ಐಟಿ ರೇಡ್‌: ಕಾಂಗ್ರೆಸ್‌ ಸಂಸದನ ನಿವಾಸದಲ್ಲಿ ಪತ್ತೆಯಾಯ್ತು ನೂರಾರು ಕೋಟಿ ರೂ. ನಗದು!

By BK Ashwin  |  First Published Dec 8, 2023, 1:29 PM IST

ಕಾಂಗ್ರೆಸ್‌ ನಾಯಕನ ಮನೆಯಲ್ಲಿ ಸಿಕ್ಕಿರುವ ಹಣದ ನಿಖರವಾದ ಮೊತ್ತದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, 150 ರಿಂದ 300 ಕೋಟಿ ರೂ. ಎಂದು ಐಟಿ ಮೂಲಗಳು ಹೇಳಿವೆ.


ರಾಂಚಿ (ಡಿಸೆಂಬರ್ 8, 2023): ಜಾರ್ಖಂಡ್‌, ಒಡಿಶಾ ಸೇರಿ ಹಲವೆಡೆ ಐಟಿ ರೇಡ್‌ ನಡೆದಿದೆ. ಈ ವೇಳೆ, ಜಾರ್ಖಂಡ್‌ನಲ್ಲಿ, ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಧೀರಜ್ ಪ್ರಸಾದ್ ಸಾಹು ನಿವಾಸಗಳಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೊತ್ತವು 100 ಕೋಟಿ ರೂಪಾಯಿಗಳನ್ನು ಮೀರಿದ್ದು, ಎಂದು ಮೂಲಗಳು ವರದಿ ಮಾಡಿದೆ. 

ಕಾಂಗ್ರೆಸ್‌ ನಾಯಕನ ಮನೆಯಲ್ಲಿ ಸಿಕ್ಕಿರುವ ಹಣದ ನಿಖರವಾದ ಮೊತ್ತದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, 150 ರಿಂದ 300 ಕೋಟಿ ರೂ. ಎಂದು ಐಟಿ ಮೂಲಗಳು ಹೇಳಿವೆ. ಧೀರಜ್ ಪ್ರಸಾದ್ ಸಾಹು ನಿವಾಸದಲ್ಲಿ ನೋಟುಗಳಿಂದ ತುಂಬಿದ ಅಲ್ಮೇರಾ ಪತ್ತೆಯಾಗಿದ್ದು, ನೋಟುಗಳ ಎಣಿಕೆ ಕಾರ್ಯ ಅಂತಿಮಗೊಂಡಿರಲಿಲ್ಲ ಎಂದೂ ಹೇಳಲಾಗಿದೆ. ಸ್ವಾರಸ್ಯಕರ ಸಂಗತಿಯೆಂದರೆ, ವಸೂಲಿಯಾದ ಹಣವನ್ನು ಎಣಿಸಲು ಐಟಿ ಅಧಿಕಾರಿಗಳು ಬಳಸುತ್ತಿದ್ದ ನೋಟು ಎಣಿಕೆ ಯಂತ್ರವು 50 ಕೋಟಿ ರೂ. ವರೆಗೆ ಎಣಿಸಿದ ನಂತರ ಕೆಟ್ಟುಹೋಯಿತು. 

Tap to resize

Latest Videos

ಇದನ್ನು ಓದಿ: ಚುನಾವಣೆಯಲ್ಲಿ ಹಂಚಲು ಕರ್ನಾಟಕದಿಂದ ತೆಲಂಗಾಣಕ್ಕೆ 3.5 ಕೋಟಿ ರೂ. ಹಣ ಸಾಗಾಟ! ಹೈದರಾಬಾದಲ್ಲಿ ಜಪ್ತಿ

ಬುಧವಾರ (ಡಿಸೆಂಬರ್ 6) ರಾಂಚಿ ಮತ್ತು ಲೋಹರ್ದಗಾದಲ್ಲಿನ ನಿವಾಸಗಳು ಸೇರಿದಂತೆ ಐದು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ರಾಂಚಿಯ ರೇಡಿಯಂ ರಸ್ತೆಯಲ್ಲಿರುವ ಸುಶೀಲಾ ನಿಕೇತನ್ ನಿವಾಸದ ಹೊರತಾಗಿ, ಒಡಿಶಾದ ಬಲಂಗೀರ್, ಸಂಬಲ್‌ಪುರ್ ಮತ್ತು ಕಲಹಂಡಿಯಲ್ಲಿ ತಲಾ ಒಂದು ಸ್ಥಳದಲ್ಲಿ ದಾಳಿ ನಡೆಸಲಾಗಿದೆ.

ಇನ್ನು, ಆದಾಯ ತೆರಿಗೆ ಇಲಾಖೆ ತಂಡವು ಲೋಹರ್ಡಗಾ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲಿಸಿದೆ. ಈ ಕಾರ್ಯಾಚರಣೆಯ ವೇಳೆ ಯಾರಿಗೂ ಆವರಣದೊಳಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಮತ್ತು ಐಟಿ ತಂಡವು ಬೆಳಗ್ಗೆಯಿಂದ ತಡರಾತ್ರಿಯವರೆಗೆ ಕೆಲಸ ಮಾಡಿದೆ ಎಂದೂ ತಿಳಿದುಬಂದಿದೆ. ಗುರುವಾರ ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ (ಬಿಡಿಪಿಎಲ್) ಸಹ ದಾಳಿ ನಡೆಸಲಾಯಿತು.

ಕರ್ನಾಟಕ ರಾಜಕಾರಣ ಟಾಪ್‌ 10 ತಿರುಗುಬಾಣ: ಐಟಿ ದಾಳಿಯ ನಂತರ ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿ

ಜಾರ್ಖಂಡ್‌ನ ಲೋಹರ್ಡಗಾ ನಿವಾಸಿಯಾಗಿರುವ ಧೀರಜ್ ಸಾಹು 1977 ರಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಹಳೆಯ ಕಾಂಗ್ರೆಸ್ ನಾಯಕರಾಗಿದ್ದು, ಅವರು ಮೂರನೇ ಬಾರಿಗೆ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 

click me!