ಮಾನವ ಸಹಿತ ಚಂದ್ರಯಾನಕ್ಕೆ ಸ್ವದೇಶಿ ಅಂತರಿಕ್ಷ ನೌಕೆ ಸಿದ್ಧ ಶೀಘ್ರವೇ ಇಸ್ರೋಗೆ ಹಸ್ತಾಂತರ

Published : Feb 16, 2023, 07:51 AM IST
ಮಾನವ ಸಹಿತ ಚಂದ್ರಯಾನಕ್ಕೆ  ಸ್ವದೇಶಿ ಅಂತರಿಕ್ಷ ನೌಕೆ ಸಿದ್ಧ ಶೀಘ್ರವೇ ಇಸ್ರೋಗೆ ಹಸ್ತಾಂತರ

ಸಾರಾಂಶ

ಮಾನವ ಸಹಿತ ಚಂದ್ರಯಾನ ಹಾಗೂ ಬಾಹ್ಯಾಕಾಶ ಪ್ರಯಾಣಕ್ಕೆ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸಿದ್ಧಪಡಿಸಿರುವ ಸ್ವದೇಶಿ ಆರ್ಬಿಟರ್‌ (ಅಂತರಿಕ್ಷ ನೌಕೆ) ಅತಿ ಶೀಘ್ರದಲ್ಲಿ ಇಸ್ರೋಗೆ ಹಸ್ತಾಂತರಗೊಳ್ಳಲಿದೆ.

ಬೆಂಗಳೂರು: ಮಾನವ ಸಹಿತ ಚಂದ್ರಯಾನ ಹಾಗೂ ಬಾಹ್ಯಾಕಾಶ ಪ್ರಯಾಣಕ್ಕೆ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸಿದ್ಧಪಡಿಸಿರುವ ಸ್ವದೇಶಿ ಆರ್ಬಿಟರ್‌ (ಅಂತರಿಕ್ಷ ನೌಕೆ) ಅತಿ ಶೀಘ್ರದಲ್ಲಿ ಇಸ್ರೋಗೆ ಹಸ್ತಾಂತರಗೊಳ್ಳಲಿದೆ. ಎಚ್‌ಎಎಲ್‌ ಕೇಂದ್ರ ಹೆಲಿಕಾಪ್ಟರ್‌, ಯುದ್ಧ ವಿಮಾನಗಳನ್ನು ಮಾತ್ರವಲ್ಲದೇ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋಗೆ ಸಹಕಾರಿ ಆಗುವ ಅನೇಕ ಯೋಜನೆಗಳಿಗೆ ಕೈಜೋಡಿಸುತ್ತಿದೆ. ಈ ಪೈಕಿ ಮಾನವ ಸಹಿತ ಚಂದ್ರಯಾನಕ್ಕೆ ಅಗತ್ಯವಿರುವ ಅಂತರಿಕ್ಷನೌಕೆಯನ್ನು ಸಿದ್ಧಪಡಿಸುವ ಮಹತ್ವಕಾಂಕ್ಷಿ ಯೋಜನೆಯೂ ಒಂದಾಗಿದೆ.

ಒಳಗೆ ಏನೇನಿದೆ?:

ಎಚ್‌ಎಎಲ್‌ (HAL) ಮಾನವ ಸಹಿತ (manned)ಮತ್ತು ಮಾನವ ರಹಿತ ಎರಡೂ ಮಾದರಿಯಲ್ಲಿ ಸ್ವದೇಶಿ ಆರ್ಬಿಟರ್‌ (indigenous orbiter) ಅನ್ನು ಸಿದ್ಧಪಡಿಸಿದೆ. ಮಾನವ ಸಹಿತ ಆರ್ಬಿಟರ್‌ನಲ್ಲಿ ಮೂವರು ಯಾತ್ರಿಗಳು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಯಾತ್ರಿಗಳಿಗೆ ಅಗತ್ಯವಿರುವ ವ್ಯವಸ್ಥೆಯನ್ನು ಈ ಆರ್ಬಿಟರ್‌ನ ಒಳಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಲಗುವುದಕ್ಕೆ ಮಂಚ, ಟೇಬಲ್‌, ಆಹಾರ ಸಾಮಗ್ರಿ ಸಂಗ್ರಹಕ್ಕೆ ಪೆಟ್ಟಿಗೆ ಸೇರಿದಂತೆ ಮೊದಲಾದವು ಇರಲಿವೆ.

ಅಮೆರಿಕಾದ 1, ದೇಶದ 2 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋದ SSLV-D2

ಕಳೆದ ಎರಡ್ಮೂರು ವರ್ಷದಿಂದ ಎಚ್‌ಎಎಲ್‌ ಆರ್ಬಿಟರ್‌ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಸ್ರೋ ನೀಡಿದ ತಂತ್ರಜ್ಞಾನ ಮತ್ತು ಸಲಹೆಯ ಮೇರೆಗೆ ಅಭಿವೃದ್ಧಿ ಪಡಿಸಲಾಗಿದೆ. ಆರ್ಬಿಟರ್‌ ಒಟ್ಟು 14.5 ಮೀಟರ್‌ ಎತ್ತರ, 3.7 ಮೀಟರ್‌ ವ್ಯಾಸ ಹಾಗೂ 6 ಟನ್‌ ತೂಕವನ್ನು ಹೊಂದಿರಲಿದೆ. ಆರ್ಬಿಟರ್‌ ಸಂಪೂರ್ಣವಾಗಿ ಸಿದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಸಮ್ಮುಖದಲ್ಲಿ ಇಸ್ರೋಗೆ ಹಸ್ತಾಂತರಿಸಲಾಗುವುದು. ಈ ವರ್ಷದಲ್ಲಿ ಹಸ್ತಾಂತರಿಸುವ ಕಾರ್ಯ ನಡೆಯಲಿದೆ ಎಂದು ಎಚ್‌ಎಎಲ್‌ನ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಚಂದ್ರಯಾನಕ್ಕೆ ಸೀಮಿತವಲ್ಲ

ಈ ಮಾನವ ಸಹಿತ ಬಾಹ್ಯಾಕಾಶ ಆರ್ಬಿಟರ್‌ ಕೇವಲ ಚಂದ್ರಯಾನ, ಮಂಗಳಯಾನಕ್ಕೆ ಮಾತ್ರ ಸೀಮಿತವಲ್ಲ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸ್ಯಾಟಲೈಟ್‌ಗಳ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಕ್ಕೆ ಈ ಆರ್ಬಿಟರ್‌ ಬಳಸಿ ಪ್ರಯಾಣ ಮಾಡಬಹುದಾಗಿದೆ.

ಇಂಚಿಂಚೂ ಭೂಮಿ ಜಾಲಾಡುವ ‘ನಿಸಾರ್‌’ ಉಪಗ್ರಹ ಸಿದ್ಧ: ಇಸ್ರೋ ಸಾಧನೆ

ಗಮನ ಸೆಳೆದ ಮಾದರಿ:

ಏರೋ ಇಂಡಿಯಾದಲ್ಲಿ ಎಚ್‌ಎಎಲ್‌ ಹಾಲ್‌ನಲ್ಲಿ ಈ ಆರ್ಬಿಟರ್‌ನ ಮಾದರಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಹೆಲಿಕಾಪ್ಟರ್‌, ಯುದ್ಧ ವಿಮಾನಗಳ ಮಾದರಿಯ ನಡುವೆ ನೋಡುಗರ ಗಮನ ಸೆಳೆಯುತ್ತಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..