ಕೋಲ್ಕತಾದಲ್ಲಿನ ಸಂಗೀತ ಸಂಜೆ ರದ್ದು ಮಾಡಿದ ಶ್ರೇಯಾ ಘೋಷಾಲ್

By Kannadaprabha News  |  First Published Sep 1, 2024, 10:11 AM IST

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ಕೋಲ್ಕತಾದಲ್ಲಿ ಸೆ.14ರಂದು ನಿಗದಿಯಾಗಿದ್ದ ತಮ್ಮ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿ ದಿನಾಂಕ ಮುಂದೂಡುವುದಾಗಿ ತಿಳಿಸಿದ್ದಾರೆ. ಕೋಲ್ಕತಾದಲ್ಲಿನ ವೈದ್ಯೆ ಅತ್ಯಾಚಾರ ಮತ್ತು ಆಕೆಯ ಕೊಲೆ ಘಟನೆಯಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.


ಕೋಲ್ಕತಾ: ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ಕೋಲ್ಕತಾದಲ್ಲಿ ಸೆ.14ರಂದು ನಿಗದಿಯಾಗಿದ್ದ ತಮ್ಮ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿ ದಿನಾಂಕ ಮುಂದೂಡುವುದಾಗಿ ತಿಳಿಸಿದ್ದಾರೆ. ಕೋಲ್ಕತಾದಲ್ಲಿನ ವೈದ್ಯೆ ಅತ್ಯಾಚಾರ ಮತ್ತು ಆಕೆಯ ಕೊಲೆ ಘಟನೆಯಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮನಸ್ಸಿಗೆ ಅತೀವ ನೋವು ತಂದಿದೆ. ಹೀಗಾಗಿ ಸೆ.14ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ, ಅಕ್ಟೋಬರ್‌ನಲ್ಲಿ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಮಹಿಳೆಯರ ಮೇಲಿನ ಭದ್ರತೆಗೆ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ ಎಂದು ಶ್ರೇಯಾ ಟ್ವೀಟ್‌ ಮಾಡಿದ್ದಾರೆ.

ತೀವ್ರ ದುಃಖ ಹಾಗೂ ಭಾರವಾದ ಹೃದಯದಿಂದ ನನ್ನ ಪ್ರಮೋಟರ್ಸ್‌ಗಳಾದ ಇಶ್ಕ್ ಎಫ್ಎಂನವರಿಗೆ ಈ ಕನ್ಸರ್ಟ್ ಅನ್ನು ಮುಂದೂಡುವಂತೆ ಹೇಳಿದ್ದೇನೆ ಎಂದು ಶ್ರೇಯಾ ಟ್ವಿಟ್ ಮಾಡಿದ್ದಾರೆ. ಶ್ರೇಯಾ ಘೋಷಾಲ್ ಲೈವ್‌ ಆಲ್ ಹಾರ್ಟ್ಸ್‌ ಇಶ್ಕ್ ಟೂರ್‌ ಎಫ್ ಎಂ ಗ್ರಾಂಡ್ ಕನ್ಸರ್ಟ್‌'ನ್ನು ಕೋಲ್ಕತ್ತಾದ ಇಶ್ಕ್ ಎಫ್‌ಎಂನವರು ಸೆಪ್ಟೆಂಬರ್ 14ರಂದು ನಿಗದಿ ಮಾಡಿದ್ದರು. ಆದರೆ ಈಗ ಶ್ರೇಯಾ ಘೋಷಾಲ್ ಕೋಲ್ಕತಾ ವೈದ್ಯೆಯ ಭೀಕರ ಹತ್ಯೆಗೆ ಬೇಸರ ವ್ಯಕ್ತಪಡಿಸಿ ಈ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಿದ್ದಾರೆ. ಅಲ್ಲದೇ ಸುರಕ್ಷತೆಯ ವಿಚಾರದಲ್ಲಿ ಮಹಿಳೆಯರೆಲ್ಲಾ ಒಂದಾಗುವಂತೆ ಅವರು ಕರೆ ನೀಡಿದ್ದಾರೆ. 

