ಮೋದಿ, ಕುಟುಂಬ, ಸುಳ್ಳು ಆರೋಪ ಇಂಡಿಯಾ ಮೈತ್ರಿ ಟಾರ್ಗೆಟ್, ಬಿಜೆಪಿ ಗುರಿ ಅಭಿವೃದ್ಧಿ ಭಾರತ; ಮೋದಿ ಭಾಷಣ!

By Suvarna NewsFirst Published Apr 20, 2024, 5:35 PM IST
Highlights

ಬೆಂಗಳೂರು ಅರಮನೆ ಮೈದಾನದಲ್ಲಿನ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. ಇಂಡಿಯಾ ಒಕ್ಕೂಟದ ಪ್ರಚಾರ, ಭಾಷಣದಲ್ಲಿನ ಟಾರ್ಗೆಟ್ ಏನು? ಬಿಜೆಪಿ ಗುರಿ ಏನು ಅನ್ನೋದನ್ನು ಮೋದಿ ವಿವರಿಸಿದ್ದಾರೆ.

ಬೆಂಗಳೂರು(ಏ.20) ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಪ್ರಚಾರ ವಿಷಯ, ಮೋದಿ, ಮೋದಿ ಕುಟುಂಬ, ಮೋದಿ ವಿರುದ್ಧ ಸುಳ್ಳು ಆರೋಪವಾಗಿದೆ. ಆದರೆ ಮೋದಿ ಗುರಿ ಏನು? ಮೋದಿ ಗುರಿ 21ನೇ ಶತಮಾನದ ಅಭಿವೃದ್ಧಿ, ಭಾರತದ ಗ್ಲೋಬಲ್ ಇಮೇಜ್, ನಾಗರೀಕರ ಅಭಿವೃದ್ಧಿ. ನೀವೆಲ್ಲಾ ಮೋದಿಯ ಪರಿವಾರ. ನನ್ನ ಪರಿವಾರ ಮೇರಾ ಭಾರತ್ ಎಂದು ಮೋದಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಸಮಾವೇಶದ ಬಳಿಕ ನೇರವಾಗಿ ಬೆಂಗಳೂರಿನ ಅರಮನೆ ಮೈದಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ತಾಯಿ ಭುವನೇಶ್ವರಿ, ತಾಯಿ ಅಣ್ಣಮ್ಮ, ದೇವಿ ಬನಶಂಕರಿ, ದೊಡ್ಡಗಣಪತಿ, ಬಸವಣ್ಣ ಚರಣಗಳಿಗೆ ನಮಸ್ಕರಿಸುತ್ತಾ ಮೋದಿ ಮಾತು ಆರಂಭಿಸಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರು ಜನತೆ ಈ ಸಮಾವೇಶಕ್ಕೆ ಆಗಮಿಸಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರ ಅನ್ನೋದು ಈ ಸಂಖ್ಯೆ ಹೇಳುತ್ತಿದೆ ಎಂದರು.

2019ರಲ್ಲಿ ಕರ್ನಾಟಕ ಜನರು ದಾಖಲೆ ಪ್ರಮಾಣದಲ್ಲಿ ಸ್ಥಾನಗಳನ್ನು ಗೆಲ್ಲಿಸಿ ದೇಶದಲ್ಲಿ ಸುಭದ್ರ ಸರ್ಕಾರ ನಿರ್ಮಾಣಕ್ಕೆ ಕಾರಣವಾಗಿದ್ದೀರಿ. ಭಾರತದ ಬ್ಯಾಂಕ್‌ಗಳು ಸಂಕಷ್ಟದಲ್ಲಿದ್ದವು. ಹಗರಣಗಳು, ಆರ್ಥಿಕ ನಷ್ಟದಲ್ಲಿತ್ತು. ಇದೀಗ ಇವೆಲ್ಲವನ್ನು ದಾಟಿ ಭಾರತ ಅಭಿವೃದ್ಧಿಯತ್ತ ಮುಂದೆ ಸಾಗುತ್ತಿದೆ. ಇದೀಗ ವಿಶ್ವದ ಹಲವು ರಾಷ್ಟ್ರಗಳು ಭಾರತದ ಜೊತೆಗೆ ಒಪ್ಪಂದಕ್ಕೆ ಮುಂದಾಗಿದೆ. ಭಾರತದ ಮೇಲೆ ದಾಖಲೆ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿದೆ. ಭಾರತ 11ನೇ ಆರ್ಥಿಕತೆಯಾಗಿತ್ತು. ಇದೀಗ ಭಾರತ ಟಾಪ್ 5 ಆರ್ಥಿಕತೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದೀಗ ಇತರ ದೇಶವನ್ನು ಫಾಲೋ ಮಾಡುವ ಭಾರತವಲ್ಲ, ನಾವೇ ಇತರರಿಗೆ ಮಾದರಿಯಾಗುತ್ತಿದ್ದೇವೆ. ಈ ಬಾರಿ ಇಂಡಿಯಾ ಒಕ್ಕೂಟದ ನಾಯಕರು ಒಂದು ಟೇಪ್ ರೆಕಾರ್ಡ್ ಹಿಡಿದು ಸಾಗುತ್ತಿದ್ದಾರೆ. ಆದರೆ ಮೋದಿ ಸರ್ಕಾರ ನಮ್ಮ ಟ್ರಾಕ್ ರೆಕಾರ್ಡ್ ಮುಂದಿಟ್ಟು ಪ್ರಚಾರ ಮಾಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ. 

