'ನಾನು ಏನ್‌ ಮಾತಾಡ್ಬೇಕು?' ರಾಹುಲ್‌ ಹೊಸ ವಿವಾದ!

Published : May 08, 2022, 04:00 AM IST
 'ನಾನು ಏನ್‌ ಮಾತಾಡ್ಬೇಕು?' ರಾಹುಲ್‌ ಹೊಸ ವಿವಾದ!

ಸಾರಾಂಶ

- ತೆಲಂಗಾಣ ರೈತರ ರಾರ‍ಯಲಿಗೂ ಮುನ್ನ ಪ್ರಶ್ನೆ - ನೈಟ್‌ಕ್ಲಬ್‌ ನಂತರ ಇನ್ನೊಂದು ವಿಡಿಯೋ - ಇಂಟರ್ ನೆಟ್ ನಲ್ಲಿ ವೈರಲ್ ಆದ ವೀಡಿಯೋ

ನವದೆಹಲಿ (ಮೇ.8): ತೆಲಂಗಾಣದಲ್ಲಿ (Telangana) ರೈತರ ಸಮಾವೇಶವೊಂದಕ್ಕೆ (farmers Meet)  ಹೋಗಿದ್ದ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ (Rahul Gandhi), ‘ಇವತ್ತಿನ ಮೇನ್‌ ಥೀಮ್‌ ಏನು? ನಾನೇನು ಹೇಳಬೇಕು?’ ಎಂದು ರಾಜ್ಯ ನಾಯಕರ ಬಳಿ ಕೇಳುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ನೇಪಾಳದ ನೈಟ್‌ಕ್ಲಬ್‌ನಲ್ಲಿ ಗೆಳತಿಯೊಂದಿಗಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಇನ್ನೊಂದು ವಿವಾದ ರಾಹುಲ್‌ರನ್ನು ಸುತ್ತಿಕೊಂಡಿದೆ.

ನೈಟ್‌ಕ್ಲಬ್‌ ವಿಡಿಯೋ ಟ್ವೀಟ್‌ ಮಾಡಿದ್ದ ಬಿಜೆಪಿ ನಾಯಕ ಅಮಿತ್‌ ಮಾಳವೀಯ ಅವರೇ ಈಗಿನ ರೈತರ ರಾರ‍ಯಲಿಗೂ ಮುಂಚಿನ ವಿಡಿಯೋ ಕೂಡ ಟ್ವೀಟ್‌ ಮಾಡಿದ್ದಾರೆ. ಇದು 17 ಸೆಕೆಂಡ್‌ ಇದೆ. ಇದರಲ್ಲಿ ರಾಹುಲ್‌ ಗಾಂಧಿ ಸಮಾವೇಶಕ್ಕೂ ಮುನ್ನ ಕೊಠಡಿಯೊಂದರಲ್ಲಿ ರಾಜ್ಯ ನಾಯಕರ ಬಳಿ, ‘ಇವತ್ತಿನ ಮುಖ್ಯವಾದ ಥೀಮ್‌ ಏನು? ನಾನೇನು ಹೇಳಬೇಕು?’ ಎಂದು ಕೇಳುತ್ತಾರೆ. ಈ ಬಗ್ಗೆ ಸ್ಥಳೀಯ ನಾಯಕರು ಏನೋ ಹೇಳಲು ಹೊರಟಿರುವ ವೇಳೆ ಯಾರೋ ತಮ್ಮ ಮಾತುಗಳನ್ನು ವಿಡಿಯೋ ಮಾಡುತ್ತಿರುವುದನ್ನು ಕಂಡ ರಾಹುಲ್‌ ಅವರನ್ನು ಹೊರಗೆ ಕಳುಹಿಸುವಂತೆ ಸೂಚಿಸುತ್ತಾರೆ.

ಈ ವಿಡಿಯೋ ಟ್ವೀಟ್‌ ಮಾಡಿದ ಮಾಳವೀಯ, ‘ನಿನ್ನೆ ರಾಹುಲ್‌ ಗಾಂಧಿ ತೆಲಂಗಾಣದಲ್ಲಿ ರೈತರ ಸಮಾವೇಶದಲ್ಲಿ ಭಾಗವಹಿಸುವುದಕ್ಕೂ ಮುಂಚಿನ ದೃಶ್ಯ. ರೈತರಿಗೆ ಬೆಂಬಲ ನೀಡಬೇಕಾದ ಇವರು ಥೀಮ್‌ ಏನು, ನಾನೇನು ಹೇಳಬೇಕು ಎಂದು ಕೇಳುತ್ತಾರೆ. ಖಾಸಗಿ ವಿದೇಶ ಪ್ರವಾಸ ಹಾಗೂ ನೈಟ್‌ಕ್ಲಬ್‌ ಮೋಜಿನ ನಡುವೆ ರಾಜಕಾರಣ ಮಾಡಿದರೆ ಹೀಗೇ ಆಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

