ಮಹಾ ಸ್ಪೀಕರ್ ನಿಂದಿಸಿದ 12 ಬಿಜೆಪಿ ಶಾಸಕರು 1 ವರ್ಷ ಸಸ್ಪೆಂಡ್!

By Suvarna NewsFirst Published Jul 6, 2021, 9:39 AM IST
Highlights

* ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ಕಚೇರಿಯಲ್ಲಿ ಸ್ಪೀಕರ್ ಜತೆ ದುರ್ವರ್ತನೆ 

* 12 ಬಿಜೆಪಿ ಶಾಸಕರು 1 ವರ್ಷ ಸಸ್ಪೆಂಡ್‌

* ಮುಂಬೈ ಮತ್ತು ನಾಗ್ಪುರ ವಿಧಾನಸಭೆ ಪ್ರವೇಶಿಸದಂತೆ ನಿರ್ಬಂಧ 

ಮುಂಬೈ(ಜು.06): ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ಕಚೇರಿಯಲ್ಲಿ ಅಧಿಕಾರಿ ಜತೆ ದುರ್ವರ್ತನೆ ತೋರಿದ 12 ಬಿಜೆಪಿ ಶಾಸಕರನ್ನು ಒಂದು ವರ್ಷದ ಅವಧಿವರೆಗೆ ಅಮಾನತು ಮಾಡಲಾಗಿದೆ.

ಮಹಾರಾಷ್ಟ್ರದ ಸಂಸದೀಯ ಸಚಿವ ಅನಿಲ್‌ ಪರಬ್‌ ಅವರು, ‘ಸೋಮವಾರ ಅಮಾನತು ಆಗಿರುವ 12 ಬಿಜೆಪಿ ಶಾಸಕರನ್ನು ಒಂದು ವರ್ಷದವರೆಗೆ ಮುಂಬೈ ಮತ್ತು ನಾಗ್ಪುರ ವಿಧಾನಸಭೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ’ ಎಂದಿದ್ದಾರೆ.

12 Maharashtra BJP MLAs are suspended for a year & this is how MVA 'll get majority.

MVA govt doesn't want to give OBC reservation so they took this cowardly action. dares the govt to suspend all 106 MLAs bcuz BJP will continue fighting until OBCs get their right. pic.twitter.com/ucHa7L85cG

— PoliticsSolitics (@IamPolSol)

ಇದನ್ನು ತೀವ್ರವಾಗಿ ವಿರೋಧಿಸಿರುವ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌, ‘ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವಿಚಾರಗಳ ವಿಚಾರ ಸಂಬಂಧ ಸರ್ಕಾರದ ತಪ್ಪು ನಡೆಯನ್ನು ಬಯಲು ಮಾಡಿದ್ದಕ್ಕಾಗಿ, ವಿಪಕ್ಷಗಳ ಸದಸ್ಯರ ಸಂಖ್ಯೆ ಕ್ಷೀಣಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ’ ಎಂದು ಕಿಡಿಕಾರಿದರು.

click me!