ಚಾಯ್ ಸಮೋಸಾಗೆ I-N-D-I-A ಸಭೆ ಸೀಮಿತ, ಮಿತ್ರ ಪಕ್ಷ ಜರೆದು ಮೋದಿ ಹೊಗಳಿದ ಜಿಡಿಯು ನಾಯಕ!

By Suvarna NewsFirst Published Dec 7, 2023, 3:51 PM IST
Highlights

ಪಂಚ ರಾಜ್ಯ ಚುನಾವಣೆ ಸೋಲಿನ ಬಳಿಕ ಇಂಡಿ ಒಕ್ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಡಿ.6ರಂದು ನಡೆದ ಸಭೆ ಸಾಬೀತು ಮಾಡಿದೆ. ಇದೀಗ ಈ ಸಭೆಯನ್ನು ಮಿತ್ರ ಪಕ್ಷಗಳಲ್ಲಿ ಒಂದಾಗಿರುವ ಆರ್‌ಜೆಡಿ ನಾಯಕ ಕುಟುಕಿದ್ದಾರೆ. ಇಂಡಿ ಸಭೆ ಕೇವಲ ಚಾಯ್ ಮತ್ತು ಸಮೋಸಾಗೆ ಸೀಮಿತವಾಗಿದೆ ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ನಾಯಕತ್ವ ಹೊಗಳಿದ್ದಾರೆ.

ನವದೆಹಲಿ(ಡಿ.07) ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಕರೆದ ಇಂಡಿ ಒಕ್ಕೂಟ ಸಭೆ ಗೊಂದಲದಲ್ಲೇ ಅಂತ್ಯಗೊಂಡಿದೆ. ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಪ್ರಮುಖ ನಾಯಕರು ಗೈರಾಗಿದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿರೋಧ ಪಕ್ಷಗಳ ನಡುವೆ ಒಡುಕು ಹೆಚ್ಚಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಯಾವುದೇ ಮಹತ್ವದ ನಿರ್ಣಯ ಆಗಿಲ್ಲ, ಜೊತೆಗೆ ಗಂಭೀರ ವಿಚಾರಗಳು ಚರ್ಚೆಯಾಗಿಲ್ಲ. ಈ ಬೆಳವಣಿಗೆ ನಡುವೆಯೆ ವಿಪಕ್ಷದ ಇಂಡಿ ಒಕ್ಕೂಟದ ಪಾಲುದಾರ ಜೆಡಿಯು ಪಕ್ಷದ ನಾಯಕ ಇದೀಗ ಇಂಡಿ ಒಕ್ಕೂಟ ಸಭೆಯನ್ನು ಕುಟುಕಿದ್ದರೆ. ಇಂಡಿ ಒಕ್ಕೂಟ ಸಭೆ ಕೇವಲ ಚಾಯ್ ಮತ್ತು ಸಮೋಸಾಗೆ ಸೀಮಿತವಾಗಿದೆ ಎಂದಿದ್ದಾರೆ.

ಜೆಡಿಯು ಸಂಸದ ಸುನಿಲ್ ಕುಮಾರ್ ಪಿಂಟು ಹೇಳಿಕೆ ವಿಪಕ್ಷಗಳಿಗೆ ಮುಜುಗುರ ತರಿಸಿದೆ. ಇಂಡಿ ಒಕ್ಕೂಟ ಸಭೆಯಲ್ಲಿ ಯಾವುದೇ ಗಂಭೀರ ಚರ್ಚೆ ನಡೆಯತ್ತಿಲ್ಲ. ಸಭೆಗೂ ಮೊದಲೇ ವಿರೋಧ, ಅಪಸ್ವರ, ಮುನಿಸುಗಳು ಕಾಣಿಸಿಕೊಳ್ಳುತ್ತದೆ. ಬಳಿಕ ಕಾಟಾಚಾರಕ್ಕೆ ಸಭೆ ನಡೆಯುತ್ತದೆ. ಎಲ್ಲೀವರೆಗೆ ಸೀಟು ಹಂಚಿಕೆ ಆಗುವುದಿಲ್ಲವೋ ಅಲ್ಲೀವರೆಗೆ ಇಂಡಿ ಒಕ್ಕೂಟ ಸಭೆ ಚಾಯ್ ಮತ್ತು ಸಮೋಸಾಗೆ ಸೀಮಿತಗೊಳ್ಳಲಿದೆ ಎಂದು ಸುನಿಲ್ ಕುಮಾರ್ ಪಿಂಟು ಹೇಳಿದ್ದಾರೆ.

