಕೆಲ ಸೌಕರ್ಯಗಳನ್ನು ಒದಗಿಸಲು ಸೇನೆ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