🙏🏻❤️‍🩹 pic.twitter.com/Pk0QfsI6CM

— Shreya Ghoshal (@shreyaghoshal)

Tap to resize

Latest Videos

 

ವೈದ್ಯೆಯ ರೇಪ್‌ಗೂ ನನಗೂ ಸಂಬಂಧವಿಲ್ಲ: ಸಂದೀಪ್ ಘೋಷ್‌

ಕೋಲ್ಕತಾ: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೂ  ನನಗೂ ಸಂಬಂಧವಿಲ್ಲ. ಘಟನೆಯನ್ನು ನಾನು ಮುಚ್ಚಿಟ್ಟಿರಲಿಲ್ಲ. ಆಕೆ ಕೊಲೆಯಾಗಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕ 10 ನಿಮಿಷ ನಂತರ ನನಗೆ ವಿಷಯ ತಿಳಿಯಿತು. ನಾನು ಸಂಚಿನಲ್ಲಿ ಭಾಗಿ ಆಗಿಲ್ಲ ಎಂದು ಆರ್‌ಜಿ ಕರ್‌ ಮೆಡಿಕಲ್‌ ಕಾಲೇಜು ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಹೇಳಿದ್ದಾರೆ.

ಅನಂತ್‌ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್‌ ಇವೆಂಟ್‌, ಲೈವ್ ಶೋ ನಡೆಸಲು ಖ್ಯಾತ ಗಾಯಕರು ಪಡೆದ ಸಂಭಾವನೆ ಎಷ್ಟು?

ಈತನನ್ನು 18 ದಿನ ಕಾಲ ವಿಚಾರಣೆ ಮಾಡಲಾಗಿದ್ದು, 2 ಪಾಲಿಗ್ರಾಫ್ ಪರೀಕ್ಷೆ ಕೂಡ ಮಾಡಲಾಗಿದೆ. ಆದರೆ, ಪೊಲೀಸರಿಗೆ ದೂರು ನೀಡುವವರೆಗೂ ವೈದ್ಯರ ಸಾವಿನ ಬಗ್ಗೆ ತಿಳಿದಿರಲಿಲ್ಲ ಎಂದು ಅದೇ ರಾಗ ಹಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.  ಆ.9ರ ಬೆಳಗ್ಗೆ 9.30ಕ್ಕೆ ವೈದ್ಯೆಯ ಮೃತದೇಹವನ್ನು ಸೆಮಿನಾರ್‌ ಹಾಲ್‌ನಲ್ಲಿ ನೋಡಿ ಮೊದಲ ವರ್ಷದ ಪಿಜಿ ವಿದ್ಯಾರ್ಥಿನಿಯು ಅಲ್ಲಿದ್ದವರಿಗೆ ಮಾಹಿತಿ ನೀಡಿದ್ದಾಳೆ. 10.10ಕ್ಕೆ ಈ ಬಗ್ಗೆ ಔಟ್‌ಪೋಸ್ಟ್‌ನಲ್ಲಿರುವ ಪೊಲೀಸರು ತಾಲಾ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. 10.20ಕ್ಕೆ ನನಗೆ ವಿಷಯ ತಿಳಿಯಿತು ಎಂದು ಘೋಷ್ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಈ ಗಾಯಕ ಹಾಡೋದು ಅಪರೂಪಕ್ಕಾದ್ರೂ ಪಡೆಯೋದು 1 ಗೀತೆಗೆ 3 ಕೋಟಿ!

ಘೋಷ್‌ಗೂ ಅತ್ಯಾಚಾರ ಆರೋಪಿ ಸಂಜಯ ರಾಯ್‌ಗೂ ಅತ್ಯಾಪ್ತ ಸಂಬಂಧವಿದೆ ಎಂಬ ದೂರಿನ ಕಾರಣ ಪೊಲೀಸರು ಘೋಷ್‌ ವಿಚಾರಣೆ ನಡೆಸುತ್ತಿದ್ದಾರೆ.

click me!