ರೈತರ ಸಂಕಷ್ಟಗಳ ಕುರಿತಾದ ಸಾರ್ವಜನಿಕ ರಾರ‍ಯಲಿಗಳಲ್ಲಿ ಭಾಗವಹಿಸಲು ರಾಹುಲ್‌ ಗಾಂಧಿ ಎರಡು ದಿನಗಳ ತೆಲಂಗಾಣ ಪ್ರವಾಸದಲ್ಲಿದ್ದಾರೆ. "ರೈತರಿಗೆ ಬೆಂಬಲ ನೀಡಬೇಕಾದ ಇವರು ನಾನೇನು ಹೇಳಬೇಕು ಎಂದು ಕೇಳುತ್ತಾರೆ. ಖಾಸಗಿ ವಿದೇಶ ಪ್ರವಾಸ ಹಾಗೂ ನೈಟ್‌ಕ್ಲಬ್‌ ಮೋಜಿನ ನಡುವೆ ರಾಜಕಾರಣ ಮಾಡಿದರೆ ಹೀಗೇ ಆಗುತ್ತದೆ" ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ವಿಡಿಯೋ ಜೊತೆ ಟ್ವೀಟ್ ಮಾಡಿದ್ದಾರೆ.

ಕಲ್ಲಿದ್ದಲು ಹಗರಣ: ಸಿಎಂ ದೀದಿ ಸೋದರಳಿಯನ ಪತ್ನಿ ರುಜಿರಾಗೆ ವಾರಂಟ್‌

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದ ಕಲ್ಲಿದ್ದಲು ಹಗರಣದಲ್ಲಿ (Coal Scam) ಇಡಿ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದ ಮಮತ ಬ್ಯಾನರ್ಜಿ ಅವರ ಸೋದರಳಿಯ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ ದೆಹಲಿ ನ್ಯಾಯಾಲಯ ವಾರಂಟ್‌ ನೀಡಿದೆ. ಹಲವು ಬಾರಿ ಸಮನ್ಸ್‌ ಜಾರಿ ಮಾಡಿದರೂ ರುಜಿರಾ ಅವರು ಕೋರ್ಚ್‌ ಎದುರಾಗಲೀ, ಇ.ಡಿ. ಎದುರಾಗಲೀ ವಿಚಾರಣೆಗೆ ಹಾಜರಾಗಿಲ್ಲ ಎಂದು ಇ.ಡಿ. ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಿತೀಶ್‌ ರಾಣ ನ್ಯಾಯಾಧೀಶರಿಗೆ ಮನವರಿಕೆ ಮಾಡಿದರು. ಈ ಮನವಿಯನ್ನು ಆಲಿಸಿದ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಸ್ನಿಗ್ಧಾ ಸರ್ವಾರಿಯಾ ವಾರಂಟ್‌ ಜಾರಿ ಮಾಡಿದ್ದಾರೆ. ಈ ಪ್ರಕರಣವನ್ನು ಆ.20ಕ್ಕೆ ಮುಂದೂಡಲಾಗಿದೆ.


ಶಿಯೋಮಿ ಇಂಡಿಯಾದ ಆರೋಪ ಅಲ್ಲಗಳೆದ ಇ.ಡಿ

ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಇ.ಡಿ. ಅಧಿಕಾರಿಗಳು ತಮಗೆ ಬೇಕಾದಂತೆ ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಶಿಯೋಮಿ ಇಂಡಿಯಾ ಆರೋಪ ಮಾಡಿದೆ. ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಜಾರಿನಿರ್ದೇಶನಾಲಯ ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿದೆ.

‘ಶಿಯೋಮಿ ಇಂಡಿಯಾ ಮಾಡಿರುವ ಎಲ್ಲಾ ಆರೋಪಗಳು ಸತ್ಯವಲ್ಲ ಮತ್ತು ಆಧಾರರಹಿತ. ಶಿಯೋಮಿಯ ಅಧಿಕಾರಿಗಳು ಇ.ಡಿ. ಮತ್ತು ಫೆಮಾದ ಎದುರು ಸ್ವಯಂ ಹೇಳಿಕೆ ನೀಡಿದ್ದಾರೆ ಎಂದು ಜಾರಿನಿರ್ದೇಶನಾಲಯ ಹೇಳಿದೆ. ಇ.ಡಿ.ಗೆ ಅನುಕೂಲವಾಗುವಂತೆ ಹೇಳಿಕೆಗಳನ್ನು ನೀಡವಂತೆ ಶಿಯೋಮಿ ಅಧಿಕಾರಿಗಳನ್ನು ಬೆದರಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?