
ಬೆಂಗಳೂರು(ಜು.06): ಕೇಂದ್ರ ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ನೂತನ ಗವರ್ನರ್‌ಗಳನ್ನು ನೇಮಿಸಲಾಗಿದೆ. ಕರ್ನಾಟಕ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕಗೊಂಡಿದ್ದಾರೆ.
"
ಇಲ್ಲಿದೆ ನೂತನ ರಾಜ್ಯಪಾಲರ ಪಟ್ಟಿ:
1. ಕರ್ನಾಟಕದ- ತವಾರ್ಚಂದ್ ಗೆಹ್ಲೋಟ್
2. ಮಿಜೋರಾಂ- ಹರಿ ಬಾಬು ಕಂಭಂಪತಿ
3. ಮಧ್ಯಪ್ರದೇಶದ- ಮಂಗುಭಾಯ್ ಚಗನ್ಭಾಯ್ ಪಟೇಲ್
4. ಹಿಮಾಚಲ ಪ್ರದೇಶ- ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್
5. ಗೋವಾ- ಪಿ.ಎಸ್.ಶ್ರೀಧರನ್ ಪಿಳ್ಳೈ
6. ತ್ರಿಪುರ- ಸತ್ಯದೇವ್ ನಾರಾಯಣ್ ಆರ್ಯ
7. ಜಾರ್ಖಂಡ್- ರಮೇಶ್ ಬೈಸ್
8. ಹರ್ಯಾಣ- ಬಂದಾರು ದತ್ತಾತ್ರೇಯ
ಕರ್ನಾಟಕ ನೂನತ ಸಿಎಂ ಥಾವರ್ ಚಂದ್ ಗೆಹ್ಲೋಟ್ ಬಗ್ಗೆ ಒಂದಷ್ಟು ಮಾಹಿತಿ:
ವಿ.ಆರ್. ವಾಲಾ ಸ್ಥಾನಕ್ಕೆ ಬಂದಿರುವ ತಾವರ್ ಚಂದ್ ಗೆಹ್ಲೋಟ್ ಬಿಜೆಪಿಯ ಹಿರಿಯ ದಲಿತ ನಾಯಕ. ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಪ್ರಧಾನಿ ಮೋದಿಯ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿರುವ ಗೆಹ್ಲೋಟ್ ಸಾಮಾಜಿಕ ನ್ಯಾಯ ಖಾತೆ ಹೊಣೆಯನ್ನು ನಿಭಾಯಿಸುತ್ತಿದ್ದರು. 2013 ರಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ಯಾಗಿ ಕಾರ್ಯನಿರ್ವಹಿಸಿದ್ದ ಗೆಹ್ಲೋಟ್, 2024 ವರೆಗೂ ರಾಜ್ಯಸಭೆಯ ಅವಧಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