ನಾನು ಸಾಧಾರಣ ಬಡ ಕುಟುಂಬದಿಂದ ಬಂದಿದ್ದೇನೆ. ಹೀಗಾಗಿ ನನಗೆ ಬಡ ಕುಟುಂಬದ ಸಮಸ್ಯೆಗಳು, ಸವಾಲುಗಳು ಗೊತ್ತಿದೆ. ಇದೀಗ ಭಾರತದ ವೇಗವಾಗಿ ಬೆಳೆಯುತ್ತಿದೆ. ಮಧ್ಯಮ ವರ್ಗದ ಕುಟುಂಬ ಉತ್ತಮ ಜೀವನ ಅತ್ಯವಶ್ಯಕವಾಗಿದೆ. ಇದಕ್ಕಾಗಿ ಸಾಮಾಜಿಕ, ಆರ್ಥಿಕ ಹಾಗೂ ಡಿಜಿಟಲ್ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ದಾಖಲೆ ಪ್ರಮಾಣದಲ್ಲಿ ಅನುದಾನ ನೀಡಲಾಗಿದೆ. ಕಳೆದ 10 ವರ್ಷಗಳಲ್ಲಿ ಬಡವರಿಗೆ 1 ಕೋಟಿ ಮನೆ ನೀಡಲಾಗಿದೆ. ಇದರಲ್ಲಿ 84 ಸಾವಿರ ಮನೆ ಬೆಂಗಳೂರಿನ ಫಲಾನುಭವಿಗಲಿಗೆ ಸಿಕ್ಕಿದೆ ಎಂದಿದೆ.

ಸಬ್ಸಡಿ ನೀಡಿ ಬಡವರಿಗೆ ಮನೆ ಒದಗಿಸಿದ್ದೇವೆ. ಇದೀಗ 7 ಲಕ್ಷ ರೂಪಾಯಿ ಆದಾಯಗಳಿಸುವರು ಆದಾಯ ತೆರಿಗೆ ಕಟ್ಟುವಂತಿಲ್ಲ. 2014ರ ಮೊದಲು ಹೆಚ್ಚಿನ ತೆರಿಗೆ ವಿಧಿಸಬೇಕಿತ್ತು. ಆದರೆ ಜಿಎಸ್‌ಟಿ ಜಾರಿಬಳಿಕ ಜನರಿಗೆ ಅನುಕೂಲವಾಗಿದೆ. ಎಲ್‌ಇಡಿ ಬಲ್ಬ್ ಬೆಲೆ 400 ರೂಪಾಯಿ ಇತ್ತು. ಇದೀಗ 40 ರೂಪಾಯಿಗೆ ಲಭ್ಯವಿದೆ. ಪಿಎಂ ಸೂರ್ಯಘರ್ ಮುಕ್ತ ವಿದ್ಯುತ್ ಯೋಜನೆ ಜಾರಿ ಮಾಡಲಾಗಿದೆ.

2014ರ ಮೊದಲು 1 ಜಿಬಿ ಡೇಟಾಗೆ 200 ರೂಪಾಯಿ ಆಗುತ್ತಿತ್ತು. ಇದೀಗ 10 ರೂಪಾಯಿಗೆ ಲಭ್ಯವಾಗಿದೆ. ಬಿಜೆಪಿ ಸರ್ಕಾರದಿಂದ ಅಗ್ಗದ ಡೇಟಾ, ಸಂಪರ್ಕ ಸೇವೆಯನ್ನು ಒದಗಿಸುತ್ತಿದೆ. ನಮ್ಮ ಸರ್ಕಾರ ಡೇಟಾ ಬಿಲ್ ತಂದಿದೆ. ಇದರಿಂದ ಜನರಿಗೆ ಉಪಯೋಗವಾಗಿದೆ ಎಂದು ಮೋದಿ ಹೇಳಿದ್ದಾರೆ. ಎಐ ಯುಗಕ್ಕೆ ಪ್ರವೇಶ ಪಡೆಯಲು ಸುಲಭವಾಗಿದೆ. ನಾಡಪ್ರಭು ಕೇಂಪೇಗೌಡ ಬೆಂಗಳೂರಿನ ಕನಸು ಕಂಡಿದ್ದರು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮೂಲಕ ಕರ್ನಾಟಕವನ್ನು ಕೆಳಮಟ್ಟಕ್ಕೆ ತಳ್ಳುತ್ತಿದ್ದಾರೆ. ಬೆಂಗಳೂರು ಜನರ ಸಮಸ್ಯೆಗೆ ಕಾಂಗ್ರೆಸ್‌ಗೆ ಉತ್ತರವಿಲ್ಲ ಎಂದು ಮೋದಿ ಹೇಳಿದ್ದಾರೆ. 

click me!