ಭಾರತ್ ಜೋಡೋ ಮಾಡಿದ ಕಾಂಗ್ರೆಸ್‌ನಿಂದಲೇ ಇದೀಗ ಉತ್ತರ-ದಕ್ಷಿಣ ವಿಭಜನೆ ಕಿಡಿ!

ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಅದ್ಭುತವಾಗಿ ಮುನ್ನಡೆಯುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತಿಸಘಡ ವಿಧಾನಸಭೆ ಚುನಾವಣೆ ಗೆದ್ದುಕೊಂಡಿದೆ. ಮೋದಿ ಇದ್ದರೆ ಎಲ್ಲವೂ ಸಾಧ್ಯ ಅನ್ನೋ ಘೋಷ ವಾಕ್ಯದಂತೆ ಗೆಲುವು ಸಾಧಿಸುತ್ತಿದೆ ಎಂದಿದ್ದಾರೆ. 

ಆರಂಭಿಕ 2 ಸಭೆಗಳಲ್ಲಿ 26ಕ್ಕೂ ಹೆಚ್ಚು ಪಕ್ಷದ ನಾಯಕರು ಇಂಡಿ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಪಂಚ ರಾಜ್ಯ ಸೋಲಿನ ಬಳಿಕ ನಡೆದ ಸಭೆಯಲ್ಲಿ 17 ಪಕ್ಷದ ನಾಯಕರು ಭಾಗಿಯಾಗಿದ್ದರು. ಅಧಿಕಾರದಲ್ಲಿದ್ದ 2 ರಾಜ್ಯಗಳನ್ನು ಕಳೆದುಕೊಂಡ ಬಳಿಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವುದು ಕಾಂಗ್ರೆಸ್‌ಗೆ ಮತ್ತಷ್ಟು ಕಠಿಣವಾಗಿ ಪರಿಣಮಿಸಿದೆ. ಹೀಗಾಗಿ ಇಂಡಿಯಾ ಒಕ್ಕೂಟವನ್ನು ಮತ್ತಷ್ಟು ಬಲ ಪಡಿಸಲು ಈ ಸಭೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮೈತ್ರಿಕೂಟವನ್ನು ಬಲಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಮುಂದಿನ ಸಭೆ ನಡೆಸುವ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನಿಂದ ಇಂಡಿಯಾ ಕೂಟದಲ್ಲಿ ಒಡಕು

ರಾಹುಲ್‌ ಗಾಂಧಿ, ಗೌರವ್‌ ಗೊಗೋಯ್‌, ನಾಸಿರ್‌ ಹುಸೇನ್‌, ರಜನಿ ಪಾಟೀಲ್‌, ಅಧೀರ್‌ ರಂಜನ್‌ ಚೌಧರಿ, ಪ್ರಮೋದ್‌ ತಿವಾರಿ, ಕೆ.ಸಿ.ವೇಣುಗೋಪಾಲ್‌, ಜೈರಾಂ ರಮೇಶ್‌ (ಕಾಂಗ್ರೆಸ್‌) ಮಹುವಾ ಮಾಜಿ (ಜೆಎಂಎಂ), ಎನ್‌.ಕೆ.ಪ್ರೇಮಚಂದ್ರ (ಆರ್‌ಎಸ್‌ಪಿ), ಬಿನೋಯ್‌ ವಿಶ್ವಮ್‌(ಸಿಪಿಐ), ವಂದನಾ ಚಡ್ಡಾ (ಎನ್‌ಸಿಪಿ), ರಾಘವ್‌ ಚಡ್ಡಾ (ಆಪ್‌), ತಿರುಚಿ ಸಿವ (ಡಿಎಂಕೆ), ಎಳಮಾರನ್‌ ಕೀರಂ (ಸಿಪಿಎಂ), ಫಯಾನ್‌ ಅಹ್ಮದ್‌ (ಆರ್‌ಜೆಡಿ), ಜಾವೇದ್‌ ಅಲಿ ಖಾನ್‌ (ಎಸ್‌ಪಿ), ಟಿ.ಆರ್‌.ಬಾಲು (ಡಿಎಂಕೆ) ಸದಸ್ಯರು ಇಂಡಿ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದರು.
 

click me!